ತುಮಕೂರು :
ತುಮಕೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಭಾವತಿಸುಧೀಶ್ವರ್ ಮೇಯೆರ್ ಗದ್ದುಗೆ ಏರಿದರೆ ಜೆಡಿಎಸ್ ಪಕ್ಷದ ವತಿಯಿಂದ ಟಿ.ಕೆ ನರಸಿಂಹ ಮೂರ್ತಿ ಉಪ ಮೇಯರ್ ಹುದ್ದೆಯನ್ನು ಅಲಂಕರಿಸಿದ್ದಾರೆ. ನಿರೀಕ್ಷೆಯಂತೆ ಬಿಜೆಪಿ ಪಕ್ಷವನ್ನು ವಿರೋಧ ಪಕ್ಷವನ್ನಾಗಿಯೆ ಉಳಿಸಿದ ತಂತ್ರಗಾರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳದ್ದು. ಬಿಜೆಪಿ ಪಕ್ಷದ ಯಾವುದೇ ತಂತ್ರಗಳು, ರಣತಂತ್ರಗಳು, ಕುತಂತ್ರಗಳು, ನಡೆಯದಂತೆ ಮಾಡಿ ಹಾಲಿ ಬಿಜೆಪಿ ಪಕ್ಷದ ಶಾಸಕರು – ಸಂಸದರು ಸಚಿವರು ಮತ್ತು ಆಡಳಿತಾರೂಢ ಬಿಜೆಪಿ ಸರ್ಕಾರದ ಮುಖಕ್ಕೆ ತಣ್ಣೀರು ಎರಚಿದ್ದೇವೆ ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಕುರುಬ ಸಮುದಾಯಗಳ ವ್ಯಾಪಕ ವಿರೋಧಕ್ಕೆ ತುತ್ತಾಗಿದ್ದಾರೆ ಎಂದರೂ ತಪ್ಪಾಗಲಾರದು.
ಕಾಂಗ್ರೆಸ್‍ಪಕ್ಷ ಮೇಯರ್ ಪಟ್ಟವನ್ನು ಜೆಡಿಎಸ್ ಉಪಮೇಯರ್ ಪಟ್ಟವನ್ನು ಹರಿದು ಹಂಚಿಕೊಂಡು ವಲ್ಲದ ಮನಸಿನಿಂದ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದರು. ಈ ಎರಡು ಪಕ್ಷಗಳ ಆಲಿಂಗನದ ಅಪ್ಪುಗೆ ಬಿಜೆಪಿ ವಿರೋದಿ ಮನಸ್ಥಿಗಳಿಗೆ ಸರಿ ಎನಿಸಿದೆ ಯಾದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಒಳಗೆ ಆಂತರಿಕವಾಗಿ ಜಾತಿಯ ದಳ್ಳೂರಿ ಪಕ್ಷದೊಳಗೆ ದಹಿಸುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್ ಪಕ್ಷದೊಳಗೆ ಮೇಯರ್ ಪಟ್ಟಕ್ಕಾಗಿ (ಎಡ ಸಮುದಾಯದ) ರೂಪಶ್ರೀ ಶೆಟ್ಟಳಯ್ಯ ಮತ್ತು (ಬಲ ಸಮುದಾಯದ) ಪ್ರಭಾವತಿಸುಧೀಶ್ವರ್ ಇವರಿಬ್ಬರ ನಡುವೆ ಪೈಪೋಟಿ ಇತ್ತಾದರು ಕಾಗ್ರಸ್ ಪಕ್ಷದೊಳಗೆ ನಡೆದ ಆಂತರಿಕ ಕಚ್ಚಾಟಗಳು ಬುಗಿಲೆದ್ದಿತ್ತು. ಇದನ್ನು ಸಮರ್ಥವಾಗಿ ನಿಭಾಯಿಸಲಾಗದ ಮಾಜಿ ಶಾಸಕ ರಫೀಕ್ ಅಹಮದ್ ವರಿಷ್ಟರ ಮೊರೆ ಹೊದರು.
