ತುಮಕೂರು


ಡಾ. ಸಿದ್ಧಗಂಗಯ್ಯ ಹೊಲತಾಳು ನಾಡು ಸುತ್ತಿ ಕೋಶ ರಚಿಸುತ್ತಾ ಸಾಹಿತ್ಯಲೋಕಕ್ಕೆ ತಮ್ಮ ಬದುಕು ಸಮರ್ಪಿಸುತ್ತಿದ್ದಾರೆ. ಸಾವಯವ ಕೃಷಿಯಲ್ಲಿನ ವಿಶೇಷ ಆಸಕ್ತಿ ಹಾಗೂ ಕೃತಿರಚನೆಯಲ್ಲಿ ತೊಡಗಿರುವ ಅವರ ಹುರುಪು ಮತ್ತು ಉತ್ಸಾಹ ಪ್ರೇರಣಾಶೀಲವಾದದ್ದು ಎಂದು ಲೇಖಕ ಡಾ. ವಡ್ಡಗೆರೆ ನಾಗರಾಜಯ್ಯ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಅಧ್ಯಯನ ಕೇಂದ್ರವು ಆರೆಂಜ್ ಬುಕ್ಸ್ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ. ಸಿದ್ಧಗಂಗಯ್ಯ ಹೊಲತಾಳು ಅವರ ‘ಒಳನಾಡಿನ ಒಡನಾಟ’ ಕೃತಿ ಲೋಕಾರ್ಪಣೆ-ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕೃಷಿ ಕ್ಷೇತ್ರಕ್ಕೆ ತಂದೊಡ್ಡಿರುವ ವಿಪತ್ತು ಕೇವಲ ಕನ್ನಡ ನೆಲದ ಒಳನಾಡಿಗμÉ್ಟೀ ಅಲ್ಲದೆ ಇಡೀ ದೇಶವನ್ನೇ ವ್ಯಾಪಿಸಿದೆ. ಮುಂದಿನ ದಿನಗಳಲ್ಲಿ ಈ ಸ್ಥಿತ್ಯಂತರ ಯಾವ ಹಂತ ತಲುಪುವುದೋ ಎಂಬ ಆತಂಕವಿದೆ ಎಂದರು.
ಕೃತಿ ಲೋಕಾರ್ಪಣೆ ನೆರವೇರಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು, ಮುಂದಿನ ದಿನಗಳಲ್ಲಿ ವಿವಿಯ ವಿದ್ಯಾರ್ಥಿಗಳೊಂದಿಗೆ ಸಿದ್ಧಗಂಗಯ್ಯ ಅವರ ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡುವ ಚಿಂತನೆಯಿದೆ. ಅವರ ‘ಒಳನಾಡಿನ ಒಡನಾಟ’ ಕೃತಿ ನಮ್ಮ ವಿವಿಯಲ್ಲಿ ಬಿಡುಗಡೆಯಾಗಿರುವುದು ಸಂತಸದ ವಿಚಾರ. ಕೃತಿಯು ಹೆಚ್ಚಿನ ಪ್ರಸರಣೆಯ ಮೂಲಕ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕೃತಿ ಕುರಿತು ಮಾತನಾಡಿದ ಲೇಖಕ ಬಿ. ಎಸ್. ಜಯಪ್ರಕಾಶ ನಾರಾಯಣ, ‘ಒಳನಾಡಿನ ಒಡನಾಟ’ ಕೃತಿ ಪ್ರವಾಸ ಕಥನ ಎನ್ನುವುದಕ್ಕಿಂತಲೂ ಮಿಗಿಲಾಗಿ ನಮ್ಮ ನೆಲದ ಕೃಷಿ ಸಂಸ್ಕøತಿಯ ಒಂದು ದಾಖಲೀಕರಣವಾಗಿದೆ. ಸಾಹಿತ್ಯ ಪ್ರಕಾರದಲ್ಲಿ ಇದೊಂದು ವಿಶೇಷವಾದ ಕೃತಿ. ಇದರ ಪ್ರಾಮುಖ್ಯತೆ ಮತ್ತು ಮಹತ್ವ ಭವಿಷ್ಯದಲ್ಲಿ ಹೆಚ್ಚು ಪ್ರಚುರವಾಗುತ್ತದೆ ಎಂದು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಇಂಗ್ಲಿμï ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಜ್ಯೋತಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಆವಿμÁ್ಕರಗಳು ಹೆಚ್ಚುತ್ತಿರುವಂತೆ ಪರಿಸರ ಹಾನಿ ಮತ್ತು ಅಸಮತೋಲನವೂ ಹೆಚ್ಚಾಗುತ್ತಿದೆ. ನಮ್ಮ ಕಾಳಜಿಯಿಂದ ಅಸಮತೋಲನವನ್ನು ಸರಿಪಡಿಸಬೇಕು. ‘ಒಳನಾಡಿನ ಒಡನಾಟ’ ಕೃತಿಯಲ್ಲಿನ ಲೇಖನಗಳು ಮತ್ತು ಸಂದರ್ಶನಗಳು ಅತ್ಯಂತ ರಮ್ಯವಾಗಿರುವ ಬರೆಹಗಳು ಎಂದು ತಿಳಿಸಿದರು.
ಕೃತಿಯ ಕುರಿತು ವಿದ್ಯಾರ್ಥಿಗಳು ಮತ್ತು ನಾಗರಿಕರೊಂದಿಗೆ ಸಂವಾದ ನಡೆಯಿತು.
ಕಾರ್ಯಕ್ರಮದಲ್ಲಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪೆÇ್ರ. ಅಣ್ಣಮ್ಮ, ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ನಾಗಭೂಷಣ್, ಡಾ. ಪಿ. ಎಂ. ಗಂಗಾಧರಯ್ಯ, ಆರೆಂಜ್ ಬುಕ್ಸ್ ಸಂಸ್ಥೆಯ ಪ್ರಕಾಶಕ ಶಂಕರಾನಂದ ಎಂ. ವಿ., ಸಮರ್ಥ್ ಫೌಂಡೇಷನ್‍ನ ರಾಣಿ ಚಂದ್ರಶೇಖರ್ ಹಾಗೂ ನಿಕಟಪೂರ್ವ ಸಿಂಡಿಕೇಟ್ ಸದಸ್ಯ ರಾಜು ಭಾಗವಹಿಸಿದ್ದರು.

(Visited 8 times, 1 visits today)