ತುಮಕೂರು: ನಗರದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ವಿಕಲಚೇತನರ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ ನಡೆಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿಕಲಚೇತನರು ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಕ್ರೀಡಾ ಪ್ರತಿಭೆ ಪ್ರದರ್ಶಿಸಿ ಗಮನ ಸೆಳೆದರು.
ಸಮರ್ಥಂ ವಿಕಲಚೇತನರ ಸಂಸ್ಥೆ ಆಯೋಜಿಸಿದ್ದ ಈ ಕ್ರೀಡಾಕೂಟವನ್ನು ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್.ಮಧುಕರ್ ಉದ್ಘಾಟಿಸಿ, ವಿಕಲಚೇತನ ಮಕ್ಕಳು ಕೀಳರಿಮೆ ತೊರೆದು ಇಂತಹ ಅವಕಾಶಗಳನ್ನು ಬಳಿಸಿಕೊಂಡು ಸಾಧನೆ ಮಾಡಬೇಕು ಎಂದು ಹೇಳಿದರು. ವಿಕಲಚೇತನರಿಗೆ ಅಂಗವೈಕಲ್ಯವಿರಬಹುದು ಆದರೆ ಅವರಲ್ಲಿ ವಿಶೇಷವಾದ ಬುದ್ಧಿವಂತಿಕೆ, ಕ್ರಿಯಾಶೀಲತೆ ಇರುತ್ತದೆ. ಇತ್ತೀಚೆಗೆ ಚೆಸ್ ಅಸೋಸಿಯೇಷನ್‌ನಿಂದ ತುಮಕೂರಿನಲ್ಲಿ ನಡೆಸಿದ ರಾಜ್ಯ ಮಟ್ಟದ ಅಂಧರ ಚೆಸ್ ಪಂದ್ಯಾವಳಿಯಲ್ಲಿ ಆ ಮಕ್ಕಳ ಬುದ್ಧಿವಂತಿಕೆಯನ್ನು ಗಮನಿಸಿದ್ದೇನೆ. ಸಾಮಾನ್ಯ ಮಕ್ಕಳಿಗಿಂತಲೂ ಹೆಚ್ಚು ಪ್ರತಿಭಾವಂತರಾಗಿದ್ದಾರೆ ಎಂದರು. ಅಂಗವೈಕಲ್ಯ ಸಾಧನೆಗೆ ಅಡ್ಡಿಯಾಗಬಾರದು. ಅದನ್ನು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಬೇಕು. ರಾಜ್ಯಮಟ್ಟದ ಕ್ರೀಡೆಯಲ್ಲಿ ವಿಜೇತರಾದವರು ರಾಷ್ಟç ಮಟ್ಟದ ಪಂದ್ಯಾವಳಿಯಲ್ಲಿ ಸ್ಪರ್ಧೆ ಮಾಡಲು ಅರ್ಹರಾಗುತ್ತಾರೆ, ಮುಂದೆ ಅಂತರರಾಷ್ಟಿçÃಯ ಮಟ್ಟದಲ್ಲೂ ಪಾಲ್ಗೊಳ್ಳುವ ಅವಕಾಶ ದೊರೆಯುತ್ತದೆ ಎಂದು ಟಿ.ಎನ್.ಮಧುಕರ್ ಹೇಳಿದರು. ಕ್ರೀಡಾ ತರಬೇತುದಾರ ಶಿವಪ್ರಸಾದ್ ಮಾತನಾಡಿ, ವಿಕಲಚೇತನರ ಕ್ರೀಡಾ ಚಟುವಟಿಕೆಗಳಿಗೆ ಕ್ರೀಡಾ ಇಲಾಖೆಯಿಂದ ಎಲ್ಲಾ ರೀತಿ ಸಹಾಯ, ಸಹಕಾರ ದೊರೆಯುತ್ತದೆ. ಎಲ್ಲವನ್ನೂ ನೀವು ಬಳಸಿಕೊಂಡು ಸಾಧನೆ ಮಾಡಿರಿ. ಸಂಘಸAಸ್ಥೆಗಳು ವಿಕಲಚೇತನರ ನೆರವಿಗೆ ಮುಂದೆ ಬರಬೇಕು, ವಿಕಲಚೇತನ ಮಕ್ಕಳು ಆತ್ಮವಿಶ್ವಾಸದಿಂದ ಸಾಧನೆ ಮಾಡಬೇಕು ಎಂದು ಹೇಳಿದರು. ಸಮರ್ಥಂ ಫೌಂಡೇಶನ್‌ನ ಶಿಖಾ ಮಾತನಾಡಿ, ವಿಕಲಚೇತನರು ಅಸಹಾಯಕರು, ಅವರಿಂದ ಏನನ್ನೂ ಸಾಧಿಸಲು ಆಗುವುದಿಲ್ಲ ಎಂದು ಅವರ ಬಗ್ಗೆ ಸಹಾನುಭೂತಿ ತೋರುವುದು ಬೇಡ, ಅವಕಾಶ ಸಿಕ್ಕಿದರೆ ಅವರೂ ಸಾಧಿಸುತ್ತಾರೆ. ಅವರಲ್ಲಿ ವಿಶೇಷವಾದ ಬುದ್ಧಿ, ಕೌಶಲ್ಯವಿದೆ ಎಂದರು. ಮಕ್ಕಳ ಪೋಷಕರು, ವಿವಿಧ ಸಂಘಸAಸ್ಥೆಗಳ ಮುಖಂಡರು ಹಾಜರಿದ್ದರು.
(Visited 1 times, 1 visits today)