ತುಮಕೂರು


ಪ್ರಸ್ತುತ ದೇಶದಲ್ಲಿರುವ ಮೀಸಲಾತಿ ವ್ಯವಸ್ಥೆಯಿಂದ ಹೆಚ್ಚು ನರಳುತ್ತಿರುವ ಸಮುದಾಯವೆಂದರೆ ಒಕ್ಕಲಿಗರು.ಹಾಗಾಗಿ ಜನಸಂಖ್ಯಾವಾರು ಮೀಸಲಾತಿ ಹೆಚ್ಚಳವಾಗಬೇಕೆಂಬ ಹೋರಾಟ ತೀವ್ರಗೊಳ್ಳಬೇಕಾಗಿದೆ ಎಂದು ಅರೆ ಶಂಕರ ಮಠದ ಶ್ರೀಸಿದ್ದರಾಮಚೈತನ್ಯ ಮಹಾಸ್ವಾಮೀಜಿಗಳು ತಿಳಿಸಿದ್ದಾರೆ.
ನಗರದ ಬಾಲಭವನದಲ್ಲಿ ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆ ಆಯೋಜಿಸಿದ್ದ ೧೩ನೇ ವರ್ಷದ ಪ್ರತಿಭಾಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಪ್ರವರ್ಗ ೩ಎ ನಲ್ಲಿ ರುವ ಶೇ೪ರ ಮೀಸಲಾತಿಗೆ ೩೨ಕ್ಕೂ ಹೆಚ್ಚು ಜಾತಿಗಳು ಪೈಪೋಟಿ ನಡೆಸಬೇಕಾಗಿದೆ.ಅದರಲ್ಲಿ ನಗರದಲ್ಲಿ ವಾಸವಾಗಿರುವ ಒಕ್ಕಲಿಗರಿಗೆ ಮೀಸಲಾತಿ ಇಲ್ಲ,ಹೀಗೆ ಹತ್ತು ಹಲವರು ಷರತ್ತುಗಳಿವೆ.ಇದರಿಂದ ಅರ್ಥಿಕವಾಗಿ,ಉದ್ಯೋಗ ವಿಭಾಗದಲ್ಲಿ ಸಮುದಾಯದ ದಿನದಿಂದ ದಿನಕ್ಕೆ ತೀವ್ರವಾಗಿ ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ ಮಾತನಾಡಿ,ಪ್ರತಿಭಾ ಪುರಸ್ಕಾರವೆಂಬುದು ಒಂದು ಸ್ಪೂರ್ತಿದಾಯಕ ಕಾರ್ಯಕ್ರಮ. ಸಮುದಾಯದ ಉದ್ದಿಮೆದಾರರು, ಅರ್ಥಿಕ ಸ್ಥಿತಿವಂತರು ಇಂತಹ ಕಾರ್ಯಕ್ರಮಗಳಿಗೆ ಕೈಜೋಡಿಸಬೇಕು.ಹಾಗೆಯೇ ವಿದ್ಯಾರ್ಥಿಗಳು ಸಹ ತಂದೆ,ತಾಯಿಗಳ ಆಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಿಸ ಬೇಕೆಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ತುಮಕೂರು ಶಾಖಾ ಮಠದ ಶ್ರೀಮಂಗಳನಾಥಸ್ವಾಮೀಜಿ ಆಶೀರ್ವಚನ ನೀಡಿ,ಇಂದು ಪ್ರತಿಭಾ ಪುರಸ್ಕಾರ ಪಡೆದ ಎಲ್ಲಾ ಮಕ್ಕಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.ಈ ಪ್ರತಿಭಾಪುರಸ್ಕಾರದ ಹಿಂದೆ ಸಮಾಜ ನಿಮ್ಮಿಂದ ಕೆಲವೊಂದು ನಿರೀಕ್ಷೆಯಲ್ಲಿದೆ ಎಂಬ ಅರಿವು ನಿಮಗಿರಲಿ. ತಂತ್ರಜ್ಞಾನದಿAದ ಹೆಚ್ಚಿನದಾಗಿ ಬೆಳೆಯಲು ಅವಕಾಶವಿದೆ.ಚಂದ್ರಯಾನ-೦೩ರಲ್ಲಿಯೂ ನಮ್ಮ ಸಮುದಾಯದ ೨-೩ ಇಂಜಿನಿಯರ್‌ಗಳಿದ್ದಾರೆ. ನಿಮ್ಮ ಬೆಳೆವಣಿಗಗೆ ಸಮುದಾಯ ಟೊಂಕಕಟ್ಟಿ ನಿಂತಿದೆ. ಮಕ್ಕಳು ಬೆಳೆದಂತೆ ತಂದೆ ತಾಯಿಗಳಿಗೆ ಹೆಚ್ಚಿನ ಜವಾಬ್ದಾರಿ ಇದೆ.