ತುಮಕೂರು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡಾಗ ಮಾತ್ರ ವೃತ್ತಿ ಜೀವನದಲ್ಲಿ ಬರುವ ಸಲಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಎಂದು ಎಸ್ ಎಸ್ ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂಎಸ್ ರವಿಪ್ರಕಾಶ್ ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾನಿಲಯದ ಎಲೆಕ್ಟಿçಕಲ್ ಸೆಮಿನಾರ್ ನಲ್ಲಿ ನಡೆದ ಇಂಡಸ್ಟಿçಯಲ್ ಆಟೋಮೇಷನ್ ಎಂಬ ವಿಷಯದ ಕುರಿತು ಹತ್ತು ದಿನಗಳ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಅಭಿವೃದ್ಧಿಯಾಗಿರುವ ಕೃತಕ ಬುದ್ದಿಮತ್ತೆಯಂತಹ ತ್ರಂತ್ರಜ್ಞಾನವು ಸಾಕಷ್ಟು ಕ್ಷೇತ್ರವನ್ನು ಆವರಿಸಿದೆ. ಇಂತಹ ತಂತ್ರಜ್ಞಾನಗಳ ಅರಿವು ನಿಮಗಿದ್ದರೆ ತಾಂತ್ರಿಕ ಯುಗದಲ್ಲಿ ನೀವು ಉಳಿಯಲು ಸಾಧ್ಯವಾಗುತ್ತದೆ. ಕಲಿಕೆ ನಿರಂತರವಾದ್ದು ಪ್ರತಿನಿತ್ಯವೂ ಹೊಸತನ್ನು ಕಲಿಯುತ್ತಿರಬೇಕು ಎಂದು ತಿಳಿಸಿದರು.
ಎಚ್‌ಎಂಎಸ್ ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟಿçಕಲ್ ವಿಭಾಗದ ಮುಖ್ಯಸ್ಥರಾದ ಡಾ. ತ್ಯಾಗರಾಜು ಮಾತನಾಡಿ ವಿದ್ಯಾರ್ಥಿಗಳು ಪ್ರೆಶ್ನೆಕೇಳುವ ಮನೋಭಾವವನ್ನು ರೂಡಿಸಿಕೊಳ್ಳಿ. ಪ್ರೆಶ್ನೆ ಕೇಳುವುದರಿಂದ ಗೊಂದಲಗಳಿಗೆ ಪರಿಹಾರ ಸಿಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಈ ಕಾರ್ಯಗಾರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಈ ಇಂಡಸ್ಟಿçಯಲ್ ಆಟೋ ಮೇಷಷನ್ ಕಾರ್ಯಗಾರದಲ್ಲಿ ಎಚ್.ಎಂ.ಎಸ್ ಪಾಲಿಟೆಕ್ನಿಕ್ ಕಾಲೇಜಿನ 53 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಕಾರ್ಯಗಾರದಲ್ಲಿ ಪ್ರಾಧ್ಯಾಪಕರಾದ ಡಾ. ರಾಜೇಶ್ ಕಾಮತ್, ಡಾ.ಜಿ.ಎಸ್ ಶೇಷಾದ್ರಿ, ವಿಭಾಗದ ಮುಖ್ಯಸ್ಥರಾದ ಡಾ. ಎನ್ ಪ್ರದೀಪ್, ಸಹಾಯಕ ಪ್ರಾಧ್ಯಾಪಕರಾದ ಡಾ.ಯೋಗಾನಂದ ಬಿ.ಎಸ್, ಡಿ.ವಿ ವೇಣುಗೋಪಾಲ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
(Visited 1 times, 1 visits today)