ತುಮಕೂರು:
ತುಮಕೂರು ವಿವಿಯ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಸಿ.ಜೆ.ಶಿಲ್ಪಾ, ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ಇಲಾಖೆಯ ಲೆಕ್ಕಾಧಿಕಾರಿ ರೋಷನ್ ಹಾಗೂ ಸಿಂಧು ಎನ್. ಸೇರಿದಂತೆ 3 ಮಂದಿಗೆ ಡಾಕ್ಟರೇಟ್ ದೊರೆತಿದೆ.
ಸಿ.ಜೆ.ಶಿಲ್ಪಾ ಅವರು ಡಾ. ಹೆಚ್. ನಾಗಭೂಷಣ ಅವರ ಮಾರ್ಗದರ್ಶನದಲ್ಲಿ ” ಸಿಂಥೆಸಿಸ್ ಆಫ್ ರೇರ್ ಅರ್ತ್ ಆ್ಯಂಡ್ ಟ್ರಾನ್ಸಿಷನ್ ಮೆಟಲ್ ಅಯಾನ್ಸ್ ಡೋಪ್ಡ್ ನ್ಯಾನೋಪಾರ್ಟಿಕಲ್ಸ್: ಸ್ಟ್ರಕ್ಚರಲ್ ಮಾರ್ಫಾಲಾಜಿಕಲ್ ಆ್ಯಂಡ್ ಲ್ಯುಮಿನೆಸನ್ಸ್ ಸ್ಟಡೀಸ್” ವಿಷಯ ಕುರಿತು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪ್ರದಾನ ದೊರೆತಿದ್ದು, ಇತ್ತೀಚೆಗೆ ಜರುಗಿದ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಪಿಹೆಚ್ಡಿ ಪದವಿ ಪ್ರದಾನ ಮಾಡಲಾಯಿತು.
ರೋಷನ್ ಅವರು ಮಂಡಿಸಿದ “ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಸಾರಿಗೆ ಸೇವೆ, ಆಟೋ ಚಾಲಕರ ಮತ್ತು ಪ್ರಯಾಣಿಕರ ಸಂಬಂಧ ಕುರಿತ ಅಧ್ಯಯನ ” ಸಂಶೋಧನಾ ಮಹಾ ಪ್ರಬಂಧಕ್ಕೆ ತಮಿಳುನಾಡಿನ ಭಾರತೀಯಾರ್ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ನೀಡಿದ್ದು, ಬೆಂಗಳೂರಿನ ಆಚಾರ್ಯ ಇನ್ಸಿಟಿಟ್ಯೂಟ್ ಆಫ್ ಮಾನೇಜ್ಮೆಂಟ್ ಅಂಡ್ ಸೈನ್ಸನ್ಸ್ ನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಇ.ಎ. ಪರಮೇಶ್ವರ ಗುಪ್ತ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು.
ಅದೇರೀತಿ ಸಿಂಧು ಎನ್. ಅವರು ಮಂಡಿಸಿದ “ಮ್ಯಾನೇಜ್ಮೆಂಟ್ ಪರ್ಸೆಪ್ಶೆನ್ ಟೂವಡ್ರ್ಸ್ ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ವಿತ್ ಸ್ಪೆಷಲ್ ರೆಫೆರೆನ್ಸ್ ಟೂ ಸಾಫ್ಟ್ವೇರ್ ಕಂಪನೀಸ್ ಇನ್ ಬೆಂಗಳೂರು-ಎ ಸ್ಟಡಿ” ಕುರಿತ ಮಹಾ ಪ್ರಬಂಧಕ್ಕೆ ತಮಿಳುನಾಡಿನ ಭಾರತೀಯಾರ್ ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ನೀಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನ ಎಂ.ಕಾಂ. ವಿಭಾಗದ ಮುಖ್ಯಸ್ಥ ಡಾ. ಇ.ಎ. ಪರಮೇಶ್ವರ ಗುಪ್ತ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು.