ತುಮಕೂರು
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ, ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರ ಅಲ್ಪಸಂಖ್ಯಾತರಅಭಿವೃದ್ಧಿಗೆಅಪಾರ ಕೊಡುಗೆಗಳನ್ನು ನೀಡಿದೆ. ಅಲ್ಪ
ಸಂಖ್ಯಾತರಿಗಾಗಿ ಕೋಟ್ಯಾಂತರ ರೂಪಾಯಿ ಅನುದಾನ ನೀಡಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸರ್ಕಾರದ ಕೊಡುಗೆಗಳನ್ನು ಮನೆಮನೆಗೆ ಪ್ರಚಾರ ಮಾಡಿ, ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ರಾಜ್ಯ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಉಪಾಧ್ಯಕ್ಷ ಸಿರಾಜುದ್ದೀನ್ ಕಾರ್ಯಕರ್ತರಿಗೆ ಮನವಿ ಮಾಡಿದರು.
ನಗರದಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಬಿಜೆಪಿ ಜಿಲ್ಲಾಅಲ್ಪಸಂಖ್ಯಾತರ ಮೋರ್ಚಾದ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರು ಬಿಜೆಪಿ ಹಾಗೂ ಬಿಜೆಪಿ ಸರ್ಕಾರಗಳ ಬಗ್ಗೆ ಅಲ್ಪಸಂಖ್ಯಾತರಲ್ಲಿ ಅಪಪ್ರಚಾರ ಮಾಡುವ ಮೂಲಕ ಗೊಂದಲ ಸೃಷ್ಟಿಸುವ ಪ್ರಯತ್ನಮಾಡುತ್ತಿದ್ದಾರೆ.ಅಂತಹವುಗಳಿಗೆ ಕಿವಿಗೊಡದೆ ಅಲ್ಪ
ಸಂಖ್ಯಾತರಿಗೆ ಬಿಜೆಪಿ ಸರ್ಕಾರ ನೀಡಿರುವ ಕೊಡುಗೆಗಳನ್ನು ಸದ್ಬಳಕೆ ಮಾಡಿಕೊಂಡು, ಬಿಜೆಪಿಯನ್ನು ಬೆಂಬಲಿಸುವಂತೆ ಅಲ್ಪಸಂಖ್ಯಾತರಿಗೆ ಮನವರಿಕೆ ಮಾಡಿಕೊಡಬೇಕುಎಂದು ಕಾರ್ಯಕರ್ತರಿಗೆ ತಿಳಿಸಿದರು.
ಬಿಜೆಪಿ ಹಾಗೂ ನಮ್ಮ ಸರ್ಕಾರ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದು ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೆರವಾಗಬೇಕು ಎಂದು ಸಿರಾಜುದ್ದೀನ್ ಹೇಳಿದರು.
ತುಮಕೂರು ನಗರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಹಾಗೂ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಶಬ್ಬೀರ್‍ಅಹ್ಮದ್ ಮಾತನಾಡಿ, ಬಿಜೆಪಿ ಕೋಮುವಾದಿ ಪಕ್ಷ, ಅಲ್ಪಸಂಖ್ಯಾತರಿಗೆರಕ್ಷಣೆಕೊಡುವುದಿಲ್ಲ ಎಂದು ಬೇರೆ ಪಕ್ಷದವರು ಭಯ ಹುಟ್ಟಿಸುತ್ತಾ ಅಪಪ್ರಚಾರ ಮಡುತ್ತಿದ್ದಾರೆ, ಅದೆಲ್ಲವೂ ಸುಳ್ಳು ನಾನು 25 ವರ್ಷದಿಂದ ಬಿಜೆಪಿಯಲ್ಲಿದ್ದೇನೆ, ಪಕ್ಷದ ಮುಖಂಡರು ಅಲ್ಪಸಂಖ್ಯಾತರನ್ನು ಗೌರವದಿಂದ ಕಾಣುತ್ತಾರೆ. ಇನ್ನು ಮುಂದೆಅಲ್ಪಸಂಖ್ಯಾತರು ಬೇರೆ ಪಕ್ಷಗಳ ಮಾತಿಗೆ ಮಣೆ ಹಾಕದೆ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ವಿನಂತಿಸಿದರು.
ಬೆಂಗಳೂರಿನಲ್ಲಿ ಹಜ್ ಭವನ ನಿರ್ಮಾಣ ಮಾಡಿದ್ದು ಬಿಜೆಪಿ ಸರ್ಕಾರ.ನೆನೆಗುದಿಗೆ ಬಿದ್ದಿದ್ದ ಹಜ್ ಭವನಕಾಮಗಾರಿಗೆಅಗತ್ಯಅನುದಾನ ನೀಡಿ ನಿರ್ಮಾಣವಾಗಲುಕಾರಣವಾಗಿದ್ದು ಆಗಿನ ಮುಖ್ಯಮಂತ್ರಿ ಸದಾನಂದಗೌಡರುಎಂದು ಶಬ್ಬೀರ್‍ಅಹ್ಮದ್ ಹೇಳಿದರು.
ಜಿಲ್ಲಾ ಬಿಜೆಪಿ ವಕ್ತಾರ ಕೆ.ಪಿ.ಮಹೇಶ್ ಮಾತನಾಡಿದರು. ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಫರ್ಜಾನಾ ರಹೀಂಜೀ, ನಗರ ಉಪಾಧ್ಯಕ್ಷ ರಫಿಕ್‍ಅಹ್ಮದ್, ಮುಖಂಡರಾದ ಸೈಯದ್ ಶಬ್ಬೀರ್, ದಾದಾಪೀರ್, ಸೈಯದ್ ಇಸ್ಮಾಯಿಲ್, ಆಲಿದ್‍ಇಕ್ಬಾಲ್, ತಬ್ರೇಜ್ ಪಾಷ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.