ಹುಳಿಯಾರು:
ಪ್ರತಿನಿತ್ಯ ಎಲ್ಲರಿಂದಲೂ ಪೂಜಿಸಲ್ಪಡುವ ನಾಗರಕಲ್ಲು ಹಾಗೂ ಅರಳಿಕಟ್ಟೆಯ ಪಕ್ಕದಲ್ಲಿ ಬಾರಿನ ತ್ಯಾಜ್ಯ ತಂದು ಸುರಿಯುತ್ತಿರುವ ಬಾರ್ ಅಂಗಡಿಯವರ ಮೇಲೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹುಳಿಯಾರಿನ ಬಸ್ ನಿಲ್ದಾಣದ ಬಳಿ ಇರುವ ಆಟೋ ಸ್ಟ್ಯಾಂಡ್ ಪಕ್ಕದ ನಾಗರ ಕಟ್ಟೆಯ ಬಳಿ ಮದ್ಯದ ಪಾಕೆಟ್‍ಗಳು ಎಲ್ಲೆಂದರಲ್ಲಿ ಹಾಕಲ್ಪಡುತ್ತಿದೆ. ಸ್ವಚ್ಛತೆಯನ್ನು ಸಂಪೂರ್ಣ ನಿರ್ಲಕ್ಷಿಸಿ ಎಲ್ಲೆಂದರಲ್ಲಿ ಕಸ ಚೆಲ್ಲುವ ಇವರಿಗೆ ತ್ಯಾಜ್ಯ ಎಲ್ಲಿ ಹಾಕಬೇಕೆಂಬ ಬಗ್ಗೆ ಕನಿಷ್ಠ ಪ್ರಜ್ಞೆ ಇಲ್ಲದಾಗಿದೆ ಎಂದು ಟೀಕಿಸಿದ್ದಾರೆ.
ಪ್ರತಿನಿತ್ಯವೂ ಕೆರೆಗೆ, ರಸ್ತೆ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ಮನಬಂದಂತೆ ತ್ಯಾಜ್ಯ ತಂದು ಸುರಿಯುವ ಇವರಿಗೆ ಈ ಹಿಂದೆ ಪಟ್ಟಣ ಪಂಚಾಯಿತಿಯವರು ನೋಟಿಸ್ ನೀಡಿದ್ದರು ಇವರು ಮಾತ್ರ ಬದಲಾಗಿಲ್ಲ. ಹಾಗಾಗಿ ಸ್ವಚ್ಚತೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರುವ ಇವರುಗಳ ಬಗ್ಗೆ ಪಟ್ಟಣ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.
(Visited 18 times, 1 visits today)