ತುಮಕೂರು:
ಈ ನನ್ನ ಮಗ ನಮ್ಮ ಮಂತ್ರಿ ಹೇಂಗೆ ಗೊತ್ತಾ, ದಕ್ಷಿಣ ಕೋರಿಯಾದ ಕಿಂಗ್ ಪಿನ್ ಇದಾನಲ್ಲ ಹಾಗೆ ಕೆಟ್ಟ ಸೂಳೇ ಮಗ ಎಂದು ಸುದ್ದಿಗೋಷ್ಠಿಯಲ್ಲಿ ಸಂಸದ ಬಸವರಾಜು ಸಚಿವ ಬೈರತಿ ಬಸವರಾಜು ಜೊತೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಸುಮ್ಮನೀರು ಅಮೇಲೇ ಮಾತನಾಡೋಣ ಎಂದ ಬೈರತಿ ಬಸವರಾಜು ಆದರೂ ಮುಂದುವರೆದು ಸಂಸದ ಬಸವರಾಜು ಮಾಧುಸ್ವಾಮಿ ವಿರುದ್ಧ ನಾಲಿಗೆ ಹರಿಬಿಟ್ಟು
ಹಾಳು ಮಾಡಿಬಿಟ್ಟಿದ್ದಾನೆ ನಮ್ಮ ಜಿಲ್ಲೆಯನ್ನ, ಒಂದು ಸೀಟ್ ಬರಲ್ಲ, ಮಾತು ಎತ್ತಿದ್ದರೇ ಹೊಡಿ-ಬಡಿ-ಕಡಿ ಅಂತಾನೆ. ಅನವ್ಯಾರೋ ಇಂಜಿನಿಯರ್‍ಗೆ ಹೇಳ್ತಾನೆ. ಹೆಂಡ್ತಿ ಸೀರೆ ಹೊಗೊಯೋಕೆ ಲಾಯಕ್ ನೀನು ಅಂತಾ, ಎಕ್ಸಿಕ್ಯೂಟಿವ್ ಇಂಜಿನಿಯರ್ ಗೆ ಹೆಳ್ತಾನೆ, ಒಂದು ಹ್ಯಾಂಡ್ ಬಿಲ್ ಪ್ರಿಂಟ್ ಮಾಡಿಸಲ್ಲ. ಮೊನ್ನೆ ಸಾವಿರ ಕೋಟಿ ಡಿಕ್ಲೈರ್ ಮಾಡಿಕೊಂಡು ಬಂದವನೇ, ನಮಗೆ ಯಾರಿಗೂ ಇನ್ವಿಟೇಶನ್ ಇಲ್ಲ ಕರೆಯೋದು ಇಲ್ಲ, ನಿಮ್ಮ ಇಲಾಖೆಗೆ ಬಂದು ಹೇಳಿದರೇ ತಲೆಕೆಡಿಸಕೊಳ್ಳಬೇಡಿ ಎಂದು ಹೆಸರು ಹೇಳದೇ ಮಾಧುಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿ ಬಿಜೆಪಿ ಪಕ್ಷದ ಬಣ್ಣವನ್ನು ಬಯಲು ಮಾಡಿಕೊಂಡಿದ್ದಾರೆ.
ಸಂಸದ ಮತ್ತು ಸಚಿವರ ನಡುವಿನ ಗುಸು ಗುಸು ಸುದ್ದಿ ವೈರಲ್ ಆಗುತ್ತಿದ್ದಂತೆ,
ಕ್ಯಾಬಿನೆಟ್ ಸಭೆ ಇದೆ ಎಂದು ಹೇಳಿ ಸಮಾರಂಭದಿಂದ ಅರ್ಧಕ್ಕೆ ಸಚಿವ ಮಾಧುಸ್ವಾಮಿ ಎದ್ದು ಹೋಗಿದ್ದಾರೆ. ಸರ್ ಬನ್ನಿ, ಹಕ್ಕು ಪತ್ರ ವಿತರಣೆ ಮಾಡಿ ಹೋಗೋಣ ಎಂದು ಸಚಿವ ಬೈರತಿ ಬಸವರಾಜ್ ಕರೆದರೂ ಬಾರದೇ ಸಮಾರಂಭದಿಂದ ಹೊರ ನಡೆದಿದ್ದಾರೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ತುಮಕೂರು ಜಿಲ್ಲೆಯ ಬಿಜೆಪಿ ಪಕ್ಷದಲ್ಲಿ ಎಲ್ಲಾ ಸರಿ ಇಲ್ಲ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ.