ತುಮಕೂರು
ನಗರದ ಸರಕಾರಿ ಜೂನಿಯರ್ ಕಾಲೇಜು ಮೈಧಾನದಲ್ಲಿ ಚಕ್ರವರ್ತಿ ಗೆಳೆಯರ ಬಳಗದಿಂದ ಆಯೋಜಿಸಿದ್ದ ಕರ್ನಾಟಕ ರತ್ನ ಡಾ.ಪುನಿತ್ ರಾಜ್‍ಕುಮಾರ್ ಅವರ ಸ್ಮರಣಾರ್ಥವಾಗಿ ಹೊಮ್ಮಿಕೊಂಡಿರುವ 5ನೇ ವರ್ಷದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಟೆನ್ನಿಸ್‍ಬಾಲ್ ಕ್ರಿಕೆಟ್‍ನ ಅಪ್ಪು ಚಾಂಪಿಯನ್ಸ್ ಟ್ರೋನಿ ಗುರುವಾರ ಸಂಜೆ ವಿದ್ಯುಕ್ತವಾಗಿ ಚಾಲನೆ ದೊರೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಹುಲ್‍ಕುಮಾರ ಶಹಾಪೂರ್‍ವಾಡ್ ಅವರು ಜೋತಿ ಬೆಳೆಸಿ,ಟೇಫ್ ಕತ್ತರಿಸುವ ಮೂಲಕ ಹೊನಲು ಬೆಳಕಿನ ನೌಕೌಂಟ್ ಕಂ ಲೀಗ್ ಟೂರ್ನಿಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಇಂತಹ ಕ್ರೀಡಾಕೂಟಗಳು ಯುವಜನರು ತಮ್ಮಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯನ್ನು ಕಲ್ಪಿಸುತ್ತೇವೆ.ಕ್ರೀಡೆಯನ್ನು ಪ್ರೋತ್ಸಾಹಿಸುವ ಮೂಲಕ ಚಕ್ರವರ್ತಿ ಗೆಳೆಯರ ಬಳಗ ಒಳ್ಳೆಯ ಕೆಲಸ ಮಾಡುತ್ತಿದೆ. ಐದನೇ ವರ್ಷದ ಟೂರ್ನಿ 100ನೇ ವರ್ಷದ ಟೂರ್ನಿಯವರೆಗೆ ಮುಂದುವರೆಯುವಂತಾಗಲಿ ಎಂದು ಶುಭ ಹಾರೈಸಿದರು.
ಜಾತ್ಯಾತೀತ ಮಾನವ ವೇದಿಕೆಯ ಟಿ.ಆರ್.ಆಂಜನಪ್ಪ ಮಾತನಾಡಿ,ಅಪ್ಪು ಚಾಂಪಿಯನ್ಸ್ ಟ್ರೋಫಿ ಹೆಸರಿನಲ್ಲಿ ಚಕ್ರವರ್ತಿ ಗೆಳೆಯರ ಬಳಗದ ಯುವಜನರಿಗೆ ಸ್ಪೂರ್ತಿದಾಯಕರಾಗಿರುವ ಡಾ.ಪುನಿತ್ ರಾಜಕುಮಾರ್ ಹೆಸರಿನಲ್ಲಿ ಆಯೋಜಿಸಿ ರುವುದು ಒಳ್ಳೆಯ ಬೆಳವಣಿಗೆ.ಆಟೋಟಗಳು ಮನುಷ್ಯನಿಗೆ ಒಂದು ಗುರಿಯಡೆಗೆ ತಲುಪುವ ಮನಸ್ಥಿತಿಯನ್ನು ಸೃಷ್ಟಿಸುತ್ತೇವೆ.ಹಾಗಾಗಿ ಇಂತಹ ಕ್ರೀಡಾಕೂಟಗಳು ಹೆಚ್ಚಾಗಬೇಕೆಂದರು.
ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ,ತುಮಕೂರು ನಗರದಲ್ಲಿ ಕ್ರೀಡೆಯ ಜೊತೆಗೆ ಸಾಂಸ್ಕøತಿಕ ಉತ್ಸವಗಳು ನಿರಂತರವಾಗಿ ನಡೆಯುವುದನ್ನು ಕಾಣಬಹುದಾಗಿದೆ.ಅಪ್ಪು ಅವರ ಹೆಸರಿನ ಈ ಕ್ರೀಡಾಕೂಟದಲ್ಲಿ ಹೊರರಾಜ್ಯದ ತಂಡಗಳು ಭಾಗವಹಿಸಿ ರುವುದು ಸಂತೋಷದ ವಿಚಾರವಾಗಿದೆ.ಅವರಿಗೆ ಬೇಕಾದ ಊಟ, ವಸತಿ ವ್ಯವಸ್ಥೆಯನ್ನು ಚಕ್ರವರ್ತಿ ಗೆಳೆಯರ ಬಳಗ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿದೆ.ತುಮಕೂರು ದಾಸೋಹಕ್ಕೆ ಹೆಸರುವಾಸಿ,ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ,ಗುಬ್ಬಿಯ ಹೆಲಿಕ್ಯಾಪ್ಟರ್ ಘಟಕ ಹೊಂದಿರುವ ತುಮಕೂರು ಜಿಲ್ಲೆಗೆ ಒಂದು ಅಂತರರಾಷ್ಟ್ರೀಯ ಪಂದ್ಯಗಳನ್ನಾಡುವ ಪ್ರತ್ಯೇಕ ಕ್ರಿಕೆಟ್ ಸ್ಟೇಡಿಯಂ ಇದ್ದರೆ ಒಳ್ಳೆಯದು. ಈ ನಿಟ್ಟಿನಲ್ಲಿ ಕ್ರೀಡಾಸಕ್ತರು ಗಮನಹರಿಸಬೇಕಿದೆ ಎಂದರು.
ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ,ಕ್ರೀಡೆ ಮನುಷ್ಯನ ಮನಸ್ಸನ್ನು ಸಧೃಢಗೊಳಿಸುತ್ತದೆ.ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಕ್ರೀಡೆಗಳ ಅಭ್ಯಾಸ ಮಾಡಿಸುತ್ತಾರೆ.ನಮ್ಮಲ್ಲಿಯೂ ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳಲ್ಲಿ ಯುವಜನರು ಹೆಸರು ಮಾಡುತ್ತಿದ್ದು, ಈ ಅಂಕಣದಲ್ಲಿ ಆಡುವವರು ಸಹ ಉನ್ನತ ಮಟಕ್ಕೆ ಹೋಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡರ ನರಸೇಗೌಡ,ದಸಂಸ ಮುಖಂಡ ಪಿ.ಎನ್.ರಾಮಯ್ಯ ಅವರುಗಳು ಕ್ರೀಡಾಕೂಟ ಕುರಿತು ಮಾತನಾಡಿದರು. ಮೊದಲ ಪಂದ್ಯವಾಗಿ ಜಿಲ್ಲಾ ಪೊಲೀಸ್ ತಂಡ ಹಾಗೂ ರಾಮು ಗೆಳೆಯರ ಬಳಗ ಕ್ರೀಡಾ ತಂಡದ ಮಧ್ಯ ನಡೆಯಿತು.
ಈ ವೇಳೆ ಚಕ್ರವರ್ತಿ ಗೆಳೆಯರ ಬಳಗ ಪ್ರಕಾಶ್,ಚೇತನ್,ನ್ಯೂ ತುಮಕೂರು ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್.ಮಧುಕರ್,ವೈ.ಎ.ನಾಗರಾಜು,ಪಿ.ಎಸ್.ಐ ಅನಿಲ್‍ಕುಮಾರ್,ಸಿಪಿಐ ಅಜಯ್, ಆಡಳಿತಾಧಿಕಾರಿ ಮೋಹನ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.