ಹುಳಿಯಾರು
ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಗಡಿಗ್ರಾಮಗಳು ಅದರಲ್ಲೂ ತಳ ಸಮುದಾಯದ ಊರುಗಳ ಬಗ್ಗೆ ನಿರ್ಲಕ್ಷö್ಯ ಧೋರಣೆ ಇದ್ದದ್ದೇ. ಇದಕ್ಕೆ ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿ ಬಳಿಯ ಬಿಳಿಕಲ್ಲು ಗೊಲ್ಲರಹಟ್ಟಿ ಶಾಲೆ ಸ್ಪಷ್ಟ ನಿರ್ದಶನವಾಗಿದೆ. ಇಲ್ಲಿನ ಸರ್ಕಾರಿ ಶಾಲೆಗೆ ಉತ್ಸುಕತೆಯಿಂದ ಬರುವ ಮಕ್ಕಳಿಗೆ ಕೂರಲು ಕೊಠಡಿ ಇಲ್ಲ. ಶೌಚಾಲಯ ಇಲ್ಲ. ಬಿಸಿಯೂಟ ಸಿದ್ಧತೆಗೆ ಕೋಣೆ ಇಲ್ಲ. ಆದರೂ ಯಾರೊಬ್ಬರೂ ಇತ್ತ ಕಡೆ ಗಮನ ಹರಿಸದಿರುವುದು ಗ್ರಾಮಸ್ಥರನ್ನು ಕೆರಳಿಸಿದೆ.
ಅಕ್ಷರದಿಂದ ವಂಚಿತರಾಗಿರುವ ಕಾಡುಗೊಲ್ಲರ ಮಕ್ಕಳು ನಾಲ್ಕು ಅಕ್ಷರ ಕಲಿಯಲೆಂದು ದಶಕಗಳ ಹಿಂದೆ ಬಿಳಿಕಲ್ಲು ಗೊಲ್ಲರಹಟ್ಟಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಆರಂಭಿಸಲಾಗಿತ್ತು. ನಾವಂತೂ ಓದಲಿಲ್ಲ ನಮ್ಮ ಮಕ್ಕಳಾದರೂ ಓದಲಿ ಎಂಬ ಗಾಮದ ಪೋಷಕರ ನಿರ್ಧಾರದಿಂದಾಗಿ ೧ ರಿಂದ ೫ ನೇ ತರಗತಿಯವರೆವಿಗೆ ಬರೋಬ್ಬರಿ ೪೮ ಮಕ್ಕಳು ಓದುತ್ತಿದ್ದಾರೆ.
ಐದು ತರಗತಿಗಳಿಗೂ ಕೇವಲ ಎರಡೇ ಎರಡು ಕೊಠಡಿಗಳಿದ್ದವು. ಮೊದಲೇ ಕೂಲಿನಾಲಿ ಮಾಡುವವರಾದ್ದರಿಂದ ಪಟ್ಟಣದ ಖಾಸಗಿ ಶಾಲೆಗೆ ಕಳುಹಿಸಲಾಗದೆ. ಕಷ್ಟನೋ ನಷ್ಟಾನೋ ನಮ್ಮ ಮಕ್ಕಳ ಅಕ್ಷರ ಕಲಿತರಾಯ್ತು ಎಂದು ಸಮಸ್ಯೆ ನುಂಗಿಕೊAಡು ಮಕ್ಕಳನ್ನು ಓದಿಸುತ್ತಿದ್ದರು. ಇತ್ತೀಚೆಗಷ್ಟೆ ಇರುವ ಎರಡೂ ಕೊಠಡಿಗಳು ಶಿಥಿಲವಾಗಿ ಜೀವ ಅಂಗೈಯಲ್ಲಿಟ್ಟುಕೊAಡು ಓದುವ ಪರಿಸ್ಥಿತಿ ನಿರ್ಮಾಣವಾದಾಗ ಜನಪ್ರತಿನಿಧಿಗಳ ದುಂಬಾಲು ಬಿದ್ದು ಹೊಸ ಕೊಠಡಿ ಮಂಜೂರು ಮಾಡಿಸಿಕೊಂಡರು.
ಕಳೆದ ಒಂದು ವರ್ಷದ ಹಿಂದೆ ಸೀತರಾಮಯ್ಯ ಎಂಬುವವರು ೧ ಕೊಠಡಿ ನಿರ್ಮಾಣಕ್ಕೆ ೧೧ ಲಕ್ಷ ರೂಗೆ ಗುತ್ತಿಗೆ ಪಡೆದು ಹೇಳಿದ ಸಮಯಕೆ ಸರಿಯಾಗಿ ಕೊಠಡಿ ನಿರ್ಮಿಸಿ ಹೋದರು. ಮತ್ತೊಂದು ಕಡ್ಡಡಕ್ಕೆ ೧೪ ಲಕ್ಷ ರೂಗೆ ಗುತ್ತಿಗೆ ಪಡೆದವರ ಕಡೆಯವರು ಬಂದು ಶಿಥಿಲ ಕಟ್ಟಡ ಕೆಡವಿ ಹೋದವರು ಆರೇಳು ತಿಂಗಳಾದರೂ ಇತ್ತ ತಲೆಯಾಕಿ ಮಲಗಿಲ್ಲ. ಅಲ್ಲದೆ ಇವರು ಶಿಥಿಲಗೊಂಡ ಕಟ್ಟಡ ಕೆಡುವ ಭರದಲ್ಲಿ ಬಿಸಿ ಊಟದ ಕೋಣೆ ಸಹ ಕೆಡವಿದ್ದಾರೆ. ಪರಿಣಾಮ ಒಂದೇ ಕೊಠಡಿಯಲ್ಲಿ ಐದು ತರಗತಿ ನಿರ್ವಹಿಸಿದರೆ ಇಲ್ಲಿನ ವಿದ್ಯಾರ್ಥಿಗಳು ನಲಿಯುವುದೆಲ್ಲಿ, ಕಲಿಯುವುದೆಲ್ಲಿ ಎನ್ನುವಂತಾಗಿದೆ ಸ್ಥಿತಿಗತಿ.
