ತುಮಕೂರು


ಸ್ತನ್ಯಪಾನ ಸಪ್ತಾಹದ ಅಂಗವಾಗಿ ತುಮಕೂರು ನಗರ ನಿರ್ವಾಣಿ ಲೇಔಟ್, ಅಂಬೇಡ್ಕರ್ ನಗರ ಭಾಗದ ಗರ್ಭಿಣಿ ಮಹಿಳೆಯರಿಗೆ ಸ್ತನ್ಯಪಾನದ ಅರಿವು ಹಾಗೂ ಮಹಿಳಾ ಜಾಗೃತಿ ಕಾರ್ಯಕ್ರಮವನ್ನು ಇನ್ನರ್ ವ್ಹೀಲ್ ಕ್ಲಬ್ ಆಫ್ ತುಮಕೂರು, ಸಾಂತ್ವನ ಕೇಂದ್ರ ತುಮಕೂರು ನಗರ, ಶಿಶು ಅಭಿವೃದ್ದಿ ಯೋಜನೆ ಅಂಗನವಾಡಿ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮಹಿಳಾ ಸಾಂತ್ವನ ಕೇಂದ್ರದ ಸಮಾಜಕಾರ್ಯಕರ್ತೆ ಪಾರ್ವತಮ್ಮ ರಾಜಕುಮಾರ ಉಪನ್ಯಾಸ ನೀಡಿ ಬಾಣಂತಿ ಹಾಗೂ ಗರ್ಭಿಣಿಯರಲ್ಲಿ ಹಿಂದಿನಿAದಲೂ ಕೆಲವು ನಂಬಿಕೆಗಳು ಉಳಿದುಕೊಂಡು ಬಂದಿವೆ. ಆರೋಗ್ಯಕ್ಕೆ ಅನಾನುಕೂಲವಾದ ಆಚರಣೆಗಳನ್ನು ಕೈಬಿಡಬೇಕು. ಈಗಿನ ಕಾಲಘಟ್ಟದಲ್ಲಿ ನಮ್ಮ ಆರೋಗ್ಯಕ್ಕೆ ಯಾವುದು ಮುಖ್ಯವೋ ಅದನ್ನು ಮಾತ್ರ ಪಾಲಿಸಬೇಕು ಎಂದರು.
ಪೌಷ್ಠಿಕಾAಶವುಳ್ಳ ಆಹಾರ ಸೇವಿಸುವ ಕಡೆಗೆ ಗರ್ಭಿಣಿ ಮಹಿಳೆಯರು, ಬಾಣಂತಿಯರು ಗಮನ ಹರಿಸಬೇಕು. ಆರು ತಿಂಗಳು ತುಂಬವ ತನಕ ಕೇವಲ ಎದೆಹಾಲು ಮಾತ್ರ ಕೊಡಬೇಕು. ಬಹಳಷ್ಟು ಕಡೆಗಳಲ್ಲಿ ಇಂದಿಗೂ ಸಹ ಬಾಟಲಿ ಹಾಲು ಕೊಡುವ ಪದ್ಧತಿ ಇದೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ಹೀಗೆ ಹಾಲು ಕೊಡುವ ವ್ಯವಸ್ಥೆಯನ್ನು ತಪ್ಪಿಸಬೇಕು. ಮಗುವಿಗೆ ತಾಯಿ ಹಾಲೇ ಶ್ರೇಷ್ಠ ಎಂಬುದನ್ನು ಎಲ್ಲರೂ ಮನಗಾಣಬೇಕು. ನಗರ ಪ್ರದೇಶಗಳಲ್ಲಿ ವಿದ್ಯಾವಂತರಿಗೆ ಇದರ ಅರಿವಿದೆ. ಆದರೆ ಅನಕ್ಷರಸ್ಥ ಕುಟುಂಬಗಳು ವಾಸಿಸುವ ಕಡೆ, ಗ್ರಾಮೀಣ ಹಿಂದುಳಿದ ಪ್ರದೇಶಗಳಲ್ಲಿ ಈ ವ್ಯವಸ್ಥೆ ಇನ್ನೂ ಬದಲಾಗಿಲ್ಲ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರ, ಪೋಷಣ್ ಅಭಿಯಾನದ ಉಮಾ ಅವರು ಮಾತನಾಡಿ ಹೆರಿಗೆಯ ನಂತರ ಆಸ್ಪತ್ರೆಯಿಂದ ಹೋಗುವ ಮುನ್ನವೆ ಯಶಸ್ವಿಯಾಗಿ ಹಾಲುಣಿಸಬಲ್ಲೆ ಎಂಬ ಭರವಸೆ ತಾಯಿಗೆ ಬರಬೇಕು. ಈ ಸಂದರ್ಭದಲ್ಲಿ ಕುಟುಂಬದವರ ಸಹಕಾರ ಅತಿಮುಖ್ಯ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದ ಸಂರಕ್ಷಣಾಧಿಕಾರಿ ಕಲ್ಪನ, ಜಯಲಕ್ಷö್ಮಮ್ಮ, ಪೋಷಣ್ ಅಭಿಯಾನದ ಅನುಸೂಯ, ಜಮುನ, ಇನ್ನರ್ ವ್ಹೀಲ್ ಕ್ಲಬ್ ಆಫ್ ತುಮಕೂರು ೩೧೯ ಜಿಲ್ಲೆ ಚಾರ್ಟರ್‌ನ ಅಧ್ಯಕ್ಷೆ ಭಾಗ್ಯಲಕ್ಷಿö್ಮನಾಗರಾಜ್, ಕಾರ್ಯದರ್ಶಿ ಶೀಲಾಮಧು, ಖಜಾಂಚಿ ಚೇತನ ವಿಜಯಕುಮಾರ್ ಹಾಗೂ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದು ಮಾತನಾಡಿದರು. ಇದೇ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಗರ್ಭಿಣಿ ಮಹಿಳೆಯರಿಗೆ ಬೆಡ್‌ಶೀಟ್ ಹಾಗೂ ಹಣ್ಣು ವಿತರಿಸಲಾಯಿತು

(Visited 1 times, 1 visits today)