ತುಮಕೂರು
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಗಮ ನಿಯಮಿತದ ವಿದ್ಯುತ್ ಮೇಲು ಮಾರ್ಗಗಳ (ಓವರ್ ಹೆಡ್ ಲೈನ್ಸ್ ಮಾರ್ಗದ) ಕೆಳಗೆ ಕಟ್ಟಡಗಳನ್ನು ನಿರ್ಮಿಸುವುದು ಹಾಗೂ ಪಕ್ಕದಲ್ಲಿ ಹಾದುಹೋಗುವ ಸಂದರ್ಭಗಳಲ್ಲಿ ಸೂಕ್ತ ಅಂತರ ಕಾಪಾಡದೇ ಕಟ್ಟಡ ಕಟ್ಟುವುದು, ಅಇಂ(ಒeಚಿsuಡಿes ಡಿeಟಚಿಣiಟಿg ಣo sಚಿಜಿeಣಥಿ ಚಿಟಿಜ eಟeಛಿಣಡಿiಛಿ suಠಿಠಿಟಥಿ) ಖeguಟಚಿಣioಟಿs 2010ರ ಅನುಬಂಧನೆಗಳನ್ವಯ ನಿಷೇಧಿಸಲಾಗಿರುತ್ತದೆ ಎಂದು ಬೆವಿಕಂ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಬಂಧನೆಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ಸುರಕ್ಷತಾ ಅಂತರ ಕಾಪಾಡದೇ ನಿರ್ಮಿಸುವುದು. ನಿರ್ಮಿಸಿರುವ ಕಟ್ಟಡಗಳಲ್ಲಿ ವಾಸಿಸುತ್ತಿರುವುದು ಹಾಗೂ ಹಾಗೇ ನಿಯಮಬಾಹಿರವಾಗಿ ನಿರ್ಮಿಸುವ ಕಟ್ಟಡಗಳ ಛಾವಣಿಗಳ ಮೇಲೆ ಇತರೆ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು, ವಿದ್ಯುತ್ ಕಂಬ/ಗೋಪುರಗಳಿಗೆ ಹೊಂದಿಕೊಂಡಂತೆ ಕಟ್ಟಡಗಳನ್ನು/ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸುವುದು ಮತ್ತು ಕಂಬಗಳಿಗೆ ಬ್ಯಾನರ್‍ಗಳು ಮತ್ತು ಬಂಟಿಂಗ್‍ಗಳನ್ನು ಕಟ್ಟುವುದು, ಅಡಿಕೆ, ತೆಂಗು ಮತ್ತು ತೋಟಗಳನ್ನು ಮತ್ತು ನೀಲಗಿರಿ ಮರಗಳನ್ನು ಬೆಳೆಸುವುದು ಮತ್ತು ಕಬ್ಬಿಣದ ರೋಟಿಗಳನ್ನು ಬಳಸುವುದು, ವಿದ್ಯುತ್ ಮಾರ್ಗದ ಕೆಳಗಡೆ ಸಾರ್ವಜನಿಕ/ ಮಕ್ಕಳ ಆಟದ ಉದ್ಯಾನವನ ನಿರ್ಮಿಸುವುದು, ವಿದ್ಯುತ್ ಮಾರ್ಗಗಳ ಸನಿಹದಲ್ಲಿ ಗಾಳಿಪಟ ಹಾರಿಸುವುದು ಮತ್ತು ಬಟ್ಟೆಗಳನ್ನು ಒಣಗಿಸುವುದು ಅತ್ಯಂತ ಅಪಾಯಕಾರಿಯಾಗಿರುತ್ತದೆ ಮತ್ತು ಇಂತಹ ಚಟುವಟಿಕೆಗಳಿಂದ ವಿದ್ಯುತ್ ಅಪಘಾತಗಳು ಸಂಭವಿಸಿ ಸಾರ್ವಜನಿಕರ ಪ್ರಾಣ ಹಾನಿ ಮತ್ತು ಆಸ್ತಿ – ಪಾಸ್ತಿಗಳಿಗೆ ನಷ್ಟ ಸಂಭವಿಸುತ್ತಿವೆ. ಆದ್ದರಿಂದ ಸಿ.ಇ.ಎ ಅಧಿನಿಯಮಗಳನುಸಾರ ಅಧಿಕ ಒತ್ತಡ ವಿದ್ಯುತ್ ಮಾರ್ಗಗಳಿಂದ ಕನಿಷ್ಠ ಸಮಾನಾಂತರವನ್ನು ಕಡ್ಡಾಯವಾಗಿ ಪಾಲಿಸುವುದು ಎಲ್ಲಾ ಸಾರ್ವಜನಿಕರ ಹೊಣೆಯಾಗಿದ್ದು, ಸುರಕ್ಷತಾ ದೃಷ್ಟಿಯಿಂದ ಅಸುರಕ್ಷಿತ ಕಟ್ಟಡದ ಭಾಗಗಳನ್ನು ತೆರವುಗೊಳಿಸಲು ಅವರು ಕೋರಿದ್ದಾರೆ.
