ಕೊರಟಗೆರೆ
ದೊಡ್ಡ ಕಾಯಪ್ಪ ದೇವಾಲಯದ ಅರ್ಚಕರ ನೇಮಕಾತಿಯ ವಿಚಾರದಲ್ಲಿ ಮುಜರಾಯಿ ಇಲಾಖೆ, ಸೇವಾಸಮಿತಿ, ಸ್ಥಳೀಯರು ಮತ್ತು ಪ್ರಸ್ತುತ ಅರ್ಚಕರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿ ಗರ್ಭಗುಡಿ ಮತ್ತು ದೇವಾಲಯಕ್ಕೆ ಜೀಗ ಜಡಿಯಲಾಗಿದೆ. ಪವಿತ್ರ ಪುಣ್ಯಕ್ಷೇತ್ರಕ್ಕೆ ಪ್ರತಿನಿತ್ಯ ಆಗಮಿಸುವ ಸಾವಿರಾರು ಭಕ್ತಾಧಿಗಳಿಗೆ ದೊಡ್ಡಕಾಯಪ್ಪನ ದರ್ಶನ ಸೀಗದೇ ನಿರಾಸೆಯಿಂದ ಹಿಂದಿರುಗುತ್ತೀರುವ ಘಟನೆ ಸೋಮವಾರ ನಡೆದಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಕುರಂಕೋಟೆ ಗ್ರಾಮದ ಸುಪ್ರಸಿದ್ದ ಪುಣ್ಯಕ್ಷೇತ್ರ ಶ್ರೀದೊಡ್ಡಕಾಯಪ್ಪ ಸ್ವಾಮಿ ದೇವಾಲಯದಲ್ಲಿ ಇತಿಹಾಸದ ಮೊದಲ ಸಲ ದುರ್ಘಟನೆ ನಡೆದಿದೆ. ಏ.2ರ ಭಾನುವಾರ ಮಧ್ಯಾಹ್ನ ದೊಡ್ಡಕಾಯಪ್ಪ ಸ್ವಾಮಿಯ ಪೂಜೆ ಕೈಂಕರ್ಯ ನಡೆಯುತ್ತೀರುವಾಗಲೇ ಸ್ಥಳೀಯರು, ಸೇವಾಸಮಿತಿ ಮತ್ತು ಅರ್ಚಕರ ನಡುವೆ ಜಗಳವಾಗಿ ಅರ್ಚಕ ಶ್ರೀನಿವಾಸಮೂರ್ತಿ ದೇವಾಲಯಕ್ಕೆ ಬೀಗ ಹಾಕಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಕುರಂಕೋಟೆಯ ದೊಡ್ಡಕಾಯಪ್ಪ ಸ್ವಾಮಿ ದೇವಾಲಯಕ್ಕೆ ಕರ್ನಾಟಕದ ವಿವಿಧ ಕಡೆಗಳಿಂದ ಪ್ರತಿನಿತ್ಯ ಸಾವಿರಾರು ಜನ ಭಕ್ತಾಧಿಗಳು ದರ್ಶನಕ್ಕೆ ಆಗಮಿಸುವ ಮತ್ತು ದೊಡ್ಡಕಾಯಪ್ಪ ಸ್ವಾಮಿಗೆ ಹರಕೆವೊತ್ತ 50ಕ್ಕೂ ಅಧಿಕ ಭಕ್ತರು ದೇವಾಲಯದಲ್ಲೇ ಉಳಿದುಕೊಂಡು ಪ್ರತಿನಿತ್ಯ ಮುಂಜಾನೇ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲು ಅಡಚಣೆ ಆಗಿದೆ. ಅರ್ಚಕರ ನೇಮಕಾತಿ ಮತ್ತು ಬೀಗ ಹಸ್ತಾಂತರದ ವಿಚಾರದಲ್ಲಿ ಮುಜರಾಯಿ ಇಲಾಖೆಯ ವೈಫಲ್ಯದಿಂದ ಈಗ ಭಕ್ತರಿಗೆ ಸಮಸ್ಯೆ ಸೃಷ್ಟಿಯಾಗಿದ್ದು ತಕ್ಷಣ ಜಿಲ್ಲಾಧಿಕಾರಿ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.