ತುಮಕೂರು: ಹನ್ನೇರಡನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ಪ್ರಮುಖ ರೂವಾರಿಯಾದ ಬಸವಣ್ಣನವರು ದೇವರು, ದೇವಾಲಯ ಎರಡನ್ನು ವಿರೋಧಿಸಲಿಲ್ಲ. ಬದಲಾಗಿ ದೇವರು ಮತ್ತು ಭಕ್ತರ ನಡುವಿನ ಮದ್ಯವರ್ತಿಯನ್ನು ಮಾತ್ರ ವಿರೋಧಿಸಿದ್ದರು ಎಂದು ಚಿತ್ರದುರ್ಗದ ಶ್ರೀ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದ್ದಾರೆ.
ತುಮಕೂರು ತಾಲೂಕು ಗೂಳೂರು ಹೋಬಳಿ ಕೌತಮಾರನಹಳ್ಳಿಯ ಶ್ರೀಹಟ್ಟಿ ಮಾರಮ್ಮ ದೇವಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶ್ರೀಹಟ್ಟಿ ಮಾರಮ್ಮ ದೇವಿಯ ಸ್ಥಿರಬಿಂಬ ಪ್ರಾಣ ಪ್ರತಿಷ್ಠಾಪನೆ ಹಗೂ ನೂತನ ದೇವಾಲಯ ಉದ್ಘಾಟನಾ ಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತಿದ್ದ ಅವರು, ದೇವರ ಹೆಸರಿನಲ್ಲಿ ಮೌಢ್ಯಗಳನ್ನು ಮುನ್ನೆಲೆಗೆ ತಂದು, ಅಸ್ಪಷ್ಯರನ್ನು ದೇವಾಲಯದ ಒಳಗೆ ಬರಲು ಅಡ್ಡಿ ಮಾಡಿದ ಹಿನ್ನೆಲೆಯಲ್ಲಿ ನಿನಗೆ ದೇವರನ್ನು ಹತ್ತಿರದಿಂದ ನೋಡಲು ಸಾಧ್ಯವಿಲ್ಲ ಎಂದದಾರೆ, ನಿನ್ನ ಅಂಗದ ಮೇಲೆ ಲಿಂಗಧರಿಸಿ ದೇವರನ್ನು ಕಾಣು ಎಂದು ಹೇಳಿದ್ದರೇ ಹೊರತು, ದೇವರು ದೇವಾಲಯವನ್ನು ಎಂದಿಗೂ ವಿರೋಧಿಸಲಿಲ್ಲ.ಆದರೆ ಕೆಲವರು ಶರಣ ಪರಂಪರೆಯಿAದ ಮಠಗಳ ಸ್ವಾಮೀಜಿಗಳೇ ದೇವಾಲಯಕ್ಕೆ ಹೋಗಬಾರದು ಎಂಬAತೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಕಳೆದ 10-15 ವರ್ಷಗಳಿಗೆ ಹೋಲಿಕೆ ಮಾಡಿದರೆ ಸ್ವಾಮೀಜಿಗಳು ದಲಿತ ಕೇರಿಗಳಿಗೆ ಹೋದ ಸಂದರ್ಭದಲ್ಲಿ ಬೆರಳೆಣಿಕೆ ಯನ್ನು ಯುವಕರು ನಮ್ಮ ಜೊತೆ ಹೆಜ್ಜೆ ಹಾಕುತಿದ್ದರು, ಹೆಣ್ಣು ಮಕ್ಕಳು ಕಿಟಿಕಿಯಲ್ಲಿಯೋ, ಬಾಗಿಲಿನ ಬಳಿಯೋ ನೋಡಿ ಮನೆಯ ಒಳಗೆ ಉಳಿಯುತಿದ್ದರು ಎಂದರು. ಕಾರ್ಯಕ್ರಮದಲ್ಲಿ ಶ್ರೀಆದಿಜಾಂಭವ ಮಹಾ ಸಂಸ್ಥಾನ ಮಠದ ಶ್ರೀಶ್ರೀ ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮೀಜಿ, ಶ್ರೀಶನೇಶ್ವರ ಕ್ಷೇತ್ರ ಪಾಲನಹಳ್ಳಿ ಮಠದ ಡಾ.ಸಿದ್ದರಾಜು ಸ್ವಾಮೀಜಿ, ನಿವೃತ್ತ ಚೀಪ್ ಇಂಜಿನಿಯರ್ ಶಿವಕುಮಾರ್, ವೈ.ಹೆಚ್.ಹುಚ್ಚಯ್ಯ, ಗೂಳೂರು ಶಿವಕುಮಾರ್, ಆಂಜನಪ್ಪ, ಕುಮಾರಣ್ಣ.. ರಮೇಶ್, ಉಪಸ್ಥಿತರಿದ್ದರು.
(Visited 1 times, 1 visits today)