ತುಮಕೂರು


ಇಲ್ಲಿನ ಜಿಲ್ಲಾ ಪಂಚಾಯತ್ ಆವರಣದಲ್ಲಿ ೫೭ನೇ ಅಂತಾರಾಷ್ಟಿçÃಯ ಸಾಕ್ಷರತಾ ದಿನವನ್ನು ಆಚರಿಸಲಾಯಿತು.
ಜಿಲ್ಲಾ ಪಂಚಾಯತ್, ಜಿಲ್ಲಾ ಲೋಕಶಿಕ್ಷಣ ಇಲಾಖೆ ಹಾಗೂ ಡಯಟ್ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟಿçÃಯ ಸಾಕ್ಷತಾ ದಿನಾಚರಣೆ ಪ್ರಯುಕ್ತ ಜಿ.ಪಂ. ಸಿಇಓ ಜೆ. ಪ್ರಭು ಅವರು ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಶಿಕ್ಷಣ ಮನುಷ್ಯನ ಮೂಲಭೂತ ಹಕ್ಕು. ಇದರ ಭಾಗವಾಗಿರುವ ಸಾಕ್ಷರತೆ ಬಹಳ ಮುಖ್ಯ. ಕಳೆದ ೧೦ ವರ್ಷದಲ್ಲಿ ಪ್ರತಿ ವರ್ಷ ಕನಿಷ್ಠ ೮ ರಿಂದ ೧೦ ಸಾವಿರ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಕೆಲಸವನ್ನು ಜಿ.ಪಂ., ಗ್ರಾ.ಪಂ. ವತಿಯಿಂದ ಮಾಡಲಾಗುತ್ತಿದೆ ಎಂದರು.
ಭಾರತ ಸದೃಢವಾದ ಸಾಕ್ಷರತಾ ರಾಷ್ಟçವಾಗುವವರೆಗೆ ಈ ಕೆಲಸ ಮುಂದುವರೆಯುತ್ತದೆ. ಜ್ಞಾನದಿಂದ ಹೆಚ್ಚು ಹೆಚ್ಚು ಕೌಶಲ್ಯಭರಿತರಾಗಬೇಕು ಎಂಬ ಆಶಯ ಈ ಸಾಕ್ಷರತಾ ದಿನಾಚರಣೆಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಸಾಕ್ಷರತೆ ಹೊಂದಿರುವವರು ಸದೃಢವಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳಲಿ ಎಂದು ಅವರು ಆಶಿಸಿದರು.
ವಯಸ್ಕರ ಶಿಕ್ಷಣ ಇಲಾಖೆಯ ಲಕ್ಷಿ÷್ಮ ಸಿ.ಎಂ. ಮಾತನಾಡಿ, ಈ ಬಾರಿ ಅಂತಾರಾಷ್ಟಿçÃಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಮೂರು ಕಾರ್ಯಕ್ರಮಗಳನ್ನು ಹಮ್ಮಿಳ್ಳಲಾಗಿದೆ. ನವಭಾರತ ಸಾಕ್ಷರತಾ ಕಾರ್ಯಕ್ರಮ, ಸಾವಿರ ಗ್ರಾಮ ಪಂಚಾಯ್ತಿಗಳನ್ನು ಸಂಪೂರ್ಣ ಸಾಕ್ಷರರನ್ನಾಗಿಸುವ ಗುರಿ ಹೊಂದಲಾಗಿದೆ. ಈ ವರ್ಷ ೫೫ ಸಾವಿರ ಅನಕ್ಷರಸ್ಥರನ್ನು ಸಾಕ್ಷರನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಸಾಕ್ಷರತಾ ಕಾರ್ಯಕರ್ತರಾದ ಉಚ್ಛಾಚಾರ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ, ಡಯಟ್ ಪ್ರಾಂಶುಪಾಲರಾದ ಮಂಗಳಗೌರಮ್ಮ, ನೋಡಲ್ ಅಧಿಕಾರಿ ನಂಜುAಡಪ್ಪ. ಶಿಕ್ಷಣಾಧಿಕಾರಿ ಮಾಧವರೆಡ್ಡಿ, ಸಿಆರ್‌ಪಿಗಳು, ಸಾಕ್ಷರತಾ ಪ್ರೇಮಿಗಳು ಭಾಗವಹಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

(Visited 1 times, 1 visits today)