ತುಮಕೂರು: ಕಲ್ಪತರು ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಅಂತಿಮ ಅಂತದ ಸಿದ್ಧತೆಗಳು ಪೂರ್ಣಗೊಂಡಿದ್ದು ಶುಭಕೋರಿನ 39ನೇ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಸುದ್ದಿ ಮನೆಯ ಎಲ್ಲಾ ಸ್ನೇಹಿತರಿಗೂ ಸ್ವಾಗತ ಕೋರಲಿದ್ದು ನಾಳೆ ನಡೆಯುವ ಸಮ್ಮೇಳನವನ್ನ ನಾವೆಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಈಗಾಗಲೇ ಅಂತಿಮ ಹಂತ ಸಿದ್ಧತೆಗಳನ್ನ ಪೂರ್ಣಗೊಳಿಸಿ ನಿರ್ಮಾಣ ಗೊಂಡಿರುವ ವೇದಿಕೆಯ ಸಿದ್ದತೆ ಕಾರ್ಯಗಳನ್ನು ಪರಿಶೀಲಿಸಿ ಮಾತನಾಡಿದ ಅವರು ಸಂಘದ ಜಿಲ್ಲಾ ಘಟಕ ತುಮಕೂರು ಇವರು ಅದ್ದೂರಿಯಾಗಿ 39ನೇ ಸಮ್ಮೇಳನಕ್ಕೆ ಸಿದ್ಧ ಮಾಡಿದ್ದು, ಸಮ್ಮೇಳನದ ಮುಖ್ಯ ರೂವಾರಿಗಳಾದ ಡಾಕ್ಟರ್ ಜಿ ಪರಮೇಶ್ವರ್ ಅವರು ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ನಾಡಿನ ವಿವಿಧ ಗಣ್ಯರು ಮಠಾಧೀಶರು ಸೇರಿ ಸಮ್ಮೇಳನವನ್ನು ಯಶಸ್ವಿಗೊಳಿಸಲಿದ್ದಾರೆ ಎಂದು ತಿಳಿಸಿದರು.
ನಗರದ ಟೌನ್ ಹಾಲ್ ವೃತ್ತದಿಂದ ನಡೆಯಲಿರುವ ರಾಜ್ಯ ಸಮ್ಮೇಳನದ ಮೆರವಣಿಗೆ ಬಹಳ ಮಹತ್ವಪೂರ್ಣವಾಗಿದ್ದು ಇದರಲ್ಲಿ ಸಾವಿರಾರು ಪತ್ರಕರ್ತರುಗಳು ಹೆಜ್ಜೆ ಹಾಕಲಿದ್ದಾರೆ ಸಮ್ಮೇಳನ ಜಾಗದಲ್ಲಿ ಸಿದ್ಧತೆ ಮಾಡಲಾಗಿರುವ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಲಿದೆ ನಾಳೆ ಸಂಜೆ ನಾಡಿನ ಖ್ಯಾತ ಗಾಯಕಿ ಶಮಿತ ಮಲ್ನಾಡ್ ಅವರಿಂದ ಯೋಜನೆ ಮಾಡಲಾಗಿರುವ ರಸ ಸಂಜೆ ಎಲ್ಲರ ಗಮನ ಸೆಳೆದಿದೆ ಪತ್ರಕರ್ತರುಗಳಿಗೆ ಕಗ್ಗಂಟಾಗಿರುವ ಅನೇಕ ವಿಚಾರಗಳಿಗೆ ವಿಚಾರಗೋಷ್ಠಿಗಳನ್ನ ಆಯೋಜನೆ ಮಾಡಲಾಗಿದ್ದು ಈ ದೋಸ್ತಿಗಳಲ್ಲಿ ಅದಕ್ಕೆ ಉತ್ತರ ಕಂಡುಕೊಳ್ಳಬಹುದು ಇದಕ್ಕೆ ನಾಡಿನ ಹಿರಿಯ ಪತ್ರಕರ್ತರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.ಜಿಲ್ಲಾಧ್ಯಕ್ಷ ಚೀನಿ ಪುರುಷೋತ್ತಮ್ ಅವರು ಮಾತನಾಡಿದರು.
(Visited 1 times, 1 visits today)