ಮಧುಗಿರಿ
ಕೆ. ಎನ್ ರಾಜಣ್ಣ ಶಾಸಕರಾಗಿದ್ದ ಅವಧಿಯಲ್ಲಿ ಮಲೆ ರಂಗನಾಥ ಸ್ವಾಮಿ ದೇವಾಲಯದ ಅಭಿವೃದ್ಧಿಗಾಗಿ ಒಂದು ಕೋಟಿಗೂ ಹೆಚ್ಚಿನ ಅನುದಾನ ನೀಡಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಆರ್ ರಾಜೇಂದ್ರ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಮಲೆ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಕೆ. ಎನ್ ರಾಜಣ್ಣ ಕುಟುಂಬದ ವತಿಯಿಂದ ನಡೆದ ವಿಶೇಷ ಪೂಜೆ ಹಾಗೂ ಅನ್ನದಾಸೋಹ ನೆರವೇರಿಸಿ ಮಾತನಾಡಿದ ಅವರು ಕೆ.ಎನ್. ರಾಜಣ್ಣನವರು ದೇವಸ್ಥಾನದ ಅಬಿವೃದ್ದಿಗೆ ಶ್ರಮಿಸಿದ್ದು, ಅದರಲ್ಲೂ ವಿಶೇಷವಾಗಿ ಬೆಟ್ಟದ ಮೇಲೆ ಕುಡಿಯುವ ನೀರಿನ ವ್ಯವಸ್ಥೆಗಾಗಿ 40 ಲಕ್ಷ ರೂ ನೀಡಿದ್ದನ್ನು ಸ್ಮರಿಸಿದವರು. ಕೆ. ಎನ್ ರಾಜಣ್ಣ ಶಾಸಕರಾಗಿ ಆಯ್ಕೆಯಾದರೆ ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡುವುದು, ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಕೆ,
ಎತ್ತಿನಹೊಳೆ ಯೋಜನೆ ಅನುಷ್ಠಾನ, ರೈಲ್ವೆ ಕಾಮಗಾರಿ ಪ್ರಾರಂಭಿಸಲು ಸಹಾಯವಾಗುತ್ತದೆ ಎಂದರು.
ಜಿ.ಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ ಮಾತನಾಡಿ ವಿಧಾನ ಪರಿಷತ್ ಚುನಾವಣಾ ಸಂದರ್ಭದಲ್ಲಿ ರಾಜೇಂದ್ರರಾಜಣ್ಣನವರ ಗೆಲುವಿಗೆ ಒಗ್ಗಟ್ಟು ಪ್ರದರ್ಶಿಸಿದ್ದರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅದೇ ರೀತಿಯಲ್ಲಿ ಒಗ್ಗಟ್ಟು ಪ್ರದರ್ಶಿಸಿ
ಕೆ ಎನ್ ರಾಜಣ್ಣ ರವರ ಗೆಲುವಿಗೆ ಶ್ರಮಿಸಬೇಕು. ಕೆ ಎನ್ ರಾಜಣ್ಣನವರು ಎಲ್ಲಾ ಜನಾಂಗವನ್ನು ಸಮಾನವಾದ ರೀತಿಯಲ್ಲಿ ನೋಡುತ್ತಿದ್ದು, ಎಲ್ಲಾ ಜನಾಂಗಕ್ಕೂ ನ್ಯಾಯ ದೊರಕಿಸಿಕೊಡಲು ಬದ್ಧರಾಗಿರುತ್ತಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ, ಡಿ.ಸಿ.ಸಿ ನಿರ್ದೇಶಕ ಬಿ. ನಾಗೇಶ್ ಬಾಬು, ಮುಖಂಡರಾದ ಆದಿನಾರಾಯಣ ರೆಡ್ಡಿ, ಸಾವಿತ್ರಮ್ಮ ಡಿ ಎಚ್ ನಾಗರಾಜು, ಎಂ.ಬಿ. ಮರಿಯಣ್ಣ,
ಮಹಾಲಿಂಗೇಶ್, ಮಂಜುನಾಥ್, ಶನಿವಾರಂ ರೆಡ್ಡಿ, ಕೇಶವ್ ಮೂರ್ತಿ, ಫಾಜೀಲ್ ಖಾನ್, ಲಕ್ಷ್ಮೀನರಸೇಗೌಡ, ಕಾಂತರಾಜು, ರಾಜ್ ಕುಮಾರ್, ಮಂಜಣ್ಣ, ಆಶಾ , ಕರಿಯಣ್ಣ, ಮಾಲಿಮರಿಯಪ್ಪ. ಟಿವಿಎಸ್ ಮಂಜು , ನಾಗಾರ್ಜುನ್, ಪ್ರಾ,ಕೃ,ಪ,ಸಂಘ ಸದಸ್ಯರುಗಳು ,ಗ್ರಾ,ಪಂ, ಸದಸ್ಯರು ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕೆ ಎನ್ ಆರ್ & ಆರ್ ಆರ್ ಅಭಿಮಾನಿಗಳು ಹಾಜರಿದ್ದರು.