ಅಧಿಕ ವಿದ್ಯುತ್ ಮಾರ್ಗಗಳ ಆಸುಪಾಸಿನಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳಿಗೆ ಕನಿಷ್ಠ ಸಮಾನಾಂತರಗಳನ್ನು ಅಇಂ (ಒeಚಿsuಡಿes ಡಿeಟಚಿಣiಟಿg ಣo sಚಿಜಿeಣಥಿ ಚಿಟಿಜ eಟeಛಿಣಡಿiಛಿ suಠಿಠಿಟಥಿ) ಖeguಟಚಿಣioಟಿs 2010ರ ಅನುಬಂಧ-61(3)(iii) ಅನ್ವಯ ಸುರಕ್ಷತಾ ಅಂತರವನ್ನು ಕಾಪಾಡಲು ಮತ್ತು ಮೇಲೆ ತಿಳಿಸಿರುವ ಅಸುರಕ್ಷತಾ ಚಟುವಟಿಕೆಗಳನ್ನು ಮಾಡಬಾರದೆಂದು ಅವರು ಕೋರಿದ್ದಾರೆ.
ನಿಯಮಬಾಹಿರವಾಗಿ ನಿರ್ಮಿಸಿರುವ/ ನಿರ್ಮಿಸುತ್ತಿರುವ ಕಟ್ಟಡಗಳು ಹಾಗೂ ಅಸುರಕ್ಷಿತ ಚಟುವಟಿಕೆಗಳಿಂದ ಆಗುವ ವಿದ್ಯುತ್ ಅಪಘಾತಗಳಿಂದ ಸಾರ್ವಜನಿಕರಿಗೆ ಪ್ರಾಣ ಹಾನಿ ಹಾಗೂ ಆಸ್ತಿ ಪಾಸ್ತಿಗೆ ನಷ್ಟವಾದಲ್ಲಿ ಹಾಗೂ ಇನ್ನಿತರೆ ಯಾವುದೇ ಅವಘಡಗಳಿಗೆ ಬೆ.ವಿ.ಕಂ ಯಾವುದೇ ರೀತಿ ಜವಾಬ್ದಾರಿಯಾಗಿರುವುದಿಲ್ಲ ಹಾಗೂ ಇಂತಹ ಅವಘಡಗಳಿಗೆ ಸಂಬಂಧಪಟ್ಟ ಕಟ್ಟಡಗಳ ಮಾಲೀಕರು/ ಕಟ್ಟಡದಲ್ಲಿ ವಾಸಿಸುವವರು ಮತ್ತು ಈ ರೀತಿಯ ಕಟ್ಟಡಗಳಿಗೆ ಅಗತ್ಯ ಸೌಕರ್ಯ ಕಲ್ಪಿಸುವ ಸಂಬಂಧಿಸಿದ ಇಲಾಖೆಗಳೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.