ಚಿ.ನಾ.ಹಳ್ಳಿ:
ಮನೆಯ ಮುಂಭಾಗದ ಜಾಗವೊಂದರ ವಿಚಾರಕ್ಕೆ ನಿರ್ಮಾಣ ಮಾಡಿಕೊಂಡಿದ್ದ ತಗಡಿನ ಶೆಡ್ಡನ್ನು ರಾತ್ರೋರಾತ್ರಿ ಧ್ವಂಸ ಮಾಡಿರುವ ಘಟನೆ ತಾಲ್ಲೂಕಿನ ಲಕ್ಮೇನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ರತ್ನಮ್ಮ ಕೃಷ್ಣಯ್ಯ ಎಂಬುವವರಿಗೆ ಸೇರಿದ ಈ ಖಾಲಿ ಜಾಗದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಹಸುಗಳನ್ನು ಕಟ್ಟಿಕೊಂಡು ವಾಸಿಸಲಾಗಿತ್ತು, ಘಟನೆಗೆ ಸಂಬಂಧಿಸಿದಂತೆ ಕೃಷ್ಣಯ್ಯನ ಮನೆಯ ಮುಂದಿನ ಜಾಗವನ್ನು ರಸ್ತೆಗೆ ಬಿಡುವಂತೆ ಒತ್ತಾಯಿಸಲಾಗಿತ್ತು, ಗಂಗಾಧರ ಎಂಬುವವರ ಮಗ ಕುಮಾರಯ್ಯ ಹಾಗೂ ಹೆಂಡತಿ ಹೇಮಾವತಿ ಮಗ ಪುನೀತ್, ವಿಶ್ವನಾಥ್ ಎಂಬವರು ಕಳೆದ ರಾತ್ರಿ ಜಾಗದ ವಿಚಾರವಾಗಿ ಮನೆಯ ಮುಂಭಾಗ ಹಾಕಿದ್ದ ತಗಡಿನ ಶೆಡ್ಡನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಈ ವೇಳೆ ಕೃಷ್ಣಯ್ಯನ ಮಗಳಾದ ಪುಷ್ಪವತಿ ಬಾಣಂತಿ ಸೇವೆಗಾಗಿ ಬಂದಿದ್ದಾರೆ, ಇವರನ್ನು ಕುಮಾರಯ್ಯ ಹಾಗೂ ಅವರ ಸಂಗಡಿಗರು ಸೇರಿ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಲ್ಲದೆ ಮನಬಂದಂತೆ ಬೈದು ಪುಷ್ಪವತಿ, ಭಾಗ್ಯ ರತ್ನಮ್ಮ ಹಾಗೂ ಅಳಿಯ ತೀರ್ಥ ಕುಮಾರ್ ಇವರನ್ನು ತಳಿಸಿದ್ದಲ್ಲದೆ ಇವರ ಟಾಟಾ ಜಸ್ಟ್ ಕೆಎ-04 ಎಬಿ 9966 ಕಾರಿನ ಗ್ಲಾಸ್ಗಳನ್ನು ಜಖಂಗೊಳಿಸಿ ಹಾನಿ ಉಂಟು ಮಾಡಿದ್ದಾರೆ ಎಂದು ದೂರಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪುಷ್ಪವತಿ ಮಾತನಾಡಿ, ಮಂಡಲ ಪಂಚಾಯತಿ ಇಂದ ನಮಗೆ ನೋಟಿಸ್ ನೀಡಿದ್ದರು, ನಾವು ಅದಕ್ಕೆ ಅಳತೆ ಮಾಡಿಸಿ ನಮ್ಮ ಮನೆ ಮುಂದೆ ನಮ್ಮ ಜಾಗದಲ್ಲಿ ಕಟ್ಟಿದ್ದೇವೆ, ಒಂದು ವೇಳೆ ಕಾನೂನು ಉಲ್ಲಂಘನೆ ಆಗಿದ್ದರೆ ಪಂಚಾಯಿತಿ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ. ಆದರೆ ಇವರು ಏಕಾಏಕಿ ಬಂದು ಹಲ್ಲೆ ಮಾಡಿದ್ದಾರೆ ಎಂದರು.
ದೂರುದಾರರಾದ ರತ್ನಮ್ಮ ಮಾತನಾಡಿ, ಈ ಘಟನೆಯಲ್ಲಿ ನನ್ನ ಮಕ್ಕಳಾದ ಇಬ್ಬರು ಮಕ್ಕಳಾದ ಪುಷ್ಪಭಾಗ್ಯ ಮತ್ತು ನನ್ನ ಮಾಂಗಲ್ಯ ಹಾಗೂ ಗುಂಡುಗಳು ಗಲಾಟೆಯಲ್ಲಿ ರಾತ್ರಿ ವೇಳೆ ಕಳೆದುಹೋಗಿವೆ ಎಂದು ದೂರಿದ್ದಾರೆ.