ಎಡ ಸಮುದಾಯಕ್ಕೆ ಅಧಿಕಾರವನ್ನು ನೀಡಲು ರಫೀಕ್ ಅಹಮದ್ ರವರಿಗೆ ಇಷ್ಟವಿರಲಿಲ್ಲ ವರಿಷ್ಟರ ತೀರ್ಮಾನಕ್ಕೆ ಬದ್ಧರೆಂಬ ಹಾರಿಕೆ ಉತ್ತರ ನೀಡುತ್ತ ತನ್ನ ರಾಜಕೀಯ ಅಸಮರ್ಥತೆ ಯನ್ನು ಪ್ರದರ್ಶಿಸಿದರು. ಕಾಗ್ರೆಸ್ ಪಕ್ಷದಲ್ಲಿ ಬಲಸಮುದಾಯದ ನಾಯಕರು ಹೆಚ್ಚಿರುವ ಕಾರಣದಿಂದ ಸಹಜವಾಗಿ ಬಲ ಸಮುದಾಯದ ಪ್ರಭಾವತಿ ಸುಧೀಶರ್‍ಗೆ ಮೇಯರ್ ಪಟ್ಟ ಒಲಿದು ಬಂದಿದೆ.
ಉಪ ಮೇಯರ್ ಸ್ಥಾನಕ್ಕೆ ಅಪವಿತ್ರ ಮೈತ್ರಿಯಲ್ಲಿ ಉಪಮೇಯರ್ ಸ್ಥಾನವನ್ನು ಬಿಟ್ಟು ಕೊಡಲಾಗಿತ್ತಾದರು ಜೆಡಿಎಸ್ ಪಕ್ಕದೊಳಗೆ ಪ್ರಬಲ ಆಕಾಂಕ್ಷಿಗಳಾಗಿದ್ದ ಕುರುಬ ಸಮುದಾಯದ ಎಚ್.ಡಿ.ಕೆ ಮಂಜುನಾಥ್ ಮತ್ತು ತಿಗಳ ಸಮುದಾಯದ ಟಿ.ಕೆ ನರಸಿಂಹ ಮೂರ್ತಿ ಪ್ರಬಲ ಆಕಾಂಕ್ಷಿಗಳಾಗಿದ್ದರು. ಎಚ್.ಡಿ.ಕೆ ಮಂಜುನಾಥ್ ಪರವಾಗಿ ಗ್ರಾಮಂತರ ಶಾಸಕರಾದ ಡಿಸಿ ಗೌರಿಶಂರ್ ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಅಂಜಿನಪ್ಪ ಮಾಜಿ ಸಚಿವ ಬಂಡಪ್ಪ ಕಾಶಂಪೂರ್,ಎಚ್‍ಡಿಕುಮಾರ ಸ್ವಾಮಿ ಸೇರಿದಂತೆ ಘಟಾನುಘಟಿಗಳ ಬೆಂಬಲವಿದ್ದರು ಸಹ ಶಾಸಕ
ಡಿಸಿ ಗೌರಿಶಂಕರ್ ಅವರ ಬಲಗೈಭಂಟ ಎಂಬ ಏಕೈಕ ಕಾರಣ ಮುಂದಿಟ್ಟು ಕೊಂಡು ರಾಜ್ಯ ನಾಯಕರ ಕೃಪಾಕಟಾಕ್ಷವನ್ನು ದಿಕ್ಕರಿಸಿ ತಿಗಳ ಸಮುದಾಯದ ನರಸಿಂಹಮೂರ್ತಿರವರನ್ನು ಉಪಮೇಯರ್ ಪಟ್ಟಕ್ಕೆ ಏರಿಸಲು ರಣತಂತ್ರವನ್ನು ರೂಪಿಸಿದ್ದು, ಜೆಡಿಎಸ್ ಪಕ್ಷದ ಘೋಷಿತ ಅಭ್ಯರ್ಥಿ ಎನ್.ಗೋವಿಂದರಾಜು, ಮಂಜುನಾಥ್‍ರವರನ್ನು ಯಾವುದೆ ಕಾರಣಕ್ಕೂ ಉಪಮೇಯರ್ ಪಟ್ಟಕ್ಕೆ ಏರಿಸಬಾರದು ಎಂಬ ಚರ್ಚೆಯ ಸಂದರ್ಭದಲ್ಲಿ ಕುರುಬ ಸಮುದಾಯದ ಮತಗಳು ಜೆಡಿಎಸ್ ಪಕ್ಷಕ್ಕೆ ಬರುವುದಿಲ್ಲ ಆ ಸಮುದಾಯದ ಮತಗಳು ನಮಗೆ ಬೇಕಿಲ್ಲ ಎನ್ನುವ ಮಾತುಗಳನ್ನಾಡಿರುವುದು ಜಗತ್ಜಾಹಿರ್ ಆಗಿದೆ.
