ಕೊರಟಗೆರೆ:
ಶೋಷಿತ ಸಮಾಜ ಗಳನ್ನು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಕೊಂಡೊಯ್ಯಬೇಕಾಗಿರುವುದು ಸರ್ಕಾರ ಗಳ ಜವಾಬ್ದಾರಿ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ.ಜಿ ಪರಮೇಶ್ವರ್ ತಿಳಿಸಿದರು.
ಅವರು ಪಟ್ಟಣದಲ್ಲಿ ಕೊರಟಗೆರೆ ತಾಲ್ಲೂಕು ಸವಿತಾಸಮಾಜದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ಸಮಾಜದಲ್ಲಿ ಕಡಿಮೆ ಜನಸಂಖ್ಯೆ ಹೊಂದಿರು ಶೋಷಿತವರ್ಗಗಳಿಗೆ ಯಾವುದೇ ಸರ್ಕಾರವಿದ್ದರು ಸಹ ಅವುಗಳಿಗೆ ಸಮಾಜಿಕ ನ್ಯಾಯವನ್ನು ಒದಗಿಸಬೇಕು. ತಾವು ಉಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸವಿತಾ ಸಮಾಜಕ್ಕೆ ನಿಗಮ ಮಂಡಳಿಯನ್ನು ಮಾಡಲಾಯಿತು. ಹಾಗೂ ಸವಿತಾ ಸಮಾಜದ ನಾಯಕರಾದ ಎಂ.ಸಿ ವೇಣುಗೋಪಾಲ್‍ರವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಪಕ್ಷವು ಮಾಡಿತು. ಸವಿತಾ ಸಮಾಜವು ಸಹ ಸಮಾಜಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಶೋಷಿತ ವರ್ಗಗಳಲ್ಲಿ ಸಹ ಒಂದಾಗಿದೆ. ಇಂತಹ ಸಮಾಜಗಳಿಗೆ ಪೂರ್ಣಪ್ರಮಾಣದ ಮುಖ್ಯ ವಾಹಿನಿಗೆ ತರುವ ಯೋಜನೆಗಳನ್ನು ಸರ್ಕಾರಗಳು ಕೈಗೊಳ್ಳಬೇಕಿದೆ. ಸವಿತಾಸಮಾಜದ ಮತ್ತು ಪಕ್ಷದ ನಾಯಕರಾದ ವೀರಪ್ಪಮೋಯ್ಲಿ ರವರನ್ನು ಮುಖ್ಯಮಂತ್ರಿ ಮಾಡಿದ ಹೆಗ್ಗಳಿಕೆ ಕಾಂಗ್ರೇಸ್ ಪಕ್ಷದಾಗಿದ್ದೆ. ಇಂತಹ ಅನೇಕ ಹಿಂದುಳಿದ ಸಣ್ಣ ಸಮಾಜಗಳಿಗೆ ಸೌಲತ್ತು ಮತ್ತು ಸೌಲಭ್ಯಗಳನ್ನು ನೀಡುವುದರೊಂದಿಗೆ ಸಮಾಜದ ಪ್ರತಿಯೊಬ್ಬರು ವಿದ್ಯಾವಂತರಾದರೆ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದು ಹಾಗೂ ಮುಖ್ಯ ಹುದ್ದೆಗಳನ್ನು ಹೊಂದಿ ಆರ್ಥಿಕವಾಗಿ ಸದೃಡವಾಗಬಹುದು ಎಂದ ಅವರು ಕೊರಟಗೆರೆ ಪಟ್ಟಣದಲ್ಲಿ ಸವಿತಾಸಮಾಜಕ್ಕೆ ಸರ್ಕಾರದಿಂದ ನಿವೇಷನ ಮಂಜೂರು ಮಾಡುವುದರೊಂದಿಗೆ ಕಟ್ಟಡ ನಿರ್ಮಾಣಕ್ಕೆ ಶಾಸಕ ನಿಧಿಯಿಂದ 10.00 ಲಕ್ಷ ರೂಗಳನ್ನು ಹಾಗೂ ಎಂಎಲ್‍ಸಿ ವೇಣುಗೋಪಾಲ್ ರವರಿಂದ 5.00 ಲಕ್ಷ ರೂಗಳನ್ನು ಮಂಜೂರು ಮಾಡಿಸಲಾಯಿತು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ತಾಲ್ಲೂಕು ಸವಿತಾಸಮಾಜದ ಅಧ್ಯಕ್ಷ ಗಂಗರಾಜು, ಕಾರ್ಯಾದ್ಯಕ್ಷ ಗ್ರಾ.ಪಂ ಸದಸ್ಯ ಗೌರಿಶಂಕರ್, ನಿರ್ದೇಶಕರಾದ ರಾಘವೇಂದ್ರ, ರವಿಚಂದ್ರ, ಜಯರಾಂ, ರಾಮಚಂದ್ರ, ರವಿಕುಮಾರ್, ರವೀಂದ್ರ, ವೇಣು ಸೇರಿದಂತೆ ಇತರರು ಹಾಜರಿದ್ದರು.