ತುಮಕೂರು
ವಿದ್ಯಾರ್ಥಿಗಳು ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಮಾರುಕಟ್ಟೆಯ ಅಗತ್ಯತೆಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಚಾಣಾಕ್ಷತೆಯನ್ನು ತೋರಬೇಕಿದೆ ಎಂದು ಮಹಿಂದ್ರಾ ಮತ್ತು ಮಹಿಂದ್ರಾ ರೀಸರ್ಚ್ ವ್ಯಾಲಿಯ ಉಪಾಧ್ಯಕ್ಷ ಡಾ.ಶಂಕರ್ ವೇಣುಗೋಪಾಲ್ ಹೇಳಿದ್ದಾರೆ.
ನಗರದ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ 13ನೇ ವರ್ಷದ ಪದವಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಸೃಜನಶೀಲ ಮೆದುಳಿಗೆ ನಿಯಂತ್ರಣವನ್ನು ನೀಡಿ, ಊಹೆಗಳಿಗೆ ಸವಾಲೊಡ್ಡಿ ಎಂದು ಹೇಳಿದರು.
ವಿದ್ಯಾರ್ಥಿಗಳು ವಿಭಿನ್ನ ಆಲೋಚನೆಗಳಿಗೆ ಸಾಕಷ್ಟು ಸಮಯವನ್ನು ನೀಡಿ ಮುನ್ನಡೆಯಬೇಕಿದೆ.ಆರಂಭಿಕ ನಿಬರ್ಂಧಗಳನ್ನು ಗುರುತಿಸಿ, ಸರಿಯಾದ ದಿಕ್ಕಿನಲ್ಲಿ ಕಲ್ಪನೆಯನ್ನು ರೂಪಿಸಲು ಪರಿಪಕ್ವ ಜ್ಞಾನವನ್ನು ಬಳಸಿ.ನಾವೀನ್ಯತೆಯೆಂಬುದು ಒಳನೋಟವುಳ್ಳ ಮೌಲ್ಯವನ್ನು ಸೃಷ್ಟಿಸುತ್ತದೆ ಮತ್ತು ನಿಮ್ಮ ಆಲೋಚನೆಗಳನ್ನು ಯಶಸ್ವಿಯಾಗಿ ಮಾರುಕಟ್ಟೆಗೆ ತರುತ್ತದೆ ಎಂದು ಇಂಜಿನಿಯರಿಂಗ್ ಪದವಿಧರರಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗಸ್ವಾಮೀಜಿ ಮಾತನಾಡಿ,ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ದೇಶದ ಸರಾಸರಿಗಿಂತಲೂ ಹೆಚ್ಚು ಅಂದರೆ ಶೇ39ರಷ್ಟು ಹೆಣ್ಣು ಮಕ್ಕಳು ಕಲಿಯುವ ಮೂಲಕ 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪದ ಮಹಿಳಾ ಸಬಲೀಕರಣದ ಕನಸನ್ನು ನನಸು ಮಾಡಲು ಮಾಡಿದ್ದಾರೆ ಎಂದು ತಿಳಿಸಿದರು.
