ತುಮಕೂರು:
ಕ್ವಿಟ್ ಇಂಡಿಯಾ ಚಳುವಳಿ ಯಲ್ಲಿ ತುಮಕೂರು ಜಿಲ್ಲೆಯ ಪಾತ್ರ ಮಹತ್ವ ದ್ದಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದರು.
ನಗರದ ಸ್ವಾತಂತ್ರ್ಯ ಚೌಕದಲ್ಲಿಂದು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಾಗೂ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ನೆನಪಿನ ಅಂಗವಾಗಿ ಹಮ್ಮಿಕೊಂಡಿದ್ದ ಗಾಂಧೀಜಿಯವರಿಗೆ ‘ನುಡಿನಮನ’ ಕಾರ್ಯಕ್ರಮದಲ್ಲಿ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಉಪ್ಪಿನ ಸತ್ಯಾಗ್ರಹದಲ್ಲಿ ಮುಂದಾಳತ್ವ ವಹಿಸಿದ್ದ ಗಾಂಧೀಜಿ ಅವರಿಗೆ ನಮನ ಸಲ್ಲಿಸುವ ಮೂಲಕ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ರಾಷ್ಟ್ರಾದ್ಯಂತ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯ ಕ್ರಮದ ಭಾಗವಾಗಿ ಪ್ರತಿ ವಾರವೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ವೇಳೆ ಮಹಾನಗರ ಪಾಲಿಕೆ ಮೇಯರ್ ಬಿ.ಜಿ. ಕೃಷ್ಣಪ್ಪ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ, ಪಾಲಿಕೆ ಆಯುಕ್ತೆ ರೇಣುಕಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್.ಕೆ, ಡಿಡಿಪಿಯು ನರಸಿಂಹಮೂರ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡಿ, ಸುರೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಸ್ವಾತಂತ್ರ್ಯ ಚೌಕದ ಮಹತ್ವ:
1942ರ ಸೆ.14ರಂದು ನಡೆದ ಕ್ವಿಟ್ ಇಂಡಿಯಾ ಚಳುವಳಿ ಭಾಗವಾಗಿ ತುಮಕೂರಿನ ಸ್ವಾತಂತ್ರ್ಯ ಚೌಕದಲ್ಲಿ 1000 ಜನ ಸೇರಿ ಚಳುವಳಿ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಚಳುವಳಿದಾರರ ಮೇಲೆ ಗುಂಡಿನ ದಾಳಿ ನಡೆಸಿದರು. ಈ ಗುಂಡಿನ ದಾಳಿಗೆ ರಾಮಚಂದ್ರ, ಮಂಡಿಪೇಟೆ ಗಂಗಣ್ಣ, ಸಂತೇಪೇಟೆ ನಂಜುಂಡಪ್ಪ ಹುತಾತ್ಮರಾಗಿ ದ್ದರೆಂಬುದು ಈ ಸ್ವಾತಂತ್ರ್ಯ ಚೌಕದ ಮಹತ್ವ.
75 ವಾರಗಳ ಕಾಲ ನಿರಂತರ ಕಾರ್ಯಕ್ರಮ:
2022ರ ಆ.15ರಂದು ನಡೆಯುವ ಭಾರತ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ 75 ವಾರಗಳ ಕಾಲ ನಿರಂತರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಜಿಲ್ಲಾಡಳಿತವು 2022ರ ಅ. 15ರವರೆಗೂ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದೆ.
ಈಗಾಗಲೇ ತುಮಕೂರು ನಗರದ ಚೌಕದಿಂದ ಆರಂಭವಾಗಿರುವ ನುಡಿ ನಮನ ಕಾರ್ಯಕ್ರಮವು 2021ರ ಏ, 9ರಂದು ನಗರದ ಸರ್ಕಾರಿ ಹೈಸ್ಕೂಲ್ ಮೈದಾನದ ಗಾಂಧಿ ಭವನ, ಏಪ್ರಿಲ್ 14, 25; ಮೇ 14; ಜೂ.5, 21; ಆ.15, 23; ಸೆ.15; ಅ.2; ನ.1, 14; ಡಿ.3, 29 ಮತ್ತು 2022ರ ಜ.24,26; ಫೆ.19; ಮಾ.8; ಜು.6 ಹಾಗೂ ಆ.15 ರಂದು ಜಿಲ್ಲಾ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.
ಅದೇ ರೀತಿ 2021ರ ಏ.20; ಜು.1; ಸೆ.7; ನ.17 ಹಾಗೂ 2022ರ ಏ.20; ಜು.20 ರಂದು ಚಿಕ್ಕನಾಯಕನಹಳ್ಳಿ, 2021ರ ಏ.28; ಜು.15; ಸೆ.3; ನ.10 ಹಾಗೂ 2022ರ ಜ.19; ಏ.13; ಜು.13ರಂದು ತಿಪಟೂರು, 2021ರ ಮೇ.6; ಜು.8; ನ.24 ಹಾಗೂ 2022ರ ಫೆ.3; ಏ.27; ಜು.27ರಂದು ಪಾವಗಡ, 2021ರ ಮೇ.19; ಜು.23; ಸೆ.22; ಡಿ.1 ಹಾಗೂ 2022ರ ಫೆ.9; ಮೇ.4; ಆ.3 ರಂದು ತುರುವೇಕೆರೆ, 2021ರ ಮೇ.24; ಜು.29; ಅ.4; ಡಿ.8 ಹಾಗೂ 2022ರ ಫೆ.14, ಮೇ.11; ಆ.10ರಂದು ಗುಬ್ಬಿ, 2021ರ ಜೂ.10; ಆ.9; ಅ.11; ಡಿ.22 ಹಾಗೂ 2022ರ ಮಾ.2; ಜೂ.8 ರಂದು ಮಧುಗಿರಿ, 2021ರ ಜೂ.16; ಅ.22 ಹಾಗೂ 2022ರ ಜೂ.15ರಂದು ಕೊರಟಗೆರೆ, 2021ರ ಜೂ.23; ಅ.27 ಹಾಗೂ 2022ರ ಜ.5; ಮಾ.16ರಂದು ಕುಣಿಗಲ್, 2021ರ ಆ.4; ಸೆ.29; ಡಿ.15 ಹಾಗೂ 2022ರ ಫೆ.23, ಜೂ.22 ರಂದು ಶಿರಾ, 2021ರ ಅ.1 ಹಾಗೂ 2022ರ ಜ.12; ಏ.6ರಂದು ತುಮಕೂರಿನಲ್ಲಿ ನುಡಿನಮನ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದ ಅಂಗವಾಗಿ ಮಹಾತ್ಮ ಗಾಂಧೀಜಿಯವರಿಗೆ ನಮನ, ಶ್ರಮದಾನ, ದೇಶಭಕ್ತಿಗೀತೆ ಗಾಯನ, ಪಾದಯಾತ್ರೆ, ಕಾಲೇಜು ವಿದ್ಯಾರ್ಥಿಗಳಿಂದ ಪ್ರಭಾತ್ ಪೇರಿ, ಉಪನ್ಯಾಸ, ಸ್ವಚ್ಚತೆ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.