ತುಮಕೂರು:
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಜಲ ಜೀವನ್ ಮಿಷನ್’ ಯೋಜನೆಯನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಅನುμÁ್ಠನಗೊಳಿಸಲು ಕ್ರಿಯಾ ಯೋಜನೆ ತಯಾರಿಸಿ ಮಾಹಿತಿ ಒದಗಿಸುವಂತೆ ಸಂಸದ ಜಿ.ಎಸ್. ಬಸವರಾಜು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಲ ಜೀವನ್ ಮಿಷನ್ ಯೋಜನೆಯ ಅನುμÁ್ಠನ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಲಜೀವನ್ ಮಿಷನ್ ಯೋಜನೆಯ ಯಶಸ್ವಿ ಅನುμÁ್ಠನಕ್ಕಾಗಿ ಗ್ರಾಮವಾರು ಕ್ರಿಯಾ ಯೋಜನೆ ರೂಪಿಸಿ, ರೂಪು-ರೇμÉ ಸಿದ್ಧಪಡಿಸಿಸುವಂತೆ ನಿರ್ದೇಶಿಸಿದರು.
ಜಲ ಜೀವನ್ ಮಿಷನ್ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 82 ಹಳ್ಳಿಗಳ 11671 ಮನೆಗಳಿಗೆ ಕಾರ್ಯಾತ್ಮಕ ನಳ ಅಳವಡಿಸುವ ಕಾಮಗಾರಿಯನ್ನು ಕಾಲಮಿತಿಯೊಳಗೆ ಮುಗಿಸಿ ಕುಡಿಯುವ ನೀರು ಒದಗಿಸಲು ಕ್ರಮ ವಹಿಸಬೇಕು. ಜಿಲ್ಲೆಯ ಹತ್ತು ತಾಲೂಕಿನಲ್ಲೂ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸಬೇಕು. ನೀರಿನ ಮೂಲವಿರುವ ಸ್ಥಳದಲ್ಲಿ ಆದ್ಯತೆ ಮೇರೆಗೆ ಯೋಜನೆಯನ್ನು ಸಮರ್ಪಕವಾಗಿ ಅನುμÁ್ಟನಗೊಳಿಸಬೇಕು ಎಂದು ತಾಕೀತು ಮಾಡಿದರು.
ಪ್ರಗತಿ ಪರಿಶೀಲನಾ ಸಭೆಗೆ ಪೂರ್ಣ ಮಾಹಿತಿ ಮತ್ತು ಸೂಕ್ತ ಯೋಜನಾ ತಯಾರಿ ಬಗ್ಗೆ ಮಾಹಿತಿ ಒದಗಿಸದ ಹಿನ್ನೆಲೆಯಲ್ಲಿ ಬೇಸರ ವ್ಯಕ್ತಪಡಿಸಿದ ಸಂಸದರು, ಕೆಲಸದ ವೈಫಲ್ಯದಿಂದ ಜಿಲ್ಲೆಯಲ್ಲಿ ಯೋಜನೆ ವಿಫಲವಾಗಬಾರದು. ಆದ್ದರಿಂದ ಸೂಕ್ತ ಯೋಜನಾ ತಯಾರಿ ಮತ್ತು ಸಮರ್ಪಕ ಮಾಹಿತಿ ಸಿದ್ಧಪಡಿಸಿಕೊಂಡು ಯೋಜನೆಯ ಯಶಸ್ಸಿಗೆ ಜವಾಬ್ದಾರಿಯಾಗಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಅನುಮೋದನೆಯಾಗಿ ಕಾರ್ಯಾತ್ಮಕ ನಳ ಸಂಪರ್ಕದ ಕಾರ್ಯ ಅನುμÁ್ಠನಗೊಳ್ಳಲಿರುವ ಗ್ರಾಮಗಳನ್ನು ಹೊರತು ಪಡಿಸಿ ಜಿಲ್ಲೆಯ ಉಳಿದ ಗ್ರಾಮಗಳಲ್ಲಿಯೂ ಈ ಯೋಜನೆಯ ಅನುಷ್ಠಾನಕ್ಕೆ ಈಗಿನಿಂದಲೇ ನೀರಿನ ಮೂಲದ ಆಧಾರದ ಮೇಲೆ ಆದ್ಯತೆಯ ಮೇರೆಗೆ ಯೋಜನೆಯ ರೂಪು-ರೇμÉ ತಯಾರಿಸಬೇಕು. ಮೊದಲಾದ್ಯತೆಯಾಗಿ ನೀರಿರುವ ಕೆರೆಗಳನ್ನು ಗುರುತಿಸಿ ಯೋಜನೆಯನ್ನು ತಯಾರು ಮಾಡಿಕೊಳ್ಳಬೇಕು. ಕೆರೆಗಳಿಗೆ ಶೇಖರಣೆಯಾಗುವ ನೀರಿನ ಮೂಲ ಹಾಗೂ ಶೇಖರಣೆಯಾಗಿರುವ ಕೆರೆಗಳಿಂದ ಎಷ್ಟು ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಅನುμÁ್ಟನಗೊಳಿಸಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯುಳ್ಳ ಕ್ರಿಯಾ ಯೋಜನೆ ತಯಾರಿಸಬೇಕು. ಇದಕ್ಕೆ ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಇನ್ನೊಂದು ತಿಂಗಳೊಳಗಾಗಿ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಯನ್ನು ಯಶಸ್ವಿಯಾಗಿ ಅನುμÁ್ಟನಗೊಳಿಸಲು ಸಮನ್ವಯದಿಂದ ಕೆಲಸ ಮಾಡಲಾಗುವುದು. ಪ್ರಸಕ್ತ ಸಾಲಿಗೆ ಅನುಮೋದನೆಯಾಗಿರುವ ಕಾರ್ಯಾತ್ಮಕ ನಳ ಅಳವಡಿಕೆ ಕಾರ್ಯವನ್ನೂ ಕಾಲಮಿತಿಯೊಳಗೆ ಅನುμÁ್ಟನಕ್ಕೆ ತರಲಾಗುವುದು ಎಂದು ಸಂಸದರಿಗೆ ಮಾಹಿತಿ ನೀಡಿದರು.
ದಿಶಾ ಕಮಿಟಿ ಸದಸ್ಯ ಕುಂದರನಹಳ್ಳಿ ರಮೇಶ್ ಮಾತನಾಡಿ, ಜಲ ಜೀವನ್ ಮಿಷನ್ ಯೋಜನೆಗೆ ನೀರಿನ ಮೂಲ ಹಾಗೂ ಅದರ ಬಳಕೆ ಹೇಗೆ ಎಂಬುದರ ಯೋಜನೆಯನ್ನು ಗೊಂದಲವಿಲ್ಲದಂತೆ ಪೂರ್ಣವಾಗಿ ತಯಾರಿಸಬೇಕು. ಮೊದಲು ಈ ಕೆಲಸವನ್ನು ಶೀಘ್ರ ಪೂರ್ಣಗೊಳಿಸಬೇಕು. ಕೇಂದ್ರ ಸರ್ಕಾರದ ಮಹತ್ವವುಳ್ಳ ಈ ಯೋಜನೆ ಇನ್ನು ಮೂರು ವರ್ಷದಲ್ಲಿ ಪೂರ್ಣಗೊಳ್ಳಬೇಕಿದೆ. ಹಾಗಾಗಿ ಯೋಜನೆಯ ಸಂಪೂರ್ಣ ಯಶಸ್ಸಿಗೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ನೀರಿನ ಮೂಲದ ಬಗ್ಗೆ ಮತ್ತು ಭವಿಷ್ಯದಲ್ಲಿಯೂ ನೀರಿನ ಮೂಲ ಕೊರತೆಯಾಗದಂತೆ ಅರಿತು ಯೋಜನೆಯನ್ನು ಅನುμÁ್ಠನಗೊಳಿಸಬೇಕು ಎಂದು ಇಂಜಿನಿಯರ್‍ಗಳಿಗೆ ನಿರ್ದೇಶಿಸಿದರು.
ಕಾರ್ಯನಿರ್ವಾಹಕ ಅಭಿಯಂತರ ಮುತ್ತಪ್ಪ ಮಾತನಾಡಿ, ನೀರಿನ ಮೂಲ ಮತ್ತು ಯೋಜನಾ ಅನುಷ್ಠಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿರುವ ಗ್ರಾಮಗಳ ಕುರಿತ ಮಾಹಿತಿಯನ್ನು ಒದಗಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಮೇಶ್, ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.