ತುಮಕೂರು
ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಮಾಡಿದ ಅಭಿವೃದ್ಧಿ ಚಟುವಟಿಕೆಗಳ
ಆಧಾರದಲ್ಲಿ ಮತದಾರರನ್ನು ಭೇಟಿ, ಸಂಪರ್ಕಗಳ ಮಾಡುವ ಮೂಲಕ ಭರ್ಜರಿ ಗೆಲುವಿಗೆ ಪ್ರಕೋಷ್ಠಗಳ ಪದಾಧಿಕಾರಿಗಳು, ಸದಸ್ಯರು ಕಾರ್ಯೋಮುಖರಾಗುವಂತೆ ಪ್ರಕೋಷ್ಠಗಳ ರಾಜ್ಯ ಸಹಪ್ರಮುಖರಾದ ಭೈರಣ್ಣ.ಜಿ ರವರು ಕರೆ ನೀಡಿದರು.
ಇವರು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ದಾವಣಗೆರೆ ವಿಭಾಗದ ತುಮಕೂರು ಮತ್ತು ಮಧುಗಿರಿ ಜಿಲ್ಲೆಗಳ 24 ಪ್ರಕೋಷ್ಠಗಳ ಪ್ರಮುಖರ ಕಾರ್ಯಾಗಾರದಲ್ಲಿ ಮಾತನಾಡುತ್ತಾ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಡಬ್ಬಲ್ ಇಂಜಿನ್ ಸರ್ಕಾರದಿಂದ ಬಹುಮುಖವಾದ ಅಭಿವೃದ್ಧಿ ಕಾರ್ಯ ಮತ್ತು ಯೋಜನೆಗಳ ಮೂಲಕ ಜನರ ಮನ ಮುಟ್ಟುವ ಕಾರ್ಯವಾಗಿದೆ. ಆರೋಗ್ಯ, ಶಿಕ್ಷಣ, ಕೈಗಾರಿಕೆ, ರೈತರು, ಮಹಿಳೆಯರು, ಮಕ್ಕಳ ಶ್ರೇಯೋಭಿವೃದ್ಧಿ ಯೋಜನೆ, ಮೂಲಭೂತ ಸೌಕರ್ಯ, ಪರಿಶಿಷ್ಟ ಜಾತಿ/ವರ್ಗ, ಹಿಂದುಳಿದವರು ಮತ್ತು ಬಡವರ ಕಲ್ಯಾಣಕ್ಕೆ ಒತ್ತು ನೀಡಿರುವುದಲ್ಲದೆ, ಕೋವಿಡ್ ನಂತರದಲ್ಲಿ ದೇಶದ ಜನರಿಗೆ ಉಚಿತ ಕರೋನಾ ಲಸಿಕೆ, ಔಷದೋಪಚಾರ ಮಾಡಿರುವುದಲ್ಲದೆ ಬಡವರಿಗೆ ಅನ್ನ ಭಾಗ್ಯ ಯೋಜನೆಯಡಿ 80 ಕೋಟಿ ಜನರಿಗೆ ಉಚಿತ ಆಹಾರ ಪಡಿತರ, ರೈತರಿಗೆ ಕೃಷಿ ಸಮ್ಮಾನ್ ಯೋಜನೆಯಡಿ ಕೇಂದ್ರ, ರಾಜ್ಯ ಸರ್ಕಾರಗಳು 10000 ರೂ.ಗಳನ್ನು ನೇರವಾಗಿ ಖಾತೆಗೆ ವರ್ಗಾವಣೆ ಆಯುಷ್ಮಾನ್ ಯೋಜನೆ, ಪಧವಿಯಾದವರಿಗೆ ಉಚಿತ ಶಿಕ್ಷಣ ಮುಂತಾದ ಪ್ರಗತಿಪರ-ಜನಪರ ಯೋಜನೆಗಳ ಬಗ್ಗೆ ಮತದಾರರಿಗೆ ಮನನ ಮಾಡಿಸಿ, ಮತವಾಗಿ ಪರಿವರ್ತನೆಗೆ ವಿವಿಧ ಪ್ರಕೋಷ್ಠಗಳ ಕಾರ್ಯಕರ್ತರು ಶ್ರಮಿಸಬೇಕೆಂದರು.
ಈ ಕಾರ್ಯಾಗಾರದಲ್ಲಿ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಪ್ರಮುಖರಾದ ಡಾ|| ಪ್ರಕಾಶ್ ಮತ್ತು ಎಎಸ್.ರವಿರವರುಗಳು ಕೇಂದ್ರದ ನರೇಂದ್ರಮೋದಿ ಹಾಗೂ ರಾಜ್ಯದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಗಳು ನೀಡಿರುವ ಯೋಜನೆಗಳು ಮತ್ತು ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ವಹಿಸಿ ಮಾತನಾಡುತ್ತಾ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದರು.
ಕಾರ್ಯಾಗಾರದ ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಹೆಚ್.ಟಿ.ಭೈರಪ್ಪ, ಉಪಾಧ್ಯಕ್ಷೆ ನಾಗರತ್ನಮ್ಮ ಉಪಸ್ಥಿತರಿದ್ದರು. ಸಭೆಯಲ್ಲಿ ತುಮಕೂರು-ಮಧುಗಿರಿ ಪ್ರಕೋಷ್ಠಗಳ ಜಿಲ್ಲಾ ಮತ್ತು ಮಂಡಲಗಳ ಸಂಚಾಲಕರು, ಸಹ-ಸಂಚಾಲಕರುಗಳು ಭಾಗವಹಿಸಿದ್ದರು.
ಕಾರ್ಯಕ್ರಮವು ಭಾರತ ಮಾತೆಗೆ ಪುಷ್ಪ ನಮನ ಅರ್ಪಿಸುವ ಮೂಲಕ ಆರಂಭಗೊಂಡಿತು. ಸಭೆಯಲ್ಲಿ ಬಿಜೆಪಿ ತುಮಕೂರು ಜಿಲ್ಲಾ ಪ್ರಕೋಷ್ಠಗಳ ಪ್ರಮುಖ್ ಪಿ.ರವೀಶಯ್ಯ ಸ್ವಾಗತಿಸಿ, ತಿಪಟೂರಿನ ಕಾರ್ಯಕರ್ತರಾದ ಆನಂದಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಮಧುಗಿರಿ ಜಿಲ್ಲಾ ಪ್ರಕೋಷ್ಠಗಳ ಪ್ರಮುಖ್ ಜಯಣ್ಣ ವಂದಿಸಿದರು.