ಕುರುಬ ಸಮುದಾಯದ ಮತಗಳು ಬೇಕಿಲ್ಲ ಎಂದು ಮಾತನಾಡಿರುವ ಗೋವಿಂದರಾಜುರವರ ಮಾತುಗಳು ಗೋವಿಂದರಾಜುರವರಿಗೆ ಇರುವಂತಹ ಕುರುಬ ಸಮುದಾಯದ ವಿರೋಧಿ ನೀತಿಯಿಂದ ಬೇಸತ್ತ ಆ ಸಮುದಾಯದ ಮತದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಒಟ್ಟಾರೆ ಅಂತಿಮ ಗಳಿಗೆಯಲ್ಲಿ ತಿರ್ಮಾನವಾದಂತೆ ಕುರುಬ ಸಮುದಾಯದ ಕೆಂಗಣ್ಣಿಗೆ ಗುರಿಯಾಗುವುದು ಬೇಡವೆಂದು ಕೊನೆಯ ಅವಧಿ ಅಧಿಕಾರ ನೀಡುತ್ತೇವೆ ಎಂಬ ಪೊಳ್ಳು ಭರವಸೆ ನೀಡಿದ್ದಾರಾದರು. ಅದು ಭರವಸೆ ಈಡೆರದೆ ಭರವಸೆಯಾಗಿಯೆ ಉಳಿಯುತ್ತದೆ ಎಂಬ ಮಾತುಗಳು ಸಾರ್ವಜನಿವಾಗಿ ಚರ್ಚೆಗೀಡಾಗಿದೆ. ಕಾಂಗ್ರೆಸ್ ಪಕ್ಷದ ಮಾಜಿ ಶಾಸಕÀ ರಫಿಕ್ ಅಹಮದ್ ಮತ್ತು ಜೆಡಿಎಸ್ ಪಕ್ಷದ ಮುಖಂಡ ಗೋವಿಂದರಾಜು ಈ ಎರಡು ಪಕ್ಷಗಳ ಮುಖಂಡರ ವಿರುದ್ಧ ದಲಿತ ಎಡ ಸಮುದಾಯದವರು ಮತ್ತು ಕುರುಬ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ವ್ಯಾಪಕವಾಗಿದೆ ಎನ್ನುವ ಮಾತಿದೆ.
ಮೇಯರ್ ಗದ್ದುಗೆ ನಿಭಾಯಿಸಲು ಸಮರ್ಥರೆ ?
ಪ್ರಭಾವತಿ ಸುಧೀಶ್ವರ್ ಮತ್ತು ರೂಪಶ್ರೀ ಶೆಟ್ಟಳಯ್ಯನವರು ಸೇರಿದಂತೆ ಇಬ್ಬರ ವಿಧ್ಯಾ ಅರ್ಹತೆ ಮತ್ತು ರಾಜಕೀಯ ಸಮರ್ಥತೆ ಪ್ರಬುದ್ಧ ರಾಜಕಾರಣದ ಹಾಗೂ ಉತ್ತಮ ಅಧಿಕಾರ ನಿಭಾಯಿಸುವ ಸಾಮಥ್ರ್ಯವನ್ನು ಗಮನಿಸಿದರೆ ರೂಪಶ್ರೀ ಶೆಟ್ಟಳಯ್ಯನವರು ಮೇಯರ್ ಗದ್ದುಗೆಯನ್ನು ನಿಭಾಯಿಸಲು ಸಮರ್ಥರು ಎನ್ನುವುದು ಪಾಲಿಕೆಯ ಸದಸ್ಯರ ಅಭಿಪ್ರಾಯವಾಗಿದೆ. ಆದರೆ ಎಡ ಸಮುದಾಯ ಎಂಬ ಕಾರಣಕ್ಕೆ ಮೇಯರ್ ಪಟ್ಟ ಒಲಿದು ಬಂದಿಲ್ಲ ಎಂಬ ಮಾತುಗಳು ಕೇಳಿಬರುತಿತ್ತು. ಎಡ ಸಮುದಾಯದ ಪ್ರಬಲ ವಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಕೊನೆಯ 6ತಿಂಗಳ ಅವಧಿಗೆ ರೂಪಶ್ರೀ ಶೆಟ್ಟಳಯ್ಯನವರಿಗೆ ಕೊನೆಯ ಅವಧಿಯಲ್ಲಿ ಅಧಿಕಾರ ದೊರೆಯುವ ಭರವಸೆÀ ದೊರೆತಿದೆಯಾದರು. ರಫಿಕ್ ಅಹಮದ್ ವಿರುದ್ಧ ಎಡ ಸಮುದಾಯ ಮುಖಂಡರು ತಿರುಗಿಬಿದ್ದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