ತುಮಕೂರು: ಪ್ಲಾಸ್ಟಿಕ್ ಮುಕ್ತ ಹಾಗೂ ಪರಿಸರ ಸ್ನೇಹಿ ಕ್ಯಾಂಪಸ್ ಮಾಡಲು ವಿವಿಯ ಜೀವವೈವಿಧ್ಯ ಕೋಶದೊಂದಿಗೆ ನಾವೆಲ್ಲರೂ ಕೈಜೋಡಿಸೋಣ ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ವಿವಿ ವಿಜ್ಞಾನ ಕಾಲೇಜಿನ ಜೀವಾವರಣಶಾಸ್ತç ಮತ್ತು ಪರಿಸರ ವಿಜ್ಞಾನ ಅಧ್ಯಯನ ವಿಭಾಗವು ಶುಕ್ರವಾರ ಆಯೋಜಿಸಿದ್ದ ‘ತುಮಕೂರು ವಿವಿ ಆವರಣ ಹಾಗೂ ಬಿದರಕಟ್ಟೆ ಕ್ಯಾಂಪಸ್‌ನಲ್ಲಿ ಮರಗಳ ಜಿಯೋ ಟ್ಯಾಗಿಂಗ್ ಮತ್ತು ಜೀವವೈವಿಧ್ಯ ದಾಖಲಾತಿ’ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕೇವಲ ಪ್ರಚಾರಕ್ಕಾಗಿ ಸಸಿಗಳನ್ನು ನೆಡಬಾರದು. ಸಸಿಯು ಹೆಮ್ಮರವಾಗುವ ತನಕವೂ ಅದರ ಪಾಲನೆ, ಪೋಷಣೆ ನಮ್ಮದಾಗಬೇಕು. ಮಾಲಿನ್ಯ ರಹಿತ ಪರಿಸರ ನಿರ್ಮಿಸಲು ಸಾಧ್ಯವಾಗದಿದ್ದರೂ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಶುದ್ಧ ಗಾಳಿ, ನೀರು ನಮ್ಮ ಆರೋಗ್ಯ ಕಾಪಾಡುವುದರಲ್ಲಿ ಮುಖ್ಯಪಾತ್ರವಹಿಸುತ್ತವೆ ಎಂದರು. ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಶೇಟ್ ಎಂ. ಪ್ರಕಾಶ್, ಜೀವಾವರಣಶಾಸ್ತç ಮತ್ತು ಪರಿಸರ ವಿಜ್ಞಾನ ಅಧ್ಯಯನ ವಿಭಾಗದ ಡಾ. ದ್ವಾರಕಾನಾಥ್ ವಿ. ಉಪಸ್ಥಿತರಿದ್ದರು.