ತುಮಕೂರು:
ಎಟಿಎಮ್ ಮಿಷಿನ್‍ಗಳಿಗೆ ಸ್ಕಿಮ್ಮಿಂಗ್ ಮಿಷನ್ ಅಳವಡಿಸಿ ನಕಲಿ ಎಟಿಎಮ್ ಕಾರ್ಡ್ ತಯಾರಿಸಿಕೊಂಡು ಹಣ ಮಾಡುತ್ತಿದ್ದ ಇಬ್ಬರು ವಿದೇಶಿ ನಯವಂಚಕರನ್ನು ಬಂಧಿಸಲಾಗಿದೆ ಎಂದು ಐಜಿಪಿ ಸೀಮಂತ್‍ಕುಮಾರ್‍ಸಿಂಗ್ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತಾವು ಇದ್ದ ಸ್ಥಳದಿಂದಲೇ ಡೂಪ್ಲಿಕೇಟ್ ಎಟಿಎಂ ಬಳಸಿ ಸಾರ್ವಜನಿಕರ ಹಣವನ್ನು ದರೋಡೆ ಮಾಡುತ್ತಿದ್ದ ಅಂತರಾಷ್ಟ್ರೀಯ ಆರೋಪಿಗಳನ್ನು ಬಂಧಿಸುವಲ್ಲಿ ತುಮಕೂರಿನ ಸಿಇಎನ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದೇ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸಾರ್ವಜನಿಕರು ತಮ್ಮ ಖಾತೆಯಲ್ಲಿದ್ದ ಹಣವನ್ನು ಯಾರೋ ದೋಚಿದ್ದಾರೆ ಎಂದು ಪೊಲೀಸ್ ಸ್ಟೇಷನ್‍ಗೆ ದೂರು ನೀಡಿದ್ದರು. ಈ ಭೀಮಸಂದ್ರದ ಇಂಡಿಯಾ 1 ಎಟಿಎಂ, ಕುಣಿಗಲ್ ಟೌನ್‍ನ ಕೆನರಾ ಬ್ಯಾಂಕ್ ಎಟಿಎಮ್‍ಗಳಲ್ಲಿ ಗ್ರಾಹಕರ ಹಣವನ್ನು ದೋಚಿದ್ದರು. ಕುಣಿಗಲ್ ಎಟಿಎಮ್‍ನಲ್ಲಿ 42 ಪ್ರಕರಣ, ಭೀಮಸಂದ್ರ ಎಟಿಎಮ್‍ನಿಂದ 16, ನಿಟ್ಟೂರು ಎಟಿಎಮ್‍ನಿಂದ2 ಒಟ್ಟು 60 ವಂಚನೆ ಪ್ರಕರಣಗಳು ದಾಖಲಾಗಿದ್ದು ಗ್ರಾಹಕರಿಂದ 25 ಲಕ್ಷಕ್ಕೂ ಅಧಿಕ ಮೊತ್ತ ವಂಚನೆಯಾಗಿತ್ತು.
ವಂಚಕರುಚೆನೈ, ದೆಹಲಿ, ಬಾಂಬೆ, ತಮಿಳುನಾಡು ಇತರೆ ಕಡೆಗಳ ವಿವಿಧ ಎಟಿಎಮ್‍ಗಳಲ್ಲಿ ಹಣವನ್ನು ಡ್ರಾ ಮಾಡಿಕೊಂಡಿರುವುದು ತನಿಖೆಯಲ್ಲಿ ತಿಳಿದು ಬಂದಿರುತ್ತದೆ. ಈ ವಂಚಕರ ತಂಡವನ್ನು ಪತ್ತೆ ಮಾಡಲು ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಶೇಷಾದ್ರಿ ಎಂ.ವಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ವಿಶೇಷ ತಂಡ ಕಾರ್ಯಪ್ರವೃತ್ತರಾಗಿ ಆರೋಪಿಗಳು ಸಂಚರಿಸಿದ ಜಾಗಗಳು ಹಾಗೂ ಹಣ ಡ್ರಾ ಮಾಡಿದ ಜಾಗಗಳು ಹಾಗೂ ಮಾರ್ಗದಲ್ಲಿ ಸಿಗುವ ಟೋಲ್‍ಗಳಲ್ಲಿ ತಾಂತ್ರಿಕವಾಗಿ ಮಾಹಿತಿ ಸಂಗ್ರಹಿಸಿ ಆರೋಪಿಗಳ ವಿವರ ಹಾಗೂ ಆರೋಪಿಗಳು ಸಂಚರಿಸುತ್ತಿದ್ದ ವಾಹನದ ಬಗ್ಗೆ ಮಾಹಿತಿ ಸಂಗ್ರಹಸಿಕೊಂಡು ದರೋಡೆಯಲ್ಲಿ ಭಾಗಿಯಾಗಿದ್ದರು.
ಕಂಪಾಲ ಉಗಾಂಡಾ ಮೂಲದ ಐವಾನ್ ಕಾಬೋಂಗೆ ಬಿನ್ ಸೆರ್ಡಿಕ್ ಡಾಂಬಾ, ನೈರೋಬಿ, ಕೀನ್ಯ ಮೂಲದ ಲಾರೆನ್ಸ್ ಮಾಕಾಮು ಬಿನ್ ಜಾನ್ ಮಕಾಮು ಇವರುಗಳು ಬಂಧಿತ ಆರೋಪಿಗಳು. ಇನ್ನು ಆರೋಪಿಗಳ ವಿಚಾರಣೆ ವೇಳೆ ದೆಹಲಿಯ ಜೇಮ್ಸ್ ಸೌತ್ ಆಫ್ರಿಕಾ ವಾಸಿ ಹಾಗೂ ತನ್ನ ಗೆಳತಿ ಜುಯತ್ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದ್ದು ಉಳಿದವರ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿದೆ ಎಂದರು. ದಸ್ತಗಿರಿ ಮಾಡಿದ ಆರೋಪಿಗಳಿಂದ 20 ನಕಲಿ ಎಟಿಎಮ್ ಕಾರ್ಡ್‍ಗಳು, ಸ್ಕಿಮ್ಮಿಂಗ್ ಸಾಧನಗಳು ಹಾಗೂ ಇವರ ಸಂಚರಿಸುತ್ತಿದ್ದ ಆಐ3ಅಂಂ4585 ಊಔಓಆಂ ಅಖಗಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಶಿಕೃಷ್ಣ, ಮಾನ್ಯ ಎಎಸ್‍ಪಿ ಉದೇಶ್ ಟಿ.ಜಿ., ಡಿಎಸ್‍ಪಿ, ಡಿಸಿಆರ್‍ಬಿಸೂರ್ಯನಾರಾಯಣರಾವ್ ಇವರುಗಳ ಮಾರ್ಗದರ್ಶನದಲ್ಲಿ ತುಮಕೂರು ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಶೇಷಾದ್ರಿ ಎಂ.ವಿ.ರವರು ಸಿಬ್ಬಂದಿಗಳಾದ ಅಯೂಬ್ ಖಾನ್, ರಮೇಶ್, ಹರೀಶ್ ಮತ್ತು ಕುಣಿಗಲ್ ಪೊಲೀಸ್ ಠಾಣೆಯ ಮಂಜುನಾಥ, ಜಿಲ್ಲಾ ಪೊಲೀಸ್ ಕಚೇರಿಯ ರಮೇಶ್ ಹಾಗೂ ಜೀಪ್ ಚಾಲಕ ಗಿರೀಶ್‍ರಗಳ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದರಿ ಪತ್ತೆ ತಂಡವನ್ನು ಐಜಿಪಿ ಸೀಮಂತ್‍ಕುಮಾರ್‍ಸಿಂಗ್‍ರವರು ಅಭಿನಂದಿಸಿದರು.