ಚಿಕ್ಕನಾಯಕನಹಳ್ಳಿ: ಸೋಮವಾರದಂದು ರಾತ್ರಿ 9.00 ಗಂಟೆಯವರೆಗೂ ನಿರಂತರವಾಗಿ ಕೆಲಸ ಮಾಡಿದ ತಾಲ್ಲೂಕು ಆಡಳಿತ ಕಡೆಗೂ ದಬ್ಬೇಘಟ್ಟದ ಸುಡುಗಾಡು ಸಿದ್ಧ ಜನಾಂಗದವರಿಗೆ ಹಂಚಿಕೆಯಾಗಿರುವ ನಿವೇಶನಗಳ ಹಕ್ಕುಪತ್ರವನ್ನು ವಿತರಿಸಿ ನಿಟ್ಟುಸಿರು ಬಿಟ್ಟಿತು. ಪುರಸಭೆ ವ್ಯಾಪ್ತಿ ಎಂದು ಪರಿಗಣಿಸಿ ಈ ಹಿಂದೆ ಮಂಜೂರು ಮಾಡಿದ್ದ ನಿವೇಶನಗಳ ಹಕ್ಕುಪತ್ರಗಳನ್ನು ವಿತರಿಸಲಾಗಿತ್ತು. ಆದರೆ, ನಿವೇಶನ ಹಂಚಿಕೆ ಮಾಡಲಾಗಿರುವ 122’ ಸರ್ವೆ ನಂಬರ್ ಪುರಸಭೆ ವ್ಯಾಪ್ತಿಗಲ್ಲದೆ ಹೊನ್ನೇಬಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ್ದು ಎಂದಾದ ಮೇಲೆ ಹಕ್ಕುಪತ್ರಗಳನ್ನು ಮತ್ತೆ ತಿದ್ದಿ ಹೊಸದಾಗಿ ವಿತರಿಸಲಾಗಿದೆ. ಪ್ರತಿ ಸೋಮವಾರದ ತಮ್ಮ ಜನಸ್ಪಂದನ ಕಾರ್ಯಕ್ರಮ ಮುಗಿಸಿಕೊಂಡು ಅಲ್ಲಿಂದ ನೇರ ತಾಲ್ಲೂಕು ಆಡಳಿತ ಸೌಧಕ್ಕೆ ಆಗಮಿಸಿದ ಶಾಸಕ ಸಿ ಬಿ ಸುರೇಶ್ ಬಾಬು, ಫಲಾನುಭವಿ ಅಲೆಮಾರಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದರು. ತಹಸೀಲ್ದಾರ್ ಕೆ ಪುರಂದರ್, ಪುರಸಭಾ ಅಧ್ಯಕ್ಷ ಸಿ ಹೆಚ್ ದಯಾನಂದ್ ಹಾಗೂ ಉಪಾಧ್ಯಕ್ಷ ರಾಜಶೇಖರ್ ಮತ್ತು ಸಮಾಜ ಕಲ್ಯಾಣಾಧಿಕಾರಿ ಶ್ರೀಧರಮೂರ್ತಿ, ಅದೀಬ್ ಉಪಸ್ಥಿತರಿದ್ದರು.
(Visited 1 times, 1 visits today)