ಮಕ್ಕಳ ಚಲನವಲನದ ಮೇಲೆ ಒಂದು ಕಣ್ಣಿಡಿ.ಶಾಲೆಗಳಲ್ಲಿ ಸಿಗುವ ಏಜುಕೇಷನ್ ಜೊತೆಗೆ, ಮನೆಯಲ್ಲಿ ಸಂಸ್ಕಾರ ಕಲಿಸಿ,ಮಕ್ಕಳ ಎದುರು ಅತ್ಯಂತ ಜವಾಬ್ದಾರಿಯಿಂದ ವರ್ತಿಸಿ ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತುಮಕೂರು ಜಿಲ್ಲಾ ಒಕ್ಕಲಿಗರ ನೌಕರರ ವೇದಿಕೆಯ ಅಧ್ಯಕ್ಷ ಅಶ್ವಥ್ ಕುಮಾರ್, ಸಾಧಕರು ಮತ್ತು ಸಾಧನೆ ಮಾಡುವ ಹಂಬಲ ಹೊತ್ತವರ ನಡುವಿನ ಸೇತುವೆಯಾಗಿ ಕಳೆದ ೨೦೦೮ರಿಂದಲೂ ತುಮಕೂರು ಜಿಲ್ಲಾ ಒಕ್ಕಲಿಗರ ಸಂಘ ಕಾರ್ಯನಿರ್ವಹಿಸುತ್ತಿದೆ.ಇಂದು ನಿಮಗೆ ಮಾರ್ಗದರ್ಶನ ಮಾಡಲು ಬಂದು ವೇದಿಕೆ ಮೇಲಿರುವ ಗಣ್ಯರ ರೀತಿಯೇ, ವೇದಿಕೆಯ ಮುಂಭಾಗದಲ್ಲಿರುವ ನೀವುಗಳು, ಮುಂದೊAದು ದಿನ ವೇದಿಕೆಯಲ್ಲಿ ನಿಂತು ಕಿರಿಯರಿಗೆ ಮಾರ್ಗದರ್ಶನ ಮಾಡುವಂತಹ ಗಣ್ಯ ವ್ಯಕ್ತಿಗಳಾಗಬೇಕು ಎಂಬುದು ಈ ಪ್ರತಿಭಾಪುರಸ್ಕಾರದ ಉದ್ದೇಶವಾಗಿದೆ.ಒಳ್ಳೆಯ ಗುರಿಯನ್ನು ಮೈಗೂಡಿಸಿಕೊಂಡು ಉತ್ತೋರೋತ್ತರವಾಗಿ ಬೆಳೆಯುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಓ ಜೆ.ಪ್ರಭು, ಐಎಫ್‌ಎಸ್‌ಅಧಿಕಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಕೆ.ಎಸ್. ಪಿ.ಎಸ್ ಅಧಿಕಾರಿ, ಎಎಸ್‌ಪಿ ಮರಿಯಪ್ಪ,ಜಿಲ್ಲಾ ಖಜಾನೆ ಉಪನಿರ್ದೇಶಕರಾದ ಆರ್.ವಿ.ಉಮಾ ಅವರುಗಳನ್ನು ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಅಧ್ಯಕ್ಷ ಅಶ್ವಥ್ ಕುಮಾರ್, ಸಮಾಜ ಸೇವಕ ನರಸೇಗೌಡ, ಹನುಮಂತರಾಯಪ್ಪ,ನೌಕರರ ಸಂಘದ ಗೌರವಾಧ್ಯಕ್ಷ ಬೆಳ್ಳಿಲೋಕೇಶ್, ಪಾಲಿಕೆ ಸದಸ್ಯ ಜೆ.ಕುಮಾರ್,ಮುಖಂಡರಾದ ಕೃಷ್ಣಯ್ಯ,ಬೋರೇಗೌಡ,ಡಾ.ಟಿ.ಆರ್.ವಿಜಯಕುಮಾರ್, ಸಿ.ನರಸಿಂಹಮೂರ್ತಿ, ಶ್ರೀಮತಿ ನಳಿನಕುಮಾರಿ, ಟಿ.ರಂಗಪ್ಪ, ನಂಜಪ್ಪ,ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ಸಂಘದ ಅಧ್ಯಕ್ಷ ಅಶ್ವಥ ಕುಮಾರ್, ಉಪಾಧ್ಯಕ್ಷರಾದ ಶ್ರೀಮತಿ ರುಕ್ಮಣಿ, ಪುಟ್ಟಸ್ವಾಮಿ, ಕಾರ್ಯದರ್ಶಿ ಜಿ.ಶಿವಣ್ಣ, ಜಿ.ಶಿವರಾಮಯ್ಯ, ಖಜಾಂಚಿ ರಾಮಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು..

(Visited 1 times, 1 visits today)