ತುಮಕೂರು: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ) ಬೆಂಗಳೂರು ಇವರು ಅಖಿಲ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ 29 ರ ಭಾನುವಾರ ಕುಣಿಗಲ್ ತಾಲೂಕು ಯಡಿಯೂರಿನ ಶ್ರೀತೋಂಟದ ಸಿದ್ದಲಿಂಗೇಶ್ವರ ಸ್ವಾಮಿ ಸನ್ನಿದಿಯಲ್ಲಿ ಆಯೋಜಿಸಲಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತುಮಕೂರು ಜಿಲ್ಲಾಧ್ಯಕ್ಷ ಡಾ.ವಿಜಯಕುಮಾರ್ ಕಮ್ಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಅಖಿಲ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರಸಿದ್ದ ಸಾಹಿತಿ,ಬಸವತತ್ವ ಮತ್ತು ಶರಣತತ್ವದ ಬಗ್ಗೆ ಆಳವಾದ ಜ್ಞಾನವುಳ್ಳ ರಂಜಾನ್ ದರ್ಗಾ ಅವರನ್ನು ಆಯ್ಕೆ ಮಾಡಲಾಗಿದೆ. ಡಿಸೆಂಬರ್ 29ರ ಬೆಳಗ್ಗೆ 10 ಗಂಟೆಗೆ ಜರುಗುವ ಅಖಿಲ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಕಲ್ಬುರ್ಗಿಯ ಆಳಂದದ ಶ್ರೀತೋಂಟದಾರ್ಯ ಅನುಭವ ಮಂಟಪದ ಶ್ರೀಕೋರಣೇಶ್ವರ ಸ್ವಾಮೀಜಿ ವಹಿಸಲಿದ್ದಾರೆ. ಪ್ರಾಸ್ತಾವಿಕ ನುಡಿಗಳನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟೇಶ್ ಎಸ್.ಉಪ್ಪಾರ್ ನುಡಿಯಲಿದ್ದು,ಸಮ್ಮೇಳನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಎಲ್.ಎನ್.ಮುಕುಂದರಾಜ್ ಉದ್ಘಾಟಿಸಲಿದ್ದಾರೆ ಎಂದರು.
ಸಮ್ಮೇಳನಾಧ್ಯಕ್ಷರ ಭಾಷಣದ ನಂತರ ಶರಣ ಸಂಕುಲ ರಾಷ್ಟಿçÃಯ ಪುರಸ್ಕಾರ ಪ್ರಧಾನವನ್ನು ಕುಣಿಗಲ್ ಶಾಸಕರಾದ ಡಾ.ಹೆಚ್.ಡಿ.ರಂಗನಾಥ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಟಿ.ಸತೀಶ್ ಜವರೇಗೌಡ ಅವರು ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಯಡಿಯೂರು ಶ್ರೀಸಿದ್ದಲಿಂಗೇಶ್ವರಸಾಮಿ ದೇವಾಲಯದ ಸಿಇಓ ಎಚ್.ಎಸ್. ಮಹೇಶ್,ದಾಸೋಹ ಸಮಿತಿ ವ್ಯವಸ್ಥಾಪಕರಾದ ಜಿ.ಎನ್.ಪ್ರಭುಲಿಂಗಸ್ವಾಮಿ,ಎಡೆಯೂರು ಗ್ರಾ.ಪಂ.ಪಿಡಿಓ ಎಸ್.ಎಲ್. ಚಂದ್ರಹಾಸ, ಗ್ರಾ.ಪಂ.ಅಧ್ಯಕ್ಷರಾದ ಮಲ್ಲಿಗಮ್ಮ, ಉಪಾಧ್ಯಕ್ಷರಾದ ಬಿ.ಎಚ್.ಲಕ್ಷö್ಮಣ, ಮಾಜಿ ಅಧ್ಯಕ್ಷರಾದ ವೈ.ಜಿ.ಕೃಷ್ಣಮೂರ್ತಿ/ ಅವರುಗಳು ಭಾಗವಹಿಸಲಿದ್ದಾರೆ ಎಂದು ಡಾ.ವಿಜಯಕುಮಾರ್ ಕಮ್ಮಾರ್ ನುಡಿದರ
ಅದೇ ದಿನ ಮದ್ಯಾಹ್ನ 2 ಗಂಟೆಗೆ ಜರುಗುವ ವಚನ ಚಿಂತಾಗೋಷ್ಠಿಯ ದಿವ್ಯ ಸಾನಿಧ್ಯವನ್ನು ಬೆಟ್ಟದಹಳ್ಳಿ ಮಠದ ಶ್ರೀಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಕುಣಿಗಲ್ ತಾಲೂಕು ಅಧ್ಯಕ್ಷೆ ಡಾ.ಚಿ.ದೇ,ಸೌಮ್ಯ ಆಶಯ ನುಡಿಗಳನ್ನಾಡಲಿದ್ದಾರೆ.ಅಧ್ಯಕ್ಷತೆಯನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಡಾ.ವಿಜಯಕುಮಾರ್ ಕಮ್ಮಾರ ವಹಿಸಲಿದ್ದಾರೆ. ತಿಪಟೂರಿನ ಕಲ್ಪತರು ಸೆಂಟ್ರಲ್ ಶಾಲೆ ಮತ್ತು, ಕಲ್ಪತರು ಪದವಿಪೂರ್ವ ಕಾಲೇಜು ಮಕ್ಕಳಿಂದ ವಚನ ರೂಪಕ ಪ್ರದರ್ಶನ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಶರಣ ಸಾಹಿತ್ಯ ಸಮ್ಮೇಳನದ ಮಾರ್ಗದರ್ಶಕರಾದ ಡಾ.ಬಿ.ಸಿ.ಶೈಲಾ ನಾಗರಾಜು, ಸದಸ್ಯರಾದ ದೊಂಬರನಹಳ್ಳಿ ನಾಗರಾಜು ಅವರುಗಳು ಉಪಸ್ಥಿತರಿದ್ದರು.
(Visited 1 times, 1 visits today)