ಹುಳಿಯಾರು: ಬಾಳಲ್ಲಿ ಸ್ವಲ್ಪವಾದರೂ ನೆಮ್ಮದಿ ಹಾಗೂ ಶಾಂತಿಯ ಬದುಕಿಗೆ ದೇವರ ಅರಿವು ಮತ್ತು ಧರ್ಮದ ಆಚರಣೆಯು ಅವಶ್ಯಕತೆ ಬೇಕಾಗುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ಹುಳಿಯಾರು ಸಮೀಪದ ದೊಡ್ಡಎಣ್ಣೆಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಆಧ್ಯಾತ್ಮಿಕ-ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಶಾಂತಿ-ಸಮಾಧಾನ ದೊರೆಯಲಿ ಎಂದು ಹೇಳಿದರು.

ಎಲ್ಲಾ ಧರ್ಮಗಳಲ್ಲೂ ಧರ್ಮದ ಮೌಲ್ಯಗಳು ಏನಿದ್ದಾವೋ ಅವುಗಳ ಪರಿಪಾಲನೆಯಿಂದ ಜೀವ ಜಗತ್ತು ಬಹಳ ಸುಖಮಯವಾಗಿ ನೆಮ್ಮದಿಯಿಂದ ಬಾಳಿ ಬದುಕಲಿಕ್ಕೆ ಸಾಧ್ಯವಾಗುತ್ತದೆ. ಆದರೆ ಇಂದು ಮನುಷ್ಯ ದೇವರು ಮತ್ತು ಧರ್ಮದ ಬಗ್ಗೆ ನಿರಾಸಕ್ತಿ ತಾಳಿರುವುದರಿಂದ ಸಿರಿ ಸಂಪತ್ತುಗಳಿದ್ದರೂ ಶಾಂತಿ ನೆಮ್ಮದಿ ಇಲ್ಲವಾಗಿದೆ. ಗುರುವಿನ ಮೂಲಕ ಶಿವನನ್ನು ಅರಿತು ಬಾಳಿದರೆ ಜೀವನದಲ್ಲಿ ಉನ್ನತಿಯನ್ನು ಪಡಿಯಲಿಕ್ಕೆ ಸಾಧ್ಯವಾಗುತ್ತದೆ ಎಂದರು.

ಗೋವಿಂದ ಭಟ್ಟರು ಬ್ರಾಹ್ಮಣ ಕುಲದಲ್ಲಿ ಹುಟ್ಟಿದಂತವರು, ಶರೀಫ ಸಾಹೇಬರು ಇಸ್ಲಾಂ ಧರ್ಮದಲ್ಲಿ ಹುಟ್ಟಿದಂತವರು ಆದರೆ ಇವರಿಬ್ಬರ ಸಂಪರ್ಕ ಸಾಮರಸ್ಯ ಎಷ್ಟಿತ್ತು ಎಂದರೆ ಬೆನ್ನು ಹೊಟ್ಟೆಯ ಸಂಬAಧದAತೆ ಗಟ್ಟಿಯಾಗಿತ್ತು. ಹೀಗಿರುವಂತ ಸಂದರ್ಭದಲ್ಲಿ ಗುರು ಕೃಪಾ ಮಾಡಿದರೆ ಮನುಷ್ಯನ ಜೀವನ ಹೇಗೆ ಉಜ್ವಲಗೊಳ್ಳುತ್ತಿದೆ ಎನ್ನುವುದಕ್ಕೆ ಶರೀಫ ಸಾಹೇಬರ ಜೀವನದ ಘಟನೆಗಳೇ ಸಾಕ್ಷಿ ಎಂದರು.

ಕಾರ್ಯಕ್ರಮದಲ್ಲಿ ದೊಡ್ಡಮೇಟಿಕುರ್ಕೆ ಬೂದಿಹಾಳ್ ವಿರಕ್ತಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ, ಕಂಬದದೇವರಳ್ಳಿ ಮಠದ ಶ್ರೀ ಉಜ್ಜಿನೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಕಲ್ಲೇಶ್ವರ ಜೀರ್ಣದ್ದಾರ ಸಮಿತಿ ಅಧ್ಯಕ್ಷರು ನಾಗರಾಜ್, ಕಾರ್ಯದರ್ಶಿ ಪರಮೇಶ್ವರಪ್ಪ, ಖಜಾಂಚಿ ಬೊಮ್ಮೇನಹಳ್ಳಿ ಪರಮಶಿವಯ್ಯ, ಚಿಕ್ಕಎಣ್ಣೆಗೆರೆ ಕಲ್ಲೇಶಪ್ಪ, ಕಾನಿಕೆರೆವೀರಭದ್ರಪ್ಪ, ಸಬ್ಬೇನಹಳ್ಳಿ ನಾಗರಾಜು, ದೊಡ್ಡಎಣ್ಣೆಗೆರೆ ನಟರಾಜ ಅರಸ್, ಕಿರಣ್ ಕುಮಾರ್, ಜೆಸಿಪುರ ನಾಗರಾಜ್, ಹೊಸದುರ್ಗ ಪ್ರಕಾಶ್ ಮೂರ್ತಿ ಉಪಸ್ಥಿತರಿದ್ದರು.

(Visited 1 times, 1 visits today)