ತುಮಕೂರು
ಭಾರತ ಕಮ್ಯೂನಿಸ್ಟ ಪಕ್ಷ [ಮಾಕ್ರ್ಸವಾಧಿ] ರಾಜ್ಯ ಸಮಿತಿಯು ಸೆ.18 ರಾಜ್ಯ ಮಟ್ಟದ ರಾಜಕೀಂiÀi ಸಮಾವೇಶವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೆಪಲ್ಲಿಯಲ್ಲಿ ಅಯೋಜಿಸಿದೆ. ಕೇಂದ ್ರ- ರಾಜ್ಯ ಸರ್ಕಾರಗಳು ನಿರಂತರವಾಗಿ ಜನತೆಯ ಮೇಲೆ ನಡೆಸುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ದೇಶದ ಪರ್ಯಾಯ ಜನಪರ ನೀತಿಗಳಿಗಾಗಿ ಈ ಸಮಾವೇಶವನ್ನು ಸಂಘಟಿಸಲಾಗುತ್ತಿದೆ.
ನಿರಂತರವಾಗಿ ಬೆಲೆ ಏರಿಕೆಯ, ಹಣದುಬ್ಬರ, ಭ್ರಷ್ಠಾಚಾರ ದಂಧೆಯಲ್ಲಿ ತೊಡಗಿರುವ ಸರ್ಕಾರಗಳು ಜನತೆಯ ಸಂಕಷ್ಟಗಳನ್ನು ಬಗೆಹರಿಸದೆ ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಕಂಡರು ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೆ ಕಂಪನಿಗಳಿಗೆ ಲಾಭ ಜನತೆಗೆ ಕಷ್ಟವನ್ನು ನೀಡುತ್ತಿದೆ. ಆಹಾರಧಾನ್ಯಗಳ ಮೇಲೆ ಜಿ.ಎಸ್.ಟಿ. ಮೂಲಕ ಜನತೆಗೆ ಬರೆ ಎಳದಿರುವ ಸರ್ಕಾರ ವಸೂಲಾಗದ ಸಾಲ ಲಕ್ಷಾಂತರ ಕೋಟಿಗಳನ್ನು ವಸೂಲು ಮಾಡುವುದಿರಲಿ ಸಾಲ ಪಡೆದವರ ಹೆಸರುಗಳನ್ನು ಬಹಿರಂಗಪಡಿಸಲು ತಯಾರಿಲ್ಲದೆ ಬಂಡವಾಳಶಾಹಿ ವಂಚಕರನ್ನು ಸಂರಕ್ಷಿಸುತ್ತಿದೆ ಇದನ್ನು ಪಕ್ಷ ಖಂಢಿಸಿದೆ.
ಈ ಹಿನ್ನೆಲೆಯಲ್ಲಿ ನಡೆಯುವ ಸಮಾವೇಶವನ್ನು ಕೇರಳ ರಾಜ್ಯದ ಮುಖ್ಯ ಮಂತ್ರಿಗಳು ಸಿಪಿಐ[ಎಂ] ಪಾಲಿಟ್ ಬ್ಯೂರೋ ಸದಸ್ಯರಾದ ಕಾಂ; ಪಿಣರಾಯ್ ವಿಜಯನ್ ಅವರು ಉಧ್ಘಾಟಿಸಲಿದ್ದಾರೆ. ಈ ಸಭೆಯಲ್ಲಿ ಕೇರಳದ ಮಾಜಿ ಶಿಕ್ಷಣ ಸಚಿವರು, ಸಿಪಿಐ[ಎಂ] ಪಾಲಿಟ್ ಬ್ಯೂರೋ ಸದಸ್ಯರಾದ ಕಾಂ. ಎಂ.ಎ. ಬೇಬಿ, ಮತ್ತೊಬ್ಬ ಪಾಲಿಟ್ ಬ್ಯೂರೋ ಸದಸ್ಯರಾದ ಕಾಂ. ಬಿ.ವಿ.ರಾಘವಲು, ಸಿಪಿಐ[ಎಂ] ರಾಜ್ಯ ಕಾರ್ಯಧರ್ಶಿ ಕಾಂ.ಯು. ಬಸವರಾಜು, ಕಾರ್ಯಧರ್ಶಿ ಮಂಡಳಿ ಸದಸ್ಯರಾದ ಜಿ.ಸಿ ಬಯ್ಯಾರೆಡ್ಡಿ, ಡಾ. ಕೆ. ಪ್ರಕಾಶ್, ಮಿನಾಕ್ಷಿ ಸುಂದರಂ, ಕೆ.ನೀಲಾ, ಕೆ.ಎನ್. ಉಮೇಶ್, ಎಸ್. ವರಲಕ್ಷ್ಮಿ, ಸೈಯದ್ ಮುಜೀಬ್. ಗೋಪಾಲಕೃಷ್ಣ ಅರಳಹಳ್ಳಿ, ಯಾಧವ ಶೆಟ್ಟಿ, ಜಿ. ನಾಗರಾಜು ಅವರು ಭಾಗವಹಿಸಲಿದ್ದಾರೆ.
