ತುಮಕೂರು:
ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಲ್ಲ ಅಗತ್ಯಕ್ಕಿಂತ ಹೆಚ್ಚಿನ ಆಮ್ಲಜನಕ ಲಭ್ಯವಿದ್ದು ಯಾರು ಭೀತಿ ಪಡುವ ಅಗತ್ಯವಿಲ್ಲ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ನಗರದ ಪಾಲಿಕೆ ಆವರಣದಲ್ಲಿ ಪಾಲಿಕೆ ವತಿಯಿಂದ ಪೌರ ಕಾರ್ಮಿಕರಿಗೆ ಮೆಡಿಕಲ್ ಕಿಟ್ ವಿತರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಎಲ್ಲ ಪಿಎಚ್‍ಸಿಗಳಿಗೂ ಆಮ್ಲಜನಕದ ವ್ಯವಸ್ಥೆಯನ್ನು ಮಾಡಲಾಗಿತ್ತು, ಆದರೆ ಅದನ್ನು ನಿರ್ವಹಿಸುವ ತಂತ್ರಜ್ಞರ ಕೊರತೆ ಇರುವುದರಿಂದ ಅವುಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 450 ಪೌರ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರಿಗೂ ಉಚಿತವಾಗಿ ಮೆಡಿಕಲ್ ಕಿಟ್ ವಿತರಿಸುವಂತೆ ಪಾಲಿಕೆ ಆಯುಕ್ತೆ ರೇಣುಕಮ್ಮ ಅವರಿಗೆ ಸೂಚಿಸಿದ ಅವರು, ಲಾಕ್‍ಡೌನ್‍ನಿಂದ ಊಟಕ್ಕೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಜಿಲ್ಲೆಗೆ ಲಸಿಕೆ ವಿತರಣೆ ತಡವಾಗಿದ್ದು, ಕೆಲವೇ ದಿನಗಳಲ್ಲಿ ಲಸಿಕೆ ಜಿಲ್ಲೆಗೆ ಬರಲಿದ್ದು, ಲಸಿಕೆಯನ್ನು 45 ವರ್ಷ ಮೇಲ್ಪಟ್ಟವರಿಗೆ ಮೊದಲಿಗೆ ಲಸಿಕೆಯನ್ನು ವಿತರಿಸಲಾಗುವುದು, ನಗರದಿಂದ ಬೆಂಗಳೂರಿಗೆ ಕೆಲಸಕ್ಕಾಗಿ ಹೋಗುವರ ಸಂಖ್ಯೆ ಹೆಚ್ಚಿರುವುದರಿಂದ ಕೊರೋನಾ ಸಹ ಹೆಚ್ಚಳವಾಗುತ್ತಿದ್ದು, ಮನೆಯಲ್ಲಿಯೇ ಇರುವ ಮೂಲಕ ಕೊರೋನಾ ನಿಯಂತ್ರಣಕ್ಕೆ ಸಹಕರಿಸುವಂತೆ ಮನವಿ ಮಾಡಿದ ಅವರು, ಲಾಕ್‍ಡೌನ್‍ನಿಂದ ಕೊರೋನಾ ನಿಯಂತ್ರಣಕ್ಕೆ ಬಂದಿದ್ದು, ಮೂರನೇ ಅಲೆಯ ಭಯ ಉಂಟಾಗಿದೆ ಎಂದು ಹೇಳಿದರು.
ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಅವರು ಮಾತನಾಡಿ ನಗರದಲ್ಲಿರುವ ಆಸ್ಪತ್ರೆಗಳಲ್ಲಿ ಲಭ್ಯ ಹಾಸಿಗೆಗಳ ಮಾಹಿತಿಯನ್ನು ಪಾರ ದರ್ಶಕವಾಗಿ ಪ್ರಕಟಿಸುವ ಕೆಲಸವಾ ಗಬೇಕಿದ್ದು, ಈ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಜನರಿಗೆ ಹಾಸಿಗೆಗಳ ಕೊರತೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗುವುದು, ಕ್ಯಾತ್ಸಂದ್ರ ಬಳಿಯ ಕೋವಿಡ್ ಕೇರ್ ಸೆಂಟರ್‍ನಲ್ಲಿ 40 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಸದಸ್ಯೆ ಗಿರಿಜಾ ಧನಿಯಾಕುಮಾರ್ ಮಾತ ನಾಡಿ, ಕೋವಿಡ್ ನಿಯಂತ್ರಣ ಮಾಡುಲು ವಾರ್ಡ್ ಕಮಿಟಿ ರಚನೆ ಮಾಡಲಾಗಿದ್ದು, ಮೆಡಿಸಿನ್ ಕಿಟ್ ಮತ್ತು ಅರಿವು ಮೂಡಿಸಲಾಗುವುದು, ಸೋಂಕಿತಿಗೆ ಸೆಂಟರ್‍ಗೆ ಹೋಗಲು ಅರಿವು ಮೂಡಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
15ನೇ ವಾರ್ಡ್ ವ್ಯಾಪ್ತಿಯಲ್ಲಿ ಮನೆ ಮನೆಗೆ ಸ್ಯಾನಿಟೈಸ್ ಮಾಡಲಾಗಿದ್ದು, ವಾರ್ಡ್ ವ್ಯಾಪ್ತಿಯಲ್ಲಿ 56 ಸೋಂಕಿತರು ಇದ್ದು, ಕೋವಿಡ್ ಸೋಂಕಿತರಿಗೆ ಅಗತ್ಯ ಮೆಡಿಕಲ್ ಕಿಟ್ ನೀಡಲಾಗುತ್ತಿದೆ, ಪಾಲಿಕೆಯಿಂದ ಸೋಂಕಿತರನ್ನು ಕೇರ್ ಸೆಂಟರ್ ಮತ್ತು ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಮತ್ತು ಮೃತ ದೇಹವನ್ನು ಸ್ಮಶಾನಕ್ಕೆ ಕಳುಹಿಸಲು ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು. 15ನೇ ವಾರ್ಡ್ ನಾಗರೀಕರು ಆಂಬುಲೆನ್ಸ್ ಹನುಮಂತರಾಯ 9743440078, ಸಹಕಾರಕ್ಕಾಗಿ ವಾರ್ ರೂಂ 0816-2213401, ನೋಡಲ್ ಅಧಿಕಾರಿ ಕರಿಯಪ್ಪ 9902062107 ಸಂಪರ್ಕಿಸಬಹುದಾಗಿದ್ದು, ಆರ್‍ಐ ಲೋಕೇ ಶ್, ಹೆಲ್ತ್ ರುದ್ರೇಅದ್, ಎಎನ್ ಎಂ ಅಜುಂ, ಪೆÇಲೀಸ್ ಶ್ರೀಶೈಲ, ಮೇಯರ್ ಸದಸ್ಯ, ಕರವಸೂಲಿಗಾರ ವಿದ್ಯಾಶ್ರೀ ವಾರ್ಡ್ ಕಮಿಟಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಆಯುಕ್ತೆ ರೇಣುಕಮ್ಮ, ತಹಶೀಲ್ದಾರ್ ಮೋಹನ್‍ಕುಮಾರ್, ಡಾ.ಸನತ್‍ಕುಮಾರ್, ಮುಖಂಡರಾದ ಧನಿಯಾಕುಮಾರ್, ಲೋಕೇಶ್ ಸೇರಿದಂತೆ ಇತರರಿದ್ದರು.