ಮಧುಗಿರಿ :
ಮಧುಗಿರಿ ಉಪವಿಭಾಗವನ್ನು ಕಂದಾಯ ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುವುದಾಗಿ ಶಾಸಕ ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ 73 ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲಾ ಕೇಂದ್ರ ಮಾಡುವುದರಿಂದ ಅಭಿವೃದ್ಧಿ ಕಾರ್ಯ ಕಾರ್ಯ ಸಾಧ್ಯ ಎಂದ ಅವರು ಎತ್ತಿನಹೊಳೆ ಕಾಮಗಾರಿಯ ವೇಗವನ್ನು ಹೆಚ್ಚಿಸಬೇಕೆಂದು ಮಧುಗಿರಿಯನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದ ಅವರು ತಾಲ್ಲೂಕಿನಲ್ಲಿ 336 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ಮುಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿಯನ್ನು ಪ್ರಾರಂಭಿಸಬೇಕಾಗಿದೆ. ಅದೇ ರೀತಿ 264 ಕೋಟಿ ರೂಪಾಯಿಗಳ 4 ಪಥಗಳ ರಸ್ತೆ ಕಾಮಗಾರಿಯನ್ನು ಪ್ರಾರಂಬಿಸುವಂತೆ ಒತ್ತಾಯಿಸಿದ ಅವರು ಬಾಜಪ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯವೆಸಗುತ್ತಿದೆ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ ಕ್ಷೇತ್ರದಲ್ಲಿ ಅನುದಾನ ಕೊರತೆಯಿಂದ ಅಭಿವೃದ್ಧಿಯಲ್ಲಿ ಸ್ವಲ್ಪ ಹಿನ್ನೆಡೆ ಇದೆ ಎಂದರು.
ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡುವುದೇ ನಮ್ಮ ಸಂವಿಧಾನ ಅದು ನಮಗೆ ಉತ್ತಮ ನೆಲೆ ದಾರಿ ತೋರಿಸಿಕೊಟ್ಟಿದೆ ಎಂದರು.
ದ್ವಜಾರೋಹಣ ಮತ್ತು ಗೌರರಕ್ಷ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿಗಳಾದ ಸೋಮಪ್ಪ ಕಡಕೋಳ ಮಾತನಾಡಿ ನಾವು ಸಮಾನತೆಯಿಂದ ಶಿಕ್ಷಣ ಕಳಿಯುತ್ತಿರುವುದಕ್ಕೆ ಸಂವಿಧಾನ ಕಾರಣ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಾದ ಸಮಾನತೆ ಸ್ವತಂತ್ರ್ಯ ಧರ್ಮ ಸಂಸ್ಕøತಿ ಶಿಕ್ಷಣ ಮತ್ತು ಇತರೆ ಹಕ್ಕುಗಳು ಸಿಕ್ಕಿರುವುದು ಸಂವಿಧಾನದಿಂದ ಆದ್ದರಿಂದ ಸಂವಿಧಾನದ ಆದರ್ಶಗಳನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ. ಭಾರತದ ಭವಿಷ್ಯದ ಪೀಳಿಯಾದ ಯುವಕರು ಸಮಸ್ಯೆಗಳ ವಿರುದ್ದ ಹೋರಾಟ ಮಾಡಬೇಕಾಗಿದೆ. ಪ್ರಜಾಪ್ರಭುತ್ವಕ್ಕೆ ಗೆಲುವು ಸಿಗುವುದು ನಿರಂತರ ಪ್ರಶ್ನೆ ಮಾಡುವುದರಿಂದ ಹಾಗೂ ಪ್ರತಿಭಟನೆಯಿಂದ ಮಾತ್ರ ಸಾಧ್ಯ ಎಂದು ಮಹಾತ್ಮ ಗಾಂಧಿಜಿ ತಿಳಿಸಿದರು. ಈ ಮಾತಿನ ಅನಿವಾರ್ಯತೆಯನ್ನು ಮನಗಾಣಬೇಕಾಗಿದೆ. ನಾವು ನಮ್ಮ ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣಬೇಕಾಗಿದೆ. ಈ ಸಂದರ್ಬದಲ್ಲಿ ಸಮಗ್ರತೆ, ಮೌಲ್ಯಗಳು, ಧಾರ್ಮಿಕ ಸಹಿಷ್ಣುತೆ ಹಾಗೂ ತೈತಿಕತೆ ದೇಶಕ್ಕೆ ಅತ್ಯವಶ್ಯಕ ಎಂದರು.
ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಪುರಸಭೆ ಸದಸ್ಯರುಗಳಾದ ಎಂ ಆರ್ ಜಗನ್ನಾಥ್, ನರಸಿಂಹಮೂರ್ತಿ, ನಾರಾಯಣ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಹೆಚ್.ವೆಂಕಟೇಶಯ್ಯ, ಮುಖ್ಯ ಭಾಷಣಕಾರರಾದ ಟಿ.ಸಿ.ಸಚ್ಚಿದಾನಂದ ಸೌಟ್ಕ್ ಮತ್ತು ಗೈಡ್ ನ ಜಿಲ್ಲಾ ಆಯುಕ್ತ ಭಾಷ್ಕರ್ ರೆಡ್ಡಿ ಡಯಟ್ ಪ್ರಾಂಶುಪಾಲ ರಾಮಕೃಷ್ಣಯ್ಯ, ಪುರಸಭಾ ಮುಖ್ಯಾಧಿಕಾರಿ ನಜ್ಮ, ಸಿಡಿಪಿಒ ಅನಿತಾ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಹನಾ ನಾಗೇಶ್, ಕಲಾ ರಂಗದ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಮತ್ತಿತತರು ಹಾಜರಿದ್ದರು.