ಪರಿಣಾಮ ಮಕ್ಕಳ ಕಲಿಕೆಗೆ ಕೊಠಡಿ ಸಮಸ್ಯೆಯಾಗಿ ಶಾಲೆಯ ಪಕ್ಕದಲ್ಲಿನ ನಿಂಗಯ್ಯ ಎಂಬುವವರ ಕುರಿ ಶೆಡ್‌ನಲ್ಲಿ ಪಾಠ ಕೇಳುವ ಕರ್ಮ ಕಾಡುಗೊಲ್ಲರ ಮಕ್ಕಳದಾಗಿದೆ. ಮಳೆ, ಶೀಥಗಾಳಿಗೆ ಮೈಯೊಡ್ಡಿ, ಹುಳಹುಪಟಗಳ ಕಾಟದಲ್ಲಿ ಅಕ್ಷರ ಕಲಿಯುವ ದುಸ್ಥಿತಿ ಇದೆ. ಇನ್ನು ಶೌಚಾಯದ ಶಿಥಿಲವಾಗಿದ್ದು ಬಯಯೇ ಹೆಣ್ಣುಗಂಡು ಮಕ್ಕಳಿಬ್ಬರಿಗೂ ಗತಿಯಾಗಿದೆ. ಬಿಸಿಯೂಟ ಸಿಬ್ಬಂದಿಯ ಗೋಳಂತೂ ಹೇಳ ತೀರದಾಗಿದ್ದು ಶಾಲೆಯ ಪಡಸಾಲೆಯಲ್ಲಿ ಟಾರ್ಪಲ್ ಕಟ್ಟಿಕೊಂಡು ಅಡಿಗೆ ಮಾಡುತ್ತಿದ್ದಾರೆ. ಮಳೆಗಾಳಿ ಬಂದರAತೂ ಇವರ ಪರಿಪಾಟಲು ದೇವರಿಗೆ ಮುಟ್ಟುತ್ತದೆ.
ಒಟ್ಟಿನಲ್ಲಿ ಸರ್ಕಾರ ನೂರಾರು ಯೋಜನೆ ಜಾರಿ ತಂದು ಸಾವಿರಾರು ಕೋಟಿ ಅನುದಾನ ನೀಡಿ ಪ್ರತಿಯೊಂದು ಮಗುವಿಗೆ ಉತ್ತಮ ವಾತಾವರಣದಲ್ಲಿ ಶಿಕ್ಷಣ ನೀಡಬೇಕೆಂದು ಹೇಳುತ್ತಿದೆ. ಆದರೆ ಗುತ್ತಿಗೆದಾರನ ಬೇಜವಾಬ್ದಾರಿ, ಅಧಿಕಾರಿಗಳು ಜಾಣ ಕುರುಡು ಗೊಲ್ಲರಹಟ್ಟಿಯಲ್ಲಿ ಶಿಕ್ಷಣ ಪಡೆಯಲು ಬರುವ ಮಕ್ಕಳಿಗೆ ಕೂರಲು ಸ್ಥಳವಕಾಶವಿಲ್ಲ. ಇದನ್ನರಿತು ಕೊಠಡಿ ಭಾಗ್ಯ ಕಲ್ಪಿಸುವ ಜತೆಗೆ ಸೌಲಭ್ಯ ನೀಡಲು ಜನಪ್ರತಿನಿಧಿಗಳು ಮುಂದಾಗಬೇಕಿದೆ.
ಈ ಸಮಸ್ಯೆಯ ಬಗ್ಗೆ ಬಿಇಒ, ಎಇಇ ಇಬ್ಬರ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಕಾಡುಗೊಲ್ಲರ ಗೋಳು, ಕಾಡು ರೋಧನ ಎನ್ನುವಂತಾಗಿದೆ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿ ನಿಮ್ಮ ಮಕ್ಕಳಂತೆ ಕಾಡುಗೊಲ್ಲರ ಮಕ್ಕಳೂ ಉತ್ತಮ ವಾತಾರಣದಲ್ಲಿ ಅಕ್ಷರ ಕಲಿಕೆಗೆ ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಮೊದಲು ಗುತ್ತಿಗೆದಾರರಿಗೆ ಕೊಠಡಿ ನಿರ್ಮಿಸುವ ಜೊತೆಗೆ ಅನವಶ್ಯಕವಾಗಿ ಕೆಡವಿರುವ ಅಡಿಗೆ ಕೋಣೆಯನ್ನೂ ಕಟ್ಟಿಕೊಡಲು ಸೂಚಿಸಬೇಕು.