ತುಮಕೂರು
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಒಂದು ರಾಜ್ಯ ಮಟ್ಟದ ವಿಶ್ವವಿದ್ಯಾಲಯವಾಗಿದ್ದು , ಲಕ್ಷಾಂತರ ವಿದ್ಯಾರ್ಥಿಗಳು ಈ ವಿ.ವಿ ಅಧೀನ ಕಾಲೇಜುಗಳಲ್ಲಿ ವಿದ್ಯಾಭ್ಯಾಸವನ್ನು ನಡೆಸುತ್ತಿದ್ದಾರೆ . ಈ ಸಮಾಜದಲ್ಲಿ ಹಲವಾರು ಉತ್ತಮ ಗುಣಮಟ್ಟದ ಅಭಿಯಂತರರು ಈ ವಿ.ವಿ ಯಿಂದ ಪದವಿಯನ್ನು ಹೊಂದಿದ್ದು ವಿ.ವಿ ಯು ಉತ್ತಮವಾದ ಹೆಸರನ್ನು ಹೊಂದಿದೆ.
ವಿ.ಟಿ.ಯು ವಿ.ವಿ ಯು ಕಾನೂನು ಬದ್ಧವಾಗಿ 10% ಶುಲ್ಕವನ್ನು ಏರಿಕೆ ಮಾಡಬೇಕಾಗಿತ್ತು , ಆದರೆ ಯಾವುದೇ ಪರಿಮಿತಿಯನ್ನು ಅನುಸರಿಸದೆ ವಿ.ವಿ ಯು ಶುಲ್ಕವನ್ನು ಏರಿಕೆ ಮಾಡಿರುತ್ತದೆ , ವಿ.ವಿ ಯ ಈ ನಡೆಯನ್ನು ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ .
ಇಂಜಿನಿಯರಿಂಗ್ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು 25%, ಅಂಕಪಟ್ಟಿ ಶುಲ್ಕವನ್ನು 100% , ಡಿಗ್ರಿ ಸರ್ಟಿಫಿಕೇಟ್ ನೀಡಲು 50% ಶುಲ್ಕ ಏರಿಕೆ . ಈ ರೀತಿಯಾಗಿ ಎಲ್ಲಾ ವಿಭಾಗದ ನೂತನವಾದ ಶುಲ್ಕ ಪಟ್ಟಿಯನ್ನು ವಿ.ವಿ ಯು ಹೊರಡಿಸಿದ್ದು , ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಕಾನೂನು ಬದ್ಧವಲ್ಲದ ಈ ರೀತಿಯ ಶುಲ್ಕ ಏರಿಕೆಯನ್ನು ಂಃಗಿP ಖಂಡಿಸುತ್ತದೆ ಹಾಗೂ 10% ಗಿಂತ ಅಧಿಕವಾಗಿ ಏರಿಸಿರುವ ಶುಲ್ಕಗಳನ್ನು ಕೂಡಲೇ ಖಡಿತಗೊಳಿಸ ಬೇಕಾಗಿ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್, ತುಮಕೂರು ಆಗ್ರಹಿಸುತ್ತದೆ.
ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಹೋರಾಟ ಮಾಡಿ ನಂತರ ಮಾನ್ಯ ಉನ್ನತ ಶಿಕ್ಷಣ ಸಚಿವರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು. ಈ ಹೋರಾಟದಲ್ಲಿ ಎ ಬಿ ವಿ ಪಿ ತುಮಕೂರು ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್ ಜಿಲ್ಲಾ ಸಂಚಾಲಕ ಗಣೇಶ್ ಕಾರ್ಯಕರ್ತರಾದ ಗುರುಪ್ರಸಾದ್ , ವೆಂಕಟೇಶ್, ಲಿಖಿತ್, ಗುರು, ಹರೀಶ್, ಸಂತೋಷ್, ಮೋನಿಶ್, ಚರಣ , ತರುಣ್ , ಪೂಜಾ , ನಿತಾಶ್ರೀ, ಜ್ಯೋತಿ, ರಚನಾ, ರಮ್ಯ , ವಿಜಯಲಕ್ಷಿ ಹಾಗೂ ನೂರಾರು ವಿದ್ಯರ್ಥಿಗಳು ಪಾಲ್ಗೊಂಡಿದರು.