ಕೊರಟಗೆರೆ :

ನಮ್ಮ ರಾಜ್ಯದಲ್ಲಿ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಗೃಹಲಕ್ಷ್ಮೀ ಯೋಜನೆ ಸಹಕಾರಿಯಾಗಲಿದೆ ಎಂದು ತಹಶಿಲ್ದಾರ್ ಮುನಿಶಾಮಿರೆಡ್ಡಿ ತಿಳಿಸಿದರು.
ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದ ಸಮುದಾಯದ ಭವನದಲ್ಲಿ ಬುಧವಾರ ರಾಜ್ಯ ಸರ್ಕಾರದ ಮಹಾತ್ವಕಾಂಕ್ಷೆ ಗೃಹಲಕ್ಷ್ಮೀ ಯೋಜನೆಯ ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಹೆಚ್ಚು ಗೃಹಲಕ್ಷ್ಮೀ ನೋಂದಣಿ ಕಾರ್ಯ ನಡೆದಿದೆ, ಈ ಹಣವನ್ನು ಸದುದ್ದೇಶಕ್ಕೆ ಬಳಸಿಕೊಳ್ಳಿ ಎಂದು ಮಹಿಳೆಯರು ಆರ್ಥಿಕವಾಗಿ ಸದೃಡರಾಗಬೇಕು ಎಂದು ತಿಳಿಸಿದರು.
ತಾ.ಪಂ ಇಓ ಡಾ. ದೊಡ್ಡಸಿದ್ದಯ್ಯ ಮಾತನಾಡಿ ಈ ಸರ್ಕಾರದ ಯೋಜನೆಯನ್ನು ಎಲ್ಲಾರೂ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಇಡೀ ತಾಲ್ಲೂಕಿನಲ್ಲಿ ಎಲ್ಲರಿಗೂ ನೋಂದಣಿ ಮಾಡಿ ಈ ಯೋಜನೆಯ ಬಳಕೆಗೆ ಅನುಕೂಲ ಕಲ್ಪಿಸಲಾಗಿದ್ದು, ಇದನ್ನು ಉತ್ತಮ ಕೆಲಸಕ್ಕೆ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ಮಾನ್ಯ ಗೃಹಸಚಿವರ ತವರು ಕ್ಷೇತ್ರದಲ್ಲಿ ಸುಮಾರು ಪಟ್ಟಣ ಹಾಗೂ ೨೪ ಗ್ರಾಮ ಪಂಚಾಯತಿಗಳು ಒಳಗೊಂಡAತೆ ೪೨,೭೭೧ ಪಡಿತರ ಕಾರ್ಡ್ ಹೊಂದಿದ್ದು, ಶೇ. ೯೮.೨೨%ರಷ್ಟು ನೋಂದಣಿಯಾಗಿ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿದ್ದು ಸುಮಾರು ೯ಕೋಟಿ ಅಧಿಕ ನಮ್ಮ ತಾಲೂಕಿನ ಮಹಿಳೆಯರು ಆರ್ಥಿಕವಾಗಿ ಮುನ್ನೆಡೆಯಲು ಈ ಯೋಜನೆ ಸಹಕಾರಿಯಾಗಿದೆ.
ಕೊರಟಗೆರೆ ಪಟ್ಟಣದ ಶ್ರೀ ಕಟ್ಟೆಗಣಪತಿ ಸಮುದಾಯ ಭವನ ಹಾಗೂ ಸಾದರ ಸಮುದಾಯ ಭವನದಲ್ಲಿ ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಕಾರ್ಯಕ್ರಮ ನಡೆಯಿತು.
ಮಹಿಳೆಯರು ಸ್ವಾವಲಂಬಿಗಳಾಗಿ ಜೀವನವನ್ನು ನಡೆಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂಬ ಹಿತದೃಷ್ಟಿಯಿಂದ ರಾಜ್ಯದಲ್ಲಿ ಈ ಯೋಜನೆ ರೂಪಿಸಲಾಗಿದೆ.
*ಬಾಕ್ಸ್ ಬಳಸಿ*
ಜಿಲ್ಲೆಯ ೨ ಕಡೆ ಸಿಎಂ ಸಿದ್ದರಾಮಯ್ಯ ರವರೊಂದಿಗೆ ನೇರ ಮಾತುಕತೆಗೆ ಗೃಹಿಣಿಯರಿಗೆ ಅವಕಾಶ ಮಾಡಿಕೊಡಲಾಗಿದ, ಗೃಹ ಸಚಿವರ ಕ್ಷೇತ್ರದವಾದ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದಲ್ಲಿ ಅನುಕೂಲ ಮಾಡಿಕೊಟ್ಟಿದೆ. ಗೃಹಲಕ್ಷ್ಮಿಯರು ಕಾರ್ಯಕ್ರಮ ವೀಕ್ಷಣೆ ಮಾಡುವುದರ ಜೊತೆಗೆ ರಾಜ್ಯದ ನಾಯಕರ ಜೊತೆ ಮಾತನಾಡಲು ಅವಕಾಶ ಕಲ್ಪಿಸಿರುವುದು ಸಂತಸದ ವಿಷಯ ಎಂದು ವ್ಯಕ್ತಪಡಿಸಿದರು…
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮುನಿಶಾಮಿರೆಡ್ಡಿ, ತಾ.ಪಂ ಇಓ ದೊಡ್ಡಸಿದ್ದಯ್ಯ, ಶಬೀರ್ ಅಹಮ್ಮದ್, ಜಿಲ್ಲಾಕೃಷಿ ಇಲಾಖೆ ಅಶೋಕ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಪೃಥ್ವಿಭಾ, ಗ್ರಾ.ಪಂ ಉಪಾಧ್ಯಕ್ಷ ರಾಮು, ಕೃಷಿ ಇಲಾಖೆ ನಾಗರಾಜು, ಕವಿತಾ, ಸಿಡಿಪಿಓ ಅಂಬಿಕಾ, ಗ್ರಾ.ಪಂ ಸದಸ್ಯ, ಜಿ.ಪಂ ಇಲಾಖೆ, ತಾಲ್ಲೂಕಿನ ಎಲ್ಲಾ ಇಲಾಖೆಯ ಸಿಬ್ಬಂದಿ ವರ್ಗದವರು ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.

(Visited 1 times, 1 visits today)