ಹುಳಿಯಾರು:
ಪತ್ರಿಕೆಯ ವರದಿಯ ಫಲಶೃತಿಯಾಗಿ ಹುಳಿಯಾರು ಮುಕ್ತಿಧಾಮಕ್ಕೆ ಬೆಸ್ಕಾಂನಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಹುಳಿಯಾರಿನ ಮುಕ್ತಿಧಾಮದಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದೆ ಕತ್ತಲೆಯಲ್ಲಿ ಅಂತ್ಯಕ್ರಿಯೆ ನಡೆಸುವ ಅನಿವಾರ್ಯ ಕರ್ಮ ದಶಕಗ ಳಿಂದಲೂ ಇತ್ತು. ಟಿ.ಬಿ.ಜಯಚಂದ್ರ ಅವರೊಮ್ಮೆ, ಜೆ.ಸಿ.ಮಾಧುಸ್ವಾಮಿ ಅವರೊ ಮ್ಮೆ ಮುಕ್ತಿಧಾಮದ ಅಭಿವೃದ್ಧಿಗೆ ಹಣ ಕೊಟ್ಟರಾದರೂ ವಿದ್ಯುತ್ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ. ಪರಿಣಾಮ ಟಾರ್ಚ್, ಚಾರ್ಜರ್ ಲೈಟ್, ಮೊಬೈಲ್ ಲೈಟ್, ಕಾರು, ಬೈಕ್ ಹೆಡ್‍ಲೈಟ್ ಬೆಳಕಲ್ಲಿ ರಾತ್ರಿವೊತ್ತು ಅಂತ್ಯಕ್ರಿಯೆ ನಡೆಸುತ್ತಿದ್ದರು.
ಮುಕ್ತಿಧಾಮದ ಸುತ್ತ ಕಾಂಪೌಂಡ್ ವ್ಯವಸ್ಥೆ ಯಿಲ್ಲದೆ ತಂತಿಬೇಲಿ ಮಾತ್ರ ಹಾಕಲಾಗಿತ್ತು. ಬೇಲಿಯ ಸುತ್ತಲೂ ಜಾಲಿಗಿಡಗಳು ಸೇರಿದಂತೆ ಅನಗತ್ಯ ಗಿಡ ಗಂಟೆಗಳು ಬೆಳದಿದ್ದು ರಾತ್ರಿ ಅಂತ್ಯಕ್ರಿಯೆಗೆ ಬರುವವರು ವಿಷಜಂತುಗಳ ಭಯದಲ್ಲಿ ಗಂಟೆಗಟ್ಟಲೆ ನಿಂತು ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ. ಕೆಲ ಸಮುದಾಯದವರು ರಾತ್ರಿ ಕತ್ತಲೆಯಲ್ಲೇ ಸ್ನಾನ, ಸೇರಿದಂತೆ ಇತರೆ ಕಾರ್ಯಗಳನ್ನೂ ಮಾಡುತ್ತಿದ್ದರು. ಮುಕ್ತಿಧಾಮದ ಈ ಸಮಸ್ಯೆಗಳ ಬಗ್ಗೆ ಪತ್ರಿಕೆ ವಿಸ್ಕøತಿ ವರದಿ ಪಕಟಿಸಿತ್ತು.
ಪತ್ರಿಕೆಯ ವರದಿಗೆ ಹುಳಿಯಾರಿನ ಬೆಸ್ಕಾಂ ಶಾಖಾಧಿಕಾರಿ ಉಮೇಶ್‍ನಾಯ್ಕ ಅವರು ಸ್ಪಂಧಿಸಿದ್ದು ಮಾನವೀಯತೆ ದೃಷ್ಟಿಯಿಂದ ತಾವೇ ಬಲ್ಪ್ ಅಳವಡಿಸಿ ಕಂಬದಿಂದ ಸಂಪರ್ಕ ಸಹ ಕೊಡಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಸದರಿ ಬೆಳಕಿನ ವ್ಯವಸ್ಥೆಯು ಎಫ್ 6 ಸೋಮನಹಳ್ಳಿ ಪಂಪ್ಸೆಟ್ ಪೂರಕದ ಮೇಲೆ ಇರುತ್ತದೆ. ಪಟ್ಟಣ ಪಂಚಾಯಿತಿ ವತಿಯಿಂದ ಸಂಪರ್ಕಕ್ಕೆ ಅರ್ಜಿ ಕೊಟ್ಟಲ್ಲಿ ಅಧಿಕೃತವಾಗಿ ಹುಳಿಯಾರು ಟೌನ್ ಪೂರಕ ದಿಂದ ಮಾರ್ಗ ನಿರ್ಮಿಸಿ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.