ಮಧುಗಿರಿ:
ಬುಧವಾರ ಬೆಳಗಿನ ಜಾವದಲ್ಲಿ ಗುಡುಗು-ಸಿಡಿಲು-ಮಿಂಚಿನ ಸಹಿತ ಸುರಿದ ಮಳೆಗೆ ಪಟ್ಟಣದ ಪುರಸಭಾ ವ್ಯಾಪ್ತಿಯ ಹದಿಮೂರನೆಯ ವಾರ್ಡಿನಲ್ಲಿರುವ ಬಹುತೇಕ ಮನೆಗಳಿಗೆ ಮಳೆ ನೀರಿನ ಜೊತೆ ಚರಂಡಿ ನೀರು ಸೇರಿ ನುಗ್ಗಿರುವ ಘಟನೆ ನಡೆದಿದೆ.
ಪುರಸಭಾ ಸದಸ್ಯ ನರಸಿಂಹಮೂರ್ತಿರವರ ಮನೆಗೂ ನೀರು ನುಗ್ಗಿದ್ದು ಅಕ್ಕ ಪಕ್ಕದ ಮನೆಗಳಲ್ಲಿ ಇಂತಹ ಅನುಭವವಾಗಿದೆ. ಈ ವಾರ್ಡಿನಲ್ಲಿ ರಘು ಹೋಟೆಲ್ ಸಮೀಪ ನಿರ್ಮಿಸಿರುವ ಡಕ್ ನ ಒಳಭಾಗದಲ್ಲಿ ಕಾಂಕ್ರೀಟ್ ಹಾಕಿ ಎಷ್ಟೋ ದಿನಗಳಾಗಿದ್ದರೂ ನೀರು ಸರಾಗವಾಗಿ ಹರಿಯುವಂತೆ ಮಾಡದ ಕಾಮಗಾರಿಯೇ ಪ್ರಮುಖ ಕಾರಣ ಎನ್ನುತ್ತಾರೆ ಇಲ್ಲಿನ ನಾಗರಿಕರು.
ಬೂರ್ಕನಹಟ್ಟಿಯಲ್ಲಿರುವ ಬಹುತೇಕ ಮನೆಗಳ ಸಂಪುಗಳಲ್ಲಿ ಚರಂಡಿ ನೀರು ತುಂಬಿಕೊಂಡು ದುರ್ವಾಸನೆ ಹೆಚ್ಚಾಗಿ ಸಂಪುಗಳ ಸ್ವಚ್ಚಮಾಡಿಕೊಳ್ಳುವುದರಲ್ಲಿ ಸಾಕು ಸಾಕಾಯಿತು ಗೃಹಿಣಿಯರ ಪಾಡು.
ಟೌನ್ ಹಾಲ್ ರಸ್ತೆಯ ಪೆಟ್ರೋಲ್ ಬಂಕ್ ಸಮೀಪ ಇರುವ ವಾಣಿಜ್ಯ ಮಳಿಗೆಗಳಿಗೆ ಚರಂಡಿ ನೀರು ನುಗ್ಗಿದೆ. ಪೆÇೀಸ್ಟ್ ಆಫೀಸ್‍ನಿಂದ ಬರುವ ರಾಯಗಾಲುವೆ ನೀರು ಸರಾಗವಾಗಿ ಹರಿಯದ ಕಾರಣ ರಾಯಗಾಲುವೆಯಲ್ಲಿ ಕಸ ತುಂಬಿ ನೀರು ನುಗ್ಗಲು ಕಾರಣವೆನ್ನಲಾಗಿದೆ. ಹೈಸ್ಕೂಲ್ ವೃತ್ತದ ಬಳಿ ಇರುವ ತೆರೆದ ಚರಂಡಿಗೆ ಬಿರು ಬಾಟಲ್ಗಳನ್ನು ಎಸೆದು ಅಲ್ಲೂ ನೀರು ಸರಾಗವಾಗಿ ಹರಿಯದಂತೆ ಮಾಡಿದ ಫಲ ರಸ್ತೆ ತುಂಬ ನೀರು ಹರಿದಿದೆ. ಹಾಸ್ಟೆಲ್ ಹಿಂಭಾಗದ ಮನೆಗಳಲ್ಲೂ ಸಹ ಮಳೆ ನೀರು ನುಗ್ಗಿದೆ. ಮಧುಗಿರಿ-45 ಮಿ.ಮೀ, ಮಿಡಿಗೇಶಿ-5 ಮಿ.ಮೀ ಕೊಡಿಗೇನಹಳ್ಳಿ- 9.5 ಮಿ.ಮೀ ಮಿ.ಮೀ, ಬಡವನಹಳ್ಳಿ-25ಮಿ.ಮೀ, ಬ್ಯಾಲ್ಯ-1.8ಮಿ.ಮಿ, ಐಡಿಹಳ್ಳಿ-25.3ಮಿಲಿ ಮೀ. ನಷ್ಟು ಮಳೆಯಾಗಿದೆ ಎಂದು ಮಳೆ ಮಾಪನ ಕೇಂದ್ರಗಳಿಂದ ವರದಿಯಾಗಿದೆ.