ಈ ಸಮಾವೇಶದ ಅಧ್ಯಕ್ಷತೆಯನ್ನು ಸಿಪಿಐ[ಎಂ] ರಾಜ್ಯ ಕಾರ್ಯಧರ್ಶಿ ಮಂಡಳಿ ಸದಸ್ಯರಾದ ಕಾಂ. ಮುನಿವೆಂಕಟಪ್ಪ ಅವರು ವಹಿಸಲಿದ್ದಾರೆ. ಈ ಸಮಾವೇಶಕ್ಕೆ ರಾಜ್ಯ ವಿವಿಧ ಜಿಲ್ಲೆಯಗಳಿಂದ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದು ಜಿಲ್ಲೆಯಿಂದ ಒಂದು ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಜನತೆಯ ಸಂಕಷ್ಟಗಳನ್ನು ಬಗೆಹರಿಸದೆ, ಭಷ್ಟಚಾರದಲ್ಲಿ ತುಂಬಿ ತುಳುಕುತ್ತಿರುವ ರಾಜ್ಯ ಸರ್ಕಾರ ಮಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸುತ್ತಿಲ್ಲ, ದುಡಿಯು ಜನತೆಗೆ ಬದುಕಲು ಯೋಗ್ಯ ಕನಿಷ್ಟ ಕೂಲಿ ನಿಗಧಿ ಮಾಡುತ್ತಿಲ್ಲ, ಲಂಚ ಪಡೆದ ಶಾಸಕರು / ಸಚಿವರು ರಾಜಾರೋಷವಾಗಿ ಇರುವುದು ನೋಡಿದರೆ ಲಚ್ಚೆಗಟ್ಟ ಸರ್ಕಾರ ಎಂಬುದು ಸ್ಪಷ್ಟವಾಗುತ್ತದೆ ಎಂದು ಸಿಪಿಐ [ ಎಂ] ಕಿಡಿಕಾರಿದೆ. ಜನತೆ ಐಕ್ಯತೆಯನ್ನು ಹೊಡೆಯುವ ಶಕ್ತಿಗಳಿಗೆ ಬೆಂಬಲವಾಗಿ ನಿಲ್ಲುವ ಸರ್ಕಾರ ಅಮಾಯಕ ಯುವ ಜನರಿ ಹೆಣಗಳ ಮೇಲೆ ತನ್ನ ರಾಜಕೀಯಾ ಬೇಳೆ ಬೇಯುಸುತ್ತಿದೆ. ಉದ್ಯೋಗ ಸೃಷ್ಟಿಯಲ್ಲಿ ಸೊತಿರುವ ಸರ್ಕಾರ, ಖಾಲಿ ಇರುವ ಉದ್ಯೋಗಗಳನ್ನು ಭರ್ತಿಗೆ ಮುಂದಾಗುತ್ತಿಲ್ಲ. ಅಲ್ಪ -ಸ್ಪಲ್ಪ ಭರ್ತಿ ಮಾಡುತ್ತಿರುವುದು ಅರ್ಹರಿಗೆ ಉದ್ಯೋಗ ನೀಡದೆ ಉನ್ನತ ಮಟ್ಟದ ಅಧಿಕಾರಿಗಳು / ಸಚಿವರು/ ಶಾಸಕರೆ ಲಂಚ ಪಡೆದಿರುವುದು ಪೋಲಿಸ್ ಇಲಾಖೆಯ ನೇಮಕಾತಿ ಪ್ರಕಿಯೆಯಲ್ಲಿ ಸ್ಪಷ್ಟವಾಗಿ ಕಂಡಿದೆ ಎಂದು ಕಟುವಾಗಿ ಟೀಕಿಸಿರುವ ಸಿಪಿಐ [ ಎಂ] ಜನತೆ ಲಂಚಕೋರ ಸರ್ಕಾರವನ್ನು ಕಿತ್ತೆಸಯಬೇಕಾಗಿದೆ.