ತುಮಕೂರು: ಜಾಗತಿಕ ಸ್ಥಿತಿಗತಿ ನೋಡಿದರೆ ಆಂತರಿಕ ಶಾಂತಿಯ ಅಗತ್ಯವಿದೆ. ವಿಶ್ವದಲ್ಲಿ ಶಾಂತಿ ನೆಲೆಸಲು ಯೋಗ, ಧ್ಯಾನ ಬದುಕಿನ ಅನಿವಾರ್ಯ ಅಂಗವಾಗಬೇಕು ಎಂದು ಯೋಗ ಗುರು ಡಾ. ಎಂ. ಕೆ. ನಾಗರಾಜರಾವ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಯೋಗ ಅಧ್ಯಯನ ಮತ್ತು ಸಂಶೋಧನ ವಿಭಾಗವು ಶನಿವಾರ ಆಯೋಜಿಸಿದ್ದ ‘ವಿಶ್ವ ಧ್ಯಾನ ದಿನ’ ಆಚರಣೆಯಲ್ಲಿ ಮಾತನಾಡಿದರು.
ಯೋಗ, ಧ್ಯಾನದ ಮಹತ್ವ ಹಾಗೂ ಅಭ್ಯಾಸ ಕ್ರಮಗಳ ಕುರಿತು ತಿಳಿಸುತ್ತ, ಪರರನ್ನು ಹಿಮ್ಮೆಟ್ಟಿಸುವ ಕ್ರೌರ್ಯ ಮನೋಭಾವ ನಾಶವಾಗಲು, ಸ್ವ-ಅರಿವಿನ ವಿಚಾರ ಮಾಡಲು ಮನಃಶಾಂತಿ ಆಂತರ್ಯದಲ್ಲಿ ನೆಲೆಸಬೇಕಿದೆ. ಶಾಂತಿ ನೆಲೆಸಲು ಧ್ಯಾನ ಸಹಕಾರಿಯಾಗಲಿದೆ ಎಂದರು.
ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ಯೋಗ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಂಯೋಜಕ ಡಾ. ಎ. ಎಂ. ಮಂಜುನಾಥ, ನೆದರ್ಲ್ಯಾಂಡ್ ಯೋಗ ಶಿಕ್ಷಕಿ ವೆಂಡಿ ಮ್ಯಾಂಡ್ರೆಸ್, ಜರ್ಮನಿಯ ಸುಸಾನ ಸ್ಟಾçಸ್ಬರ್ಗರ್, ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ನಾಗರಿಕರು ಭಾಗವಹಿಸಿದ್ದರು.
(Visited 1 times, 1 visits today)