ಲಿಂಗ, ಜಾತಿ,ಧರ್ಮ,ವರ್ಗ,ವರ್ಣ ಭೇಧವಿಲ್ಲದೆ ಎಲ್ಲರಿಗೂ ಅಡಳಿತದಲ್ಲಿ ಅವಕಾಶ ದೊರೆಯುಬೇಕು ಎಂಬ ಬಸಣ್ಣವನರ ಆಶಯ ವನ್ನು ಲಿಂಗೈಕ್ಯ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಆಶೀರ್ವಾದದಿಂದ ಸಾಧ್ಯವಾಗಿದೆ.ಭಾರತದ ಸರಾಸರಿಯಲ್ಲಿ ಶೇ20ರಷ್ಟು ಹೆಣ್ಣು ಮಕ್ಕಳು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಷಯಗಳನ್ನು ಕಲಿಯುತಿದ್ದರೆ, ಎಸ್.ಐ.ಟಿ.ಯಲ್ಲಿ ಶೇ39ರಷ್ಟು ಹೆಣ್ಣು ಮಕ್ಕಳು ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಉದ್ಯೋಗಾವಕಾಶಗಳಲ್ಲಿಯೂ ಎಸ್.ಐ.ಟಿ ಮುಂದಿದ್ದು, ಕಳೆದ ವರ್ಷ 1400 ವಿದ್ಯಾರ್ಥಿಗಳು ಪ್ಲೆಸ್‍ಮೆಂಟ್ ಕ್ಯಾಂಪಸ್ ಸೆಲಕ್ಷನ್ ನಲ್ಲಿ ಆಗಿದೆ. ವಾರ್ಷಿಕ 46 ಲಕ್ಷ ರೂಗಳ ವೇತನ ಪಡೆದಿರುವುದು ಹೆಮ್ಮೆಯ ವಿಚಾರ.ಭಾರತ ಯುವಜನತೆಯನ್ನೇ ಹೆಚ್ಚಾಗಿ ಹೊಂದಿರುವ ದೇಶ.ದೇಶದ ಒಟ್ಟಾರೆ ಜನಸಂಖ್ಯೆಯ ಶೇ65ರಷ್ಟು ಜನರು 35 ವರ್ಷದ ಒಳಗಿನ ಯುವಕರಾಗಿದ್ದಾರೆ.ಪ್ರಧಾನಿ ನರೇಂದ್ರಮೋದಿ ಅವರ ಆಶಯದಂತೆ ಈ ಯುವ ಶಕ್ತಿ ದೇಶ ಕಟ್ಟುವಲ್ಲಿ ಬಳಕೆಯಾಗಬೇಕೆಂಬುದು ನಮ್ಮ ಆಶಯವಾಗಿದೆ. ಸಂಶೋಧನೆ ಮತ್ತು ಉದ್ದಿಮೆ ಸ್ಥಾಪನೆ ಭಾರತದ ಅರ್ಥಿಕ ಬೆಳವಣಿಗೆ ಮತ್ತು ದೇಶದ ಸುಸ್ಥಿರ ಅಭಿವೃದ್ದಿಗೆ ಸಹಕಾರಿ ಯಾಗಲಿದೆ.ಸಂಶೋಧನೆ,ಉದ್ದಿಮೆ ಸ್ಥಾಪನೆಗೆ ಪೂರಕವಾಗಿರಬೇಕು ಎಂಬ ಕಾರಣಕ್ಕೆ ಶಿಕ್ಷಣ ಮತ್ತು ಕೈಗಾರಿಕೆಗಳನ್ನು ಒಗ್ಗೂಡಿ ಸುವ ಕೆಲಸ ನಡೆಯುತ್ತಿದೆ ಎಂದು ಸ್ವಾಮೀಜಿ ನುಡಿದರು.
ಇಂದು ನಡೆದ 13ನೇ ಪದವಿ ಪ್ರಧಾನ ಸಮಾರಂಭದಲ್ಲಿ 911 ಬಿ.ಇ,337 ಎಂ.ಟೆಕ್ ವಿಧ್ಯಾರ್ಥಿಗಳು ಪದವಿ ಆರ್ಹತಾ ಪತ್ರ ಪಡೆದಿದ್ದು, ಎಸ್.ಐ.ಟಿ ಹಾಗೂ ದಾನಿಗಳು ನೀಡಿರುವ ಸುಮಾರು 60 ಚಿನ್ನದ ಪದಕಗಳನ್ನು 31 ಜನ ವಿದ್ಯಾರ್ಥಿಗಳು ಪಡೆದಿದ್ದು, 12 ಪುರುಷರು ಮತ್ತು 22 ಜನ ಮಹಿಳೆಯರು ಹಂಚಿಕೊಂಡಿದ್ದಾರೆ. ಬಯೋಟೆಕ್ನಾಲಿಜಿಯ ವಿದ್ಯಾರ್ಥಿನಿ ಅತಿ ಹೆಚ್ಚು ಅಂಕ ಪಡೆದು, ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಚಿನ್ನದ ಪದಕ ಪಡೆದಿದ್ದಾರೆ.
ವೇದಿಕೆಯಲ್ಲಿ ಎಸ್.ಐ.ಟಿ. ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ಸಿಇಓ ಡಾ.ಶಿವಕುಮಾರಯ್ಯ, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ವಿ.ದಿನೇಶ್ ಹಾಗೂ ಎಸ್.ಐ.ಟಿ ಕಾಲೇಜಿನ ಎಲ್ಲಾ ವಿಷಯಗಳ ಮುಖ್ಯಸ್ಥರು ಉಪಸ್ಥಿತರಿದ್ದರು.