ಹುಳಿಯಾರು: ಹುಳಿಯಾರು ಹೋಬಳಿಯ ಕೋರಗೆರೆ ಗ್ರಾಮ ಪಂಚಾಯ್ತಿಯ ನೂತನ ಉಪಾಧ್ಯಕ್ಷರಾಗಿ ಭಟ್ಟರಹಳ್ಳಿ ಶೇಖರ್ ಚುನಾಯಿತರಾಗಿದ್ದಾರೆ.
15 ಮಂದಿ ಸದಸ್ಯ ಬಲವುಳ್ಳ ಕೋರಗೆರೆ ಗ್ರಾಪಂ ಉಪಾಧ್ಯಕ್ಷರ ಆಯ್ಕೆಗೆ ಬುಧವಾರ ಚುನಾವಣೆ ನಡೆದಿದ್ದು ಶಿವಮ್ಮ ಮತ್ತು ಶೇಖರ್ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಶೇಖರ್ 11 ಮತಗಳನ್ನು, ಶಿವಮ್ಮ 4 ಮತಗಳನ್ನು ಪಡೆದಿದ್ದರು. ಚುನಾವಣಾಧಿಕಾರಿಯಾಗಿ ಕೆ.ಪುರಂದಯ್ಯ ಕರ್ತವ್ಯ ನಿರ್ವಹಿಸಿದ್ದರು. ಪಿಡಿಒ ನವೀನ್, ಅಧ್ಯಕ್ಷರಾದ ದಿನೇಶ್, ಸೇರಿದಂತೆ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.
(Visited 1 times, 1 visits today)