ವರದಿ: ಎಸ್. ಮೈಕೆಲ್ ನಾಡಾರ್
ಪಾವಗಡ: ಬಿಪಿಎಲ್ ಹಾಗೂ ಅಂತ್ಯೋದ್ಯಯ ಕಾರ್ಡ್ ಪಡೆಯಲು ರಾಜ್ಯ ಸರ್ಕಾರವು ನಿಗದಿತ ಮಾನದಂಡವನ್ನು ರೂಪಿಸಿದೆ. ಆ ನಿಯಮಗಳನ್ನು ಉಲ್ಲಂಘಿಸಿದ್ದರೆ ಅಂತಹವರ ಕಾರ್ಡ್ಗಳನ್ನು ಪತ್ತೆ ಮಾಡಿ ಅನರ್ಹ ಎಂದು ಪರಿಗಣಿಸಿ ಆಹಾರ ಇಲಾಖೆ ಅಧಿಕಾರಿಗಳು ರದ್ದು ಮಾಡುತ್ತಿದ್ದಾರೆ. ಅದರಂತೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿಯೂ ಅನರ್ಹರ ಪಡಿತರ ಚೀಟಿ ರದ್ದುಗೊಳಿಸುತ್ತಿದೆ. ಆದರೆ ಕೆಲವು ಅರ್ಹ ಪಡಿತರ ಚೀಟಿಗಳನ್ನು ಸಸ್ಪೆನ್ಷನ್ ಮಾಡಲಾಗಿದೆ.
ಸರ್ಕಾರದ ಆದೇಶದಂತೆ ಬಿ.ಪಿ.ಎಲ್ ಕಾರ್ಡ್ ಪಡೆದ ಸರ್ಕಾರಿ ನೌಕರರು ಮತ್ತು ತೆರಿಗೆ ಪಾವತಿ ಮಾಡುವವರ ಪಡಿತರ ಚೀಟಿಗಳನ್ನು ರದ್ದುಗೊಳಿಸ ಬೇಕಾಗಿದೆ. ಆದರೆ ಈಗ ಕೆಲ ಗ್ರಾಮಗಳಲ್ಲಿ ಬಡವರ ಪಡಿತರ ಚೀಟಿಗಳೂ ಸಹ ತೆರಿಗೆ ಪಾವತಿದಾರರ ಎಂದು ಸಸ್ಪೆನ್ಷನ್ ಮಾಡಲಾಗಿದೆ. ಪಡಿತರ ಚೀಟಿ ಬಂದ್ ಆಗಿದೆ. ಅಂದಿನಿAದ ರೇಷನ್ ಕಾರ್ಡ್ಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಟ ನಡೆಸುತ್ತಿದ್ದಾರೆ ಸರ್ಕಾರಿ ಕಚೇರಿಗಳು, ಗ್ರಾಮ ಒನ್ ಸೆಂಟರ್‌ನಲ್ಲಿ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪಡಿತರ ಚೀಟಿ ಕೇಳಿದ್ರೆ, ವಿನಾಕಾರಣ ಕಾಲಹರಣ ಮಾಡ್ತಿದ್ದಾರೆ ಎಂದು ಕೆಲವರು ಕಣ್ಣೀರು ಹಾಕುತ್ತಿದ್ದಾರೆ.
ತಾಲೂಕಿನಲ್ಲಿ ಒಟ್ಟು 60714 ಪಡಿತರ ಚೀಟಿಗಳು ಇದ್ದು ಅದರಲ್ಲಿ ಬಿ.ಪಿ.ಎಲ್ ಕಾರ್ಡ್ ಗಳು 52577, ಅಂತ್ಯೋದಯ ಕಾರ್ಡ್ ಗಳು 5775, ಎ.ಪಿ.ಎಲ್ 2362 ಕಾರ್ಡ್ ಗಳು ಇವೆ, 680 ಬಿ.ಪಿ.ಎಲ್ ಕಾರ್ಡ್ ಗಳನ್ನು ವಿವಿಧ ಕಾರಣಗಳಿಂದ ಸಸ್ಪೆನ್ಷನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ತಾಲೂಕಿನಲ್ಲಿ ಒಟ್ಟು 93 ನ್ಯಾಯಬೆಲೆ ಅಂಗಡಿಗಳಿದ್ದು ಪಟ್ಟಣದಲ್ಲಿ 08 ಗ್ರಾಮೀಣ ಪ್ರದೇಶದಲ್ಲಿ 85 ನ್ಯಾಯಬೆಲೆ ಅಂಗಡಿಗಳಿವೆ ಅವುಗಳಲ್ಲಿ ಸುಮಾರು 33 ವಿ.ಎಸ್.ಎಸ್.ಎನ್ ನಿಯಂತ್ರಣದಲ್ಲಿದ್ದು ಉಳಿದವುಗಳು ಖಾಸಗಿ ಸಂಸ್ಥೆಗಳ ಆಧೀನದಲ್ಲಿವೆ.
ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸುಮಾರು ಒಂದು ಲಕ್ಷ ಜನರು ಗುಳೆ ಹೋಗಿದ್ದು ಕಟ್ಟಡ ಕಾರ್ಮಿಕರು, ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದಾರೆ ಅಂತಹವರ ಪಡಿತರ ಚೀಟಿ ಸಸ್ಪೆನ್ಷನ್ ಮಾಡಲಾಗಿದೆ ಈ ಬಗ್ಗೆ ಸಾರ್ವಜನಿಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಉದಾಹರಣೆಗೆ ಮನೆಯಲ್ಲಿರುವ ನಾಲ್ಕು ಜನ ಸದಸ್ಯರಲ್ಲಿ ಇಬ್ಬರು ವಿದ್ಯಾಬ್ಯಾಸ ಮಾಡುತ್ತಿದ್ದರೆ, ಇನ್ನಿಬ್ಬರು ದುಡಿಯುತ್ತಿರುತ್ತಾರೆ, ಆದರೆ ಒಟ್ಟು ಸದಸ್ಯರ ಆದಾಯ ಪ್ರಮಾಣಪತ್ರಗಳನ್ನು ಪರಿಗಣಿಸಿ ಕೆಲವು ಪಡಿತರ ಚೀಟಿಗಳನ್ನು ಸಸ್ಪೆನ್ಷನ್ ಮಾಡಲಾಗಿದೆ, ಸರ್ಕಾರದ ಅವೈಜ್ಞಾನಿಕ ಕ್ರಮವಾಗಿದೆ ಇದು ಪಂಡಿತರ ಚೀಟಿದಾರರ ಆಕ್ರೋಶಕ್ಕೆ ಕಾರಣವಾಗಿದೆ.
ನಮ್ಮ ಪಾವಗಡ ತಾಲ್ಲೂಕಿನ 680 ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ಸಸ್ಪೆನ್ಷನ್ ಮಾಡಲಾಗಿದೆ, ರಾಜ್ಯ ಸರ್ಕಾರದ ಮೇಲಾಧಿಕಾರಿಗಳ ಆದೇ ಶದಂತೆ ಅರ್ಜಿ ಸ್ವೀಕರಿಸಿ, ಅವುಗಳನ್ನು ಆಹಾರ ಇಲಾಖೆಯಿಂದ ಪರಿಶೀಲಿಸಿ ಅರ್ಹರಿಗೆ ಮತ್ತೆ ಪಡಿತರ ಚೀಟಿ ಮುಂದುವರೆಸಲಾಗುತ್ತದೆ.
– ಪ್ರಸನ್ನ ಕುಮಾರ್,
ಆಹಾರ ನಿರೀಕ್ಷಕ.