ತುಮಕೂರು: ನಗರದ ಶ್ರೀ ಸಿದ್ಧಾರ್ಥ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮಕ್ಕಳ ದಂತ ಚಿಕಿತ್ಸಾ ವಿಭಾಗದ ವತಿಯಿಂದ ‘ಮಕ್ಕಳ ಮತ್ತು ಶಿಶು ವೈದ್ಯರ ದಿನಾಚರಣೆ’ ಅಂಗವಾಗಿ ತುಮಕೂರಿನ ಹೆಗ್ಗರೆಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ದಂತ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಶಾಲೆಯ ಆವರಣದಲ್ಲಿ ಏರ್ಪಟ್ಟ ಕಾರ್ಯಕ್ರಮವನ್ನು ಶ್ರೀ ಸಿದ್ಧಾರ್ಥ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮಕ್ಕಳ ದಂತ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಜ್ಯೋತ್ಸ್ನಾ ವಿ.ಸೆಟ್ಟಿ ಅವರು ಉದ್ಘಾಟಿಸಿ, ಸರಿಯಾದ ಆಹಾರ ಸೇವನೆ, ಫ್ಲೋರೈಡ್ ಬಳಕೆ ಮತ್ತು ಮೌಖಿಕ ನೈರ್ಮಲ್ಯದ ಅಭ್ಯಾಸವನ್ನು ಮಕ್ಕಳಿಗೆ ತಿಳಿಸುವ ಅಗತ್ಯವಿದೆ ಎಂದರು. ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಗಳ ಬಾಯಿಯ ಮೇಲೆ ಪರಿಣಾಮಗಳ ಬೀರುತ್ತವೆ. ಈ ಬಗ್ಗೆ ಮಕ್ಕಳಿಗೆ ಜ್ಞಾನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾಲಕಾಲಕ್ಕೆ ಮಕ್ಕಳ ಮೌಖಿಕ ತಪಾಸಣೆ ಮತ್ತು ಆರೋಗ್ಯ ಜಾಗೃತಿ ನಡೆಸಬೇಕಾಗಿದೆ ಎಂದು ಡಾ.ಜ್ಯೋತ್ಸ್ನಾ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ವೀಣಾ ಎಸ್, ಡಾ.ಅಂಬಿಕಾ ಕೆ, ಡಾ.ಮಹೇಶ್ ಕುಮಾರ್, ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಶೈಲಜಾ ಮತ್ತು ಪಿಡೋಡಾಂಟಿಕ್ಸ್ ವಿಭಾಗದ ಸ್ನಾತಕೋತ್ತರ ಪದವೀಧರರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಶಾಲಾ ಮಕ್ಕಳ ಆರೋಗ್ಯ ಮತ್ತು ಮೌಖಿಕ ಆರೋಗ್ಯದ ಮೇಲೆ ಕೇಂದ್ರೀಕರಿಸಿ ಜಾಗಥಿ ನೀಡಲಾಯಿತು. ಮೌಖಿಕ ನೈರ್ಮಲ್ಯ ಸಾಧನಗಳು ಮತ್ತು ಉತ್ತಮ ನೈರ್ಮಲ್ಯ ಮತ್ತು ಆಹಾರ ಪದ್ಧತಿಯನ್ನು ಕಲಿಸುವ ಹಣ್ಣುಗಳನ್ನು ವಿತರಿಸಲಾಯಿತು ಮತ್ತು ಭೂಮಿ ತಾಯಿಯ ಮಹತ್ವವನ್ನು ಒತ್ತಿಹೇಳುವ ಪ್ರಕೃತಿಗೆ ಸಂಬAಧಿಸಿದ ವಿಷಯದ ಕುರಿತು ಚಿತ್ರ ಸ್ಪರ್ಧೆಯನ್ನು ನಡೆಸಲಾಯಿತು ಹಾಗೂ ಬಹುಮಾನ ವಿತರಿಸಲಾಯಿತು.
(Visited 1 times, 1 visits today)