ಹುಳಿಯಾರು:
ಕೊರೊನಾ ತಡೆಗಟ್ಟುವ ನಿಟ್ಟಿನ್ನಲ್ಲಿ ಸರಕಾರ ಜಾರಿಗೆ ತಂದಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಹೋಬಳಿಯ ಎಲ್ಲ ಗಾಡಿಭಾಗದ ಪ್ರದೇಶದಲ್ಲಿ ಹುಳಿಯಾರು ಪಿ.ಎಸ್.ಐ. ಕೆ.ಟಿ.ರಮೇಶ್ ರವರು ಕಟ್ಟುನಿಟ್ಟಿನ ಬಿಗಿ ಪೊಲೀಸ್ ಬಂದುಬಸ್ತು ಕೈಗೊಂಡಿದ್ದು.
ತಾಲೂಕು ಗಡಿ ಭಾಗಗಳಾದ ಕೆಂಕೆರೆ ಪುರದಮಠ, ಯಳನಾಡು ಗಡಿ, ದೊಡ್ಡ ಎಣ್ಣೆಗೆರೆ ಗಡಿಭಾಗದಲ್ಲಿ ಯಾವುದೆ ವಾಹನ ಬಾರದಂತೆ ಬಿಗಿ ಕ್ರಮ ಜರುಗಿಸಲಾಗಿದೆ.
ಹುಳಿಯಾರು ಪಟ್ಟಣಕ್ಕೆ ಪ್ರವೇಶಿಸುವ ಮಾರ್ಗಗಳಾದ ಕೆಂಕೆರೆ ರಸ್ತೆ, ತಿಪಟೂರು ಮತ್ತು ಹೊಸದುರ್ಗ ಮಾರ್ಗದ ರಸ್ತೆ, ಗಾಣದಾಳ್, ಹೋಯ್ಸಳಕಟ್ಟೆ ಹಾಗೂ ಚಿಕ್ಕನಾಯಕನಹಳ್ಳಿ ಮಾರ್ಗದ ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನ ನಿಯೋಜಿಸುವ ಮೂಲಕ ಗುಡ್ಸ ವಾಹನ ಹೊರೆತು ಪಡಿಸಿ ಹುಳಿಯಾರು ಪಟ್ಟಣಕ್ಕೆ ಯಾವುದೆ ಒಂದು ಬೈಕ್, ಕಾರು, ಬಾರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಪಟ್ಟಣದ ಒಳಭಾಗದಲ್ಲಿನ ನಿವಾಸಿಗಳು ಸಹಾ ಅನಾವಶ್ಯಕವಾಗಿ ಬೈಕ್‍ಗಳನ್ನ ರಸ್ತೆಗೆ ತರದಂತೆ ಬಿಗಿಕ್ರಮ ಕೈಗೊಂಡಿದ್ದಾರೆ.
ಆದರು ಸಹಾ ಕೆಲವು ವ್ಯಕ್ತಿಗಳು ರಸ್ತೆಗೆ ತಂದಂತ್ತ ಬೈಕ್‍ಗಳನ್ನ ಸೀಜ್ ಮಾಡುವ ಮೂಲಕ ಯಾರು ರಸ್ತೆಗೆ ವಾಹನ ತರದಂತ್ತೆ ಕಟ್ಟುನಿಟ್ಟಿನ ಕ್ರಮ ನಡೆಸಿದ್ದಾರೆ. ಪರಿಣಾಮ ಪಟ್ಟಣದ ಎಲ್ಲಾ ರಸ್ತೆಗಳು ವಾಹನಗಳ ಸಂಚಾರ ಇಲ್ಲದೆ ನಿಶಬ್ದವಾಗಿತ್ತು.
ಸರಕಾರದ ಮಾರ್ಗಸೂಚಿಯಂತೆ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ದಿನಸಿ, ತರಕಾರಿ, ಹಾಲು, ಹಣ್ಣು, ಅಗತ್ಯವಸ್ತುಗಳ ಅಂಗಡಿಗಳು ತೆರೆದು ನಂತರ ಅಂಗಡಿಮಾಲಿಕರು ಸ್ವಯಂ ಸ್ಪೂರ್ತಿಯಾಗಿ ಅಂಗಡಿ ಬಂದ್ ಮಾಡುವ ಮೂಲಕ ಸರಕಾರದ ಮಾರ್ಗಸೂಚಿಯನ್ನ ಅನುಸರಿಸಿದರು.