ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯ್ತಿ ಕಛೇರಿಗೆ ಲೋಕಾಯುಕ್ತ ಇನ್‌ಸ್ಪೆಕ್ಟರ್ ಸುರೇಶ್ ಅವರು ಬುಧವಾರ ಮತ್ತೊಮ್ಮೆ ಭೇಟಿ ನೀಡಿದರು. ಮುಖ್ಯಾಧಿಕಾರಿ ಅನುಪಸ್ಥಿತಿಯಲ್ಲಿ ಖಾತೆ ಸಂಬAಧ ಕೆಲ ದಾಖಲಾತಿಗಳನ್ನು ಪರಿಶೀಲಿಸಿದರು. ಹುಳಿಯಾರು ಪಟ್ಟಣ ಪಂಚಾಯ್ತಿಯಲ್ಲಿ ಅಕ್ರಮ ಖಾತೆ ಮಾಡಿಕೊಡಲಾಗುತ್ತಿದೆ. ಪೌರಕಾಮಿಕನೋರ್ವನನ್ನು ಖಾತೆ ಮಾಡಿಕೊಡಲು ಅಕ್ರಮವಾಗಿ ನೇಮಕ ಮಾಡಿಕೊಂಡಿದ್ದಾರೆAಬ ದೂರಿನ ಅನ್ವಯ ಕಳೆದ ಶುಕ್ರವಾರ ದಿಡೀರ್ ಭೇಟಿ ನೀಡಿದ್ದರು. ಆಗ ಮುಖ್ಯಾಧಿಕಾರಿಗಳ ಬಳಿ ಇರಬೇಕಿದ್ದ ಡಾಂಗಲ್ ಪೌರಕಾರ್ಮಿಕ ಬಳಿ ಇತ್ತು. ಇದೊಂದೇ ಸಾಕ್ಷಿö್ಯ ಪಂಚಾಯ್ತಿಯಲ್ಲಿ ಅಕ್ರಮ ನಡೆಯುತ್ತಿರುವುದನ್ನು ಸಾಬೀತು ಪಡಿಸುವಂತಿತ್ತು. ಇಬ್ಬರನ್ನೂ ಈ ಸಂಬAಧ ಕಾನೂನಾತ್ಮಕ ಪ್ರಶ್ನೆಗಳನ್ನು ಕೇಳಿ ದಾಖಲೆ ಮಾಡಿಕೊಂಡಿದ್ದ ಇನ್‌ಸ್ಪೆಕ್ಟರ್ ಬುಧವಾರ ಮತ್ತೊಮ್ಮೆ ಹೆಚ್ಚಿನ ಪರಿಶೀಲನೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಎಸ್.ನಾಗಭೂಷಣ್ ತುಮಕೂರಿಗೆ ಮೀಟಿಂಗ್ ಹೋಗಿದ್ದರು. ಆದರೂ ಆರ್‌ಒ ಶೃತಿ ಹಾಗೂ ಮಲ್ಲಿಕಾರ್ಜುನಯ್ಯ ಅವರಿಂದ ಈ ಸಂಬAಧ ಹೆಚ್ಚಿನ ಮಾಹಿತಿ ಸಂಗ್ರಹಿಸಿದರು. ಇದುವರೆವಿಗೂ ಮಾಡಿಕೊಟ್ಟಿರುವ ಖಾತೆಗಳ ವಿವರ ಪಡೆದಿರುವ ದಾಖಲಾತಿಗಳು ಹಾಗೂ ಸೀನಿಯಾರಿಟಿ ನಿಯಮ ಫಾಲೋ ಮಾಡುತ್ತಿದ್ದರೋ, ಇಲ್ಲವೋ ಎಂಬ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಅಕ್ರಮವಾಗಿ ಲೇಔಟ್‌ಗೆ ಖಾತೆ ಮಾಡಿಕೊಟ್ಟಿರುವ ಬಗ್ಗೆಯೂ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕರವೇಯ ಅಧ್ಯಕ್ಷ ಬೇಕರಿ ಪ್ರಕಾಶ್ ಹಾಗೂ ಪುರುಷೋತ್ತಮ್ ಅವರು ಆಗಮಿಸಿ ಮನ್ನಸೋಇಚ್ಚೆ ಕಂದಾಯ ವಸೂಲಿ ಮಾಡುತ್ತಿರುವ, ಖಾತೆ ಮಾಡಿಕೊಡಲು ಸತಾಯಿಸುತ್ತಿರುವ ಹಾಗೂ ಮೂಲ ಸೌಕರ್ಯ ಕಲ್ಪಿಸದೆ ನಿರ್ಲಕ್ಷಿö್ಯಸುತ್ತಿರುವ ಬಗ್ಗೆ ಮೌಖಿಕವಾಗಿ ದೂರು ಸಲ್ಲಿಸಿದರು. ಪರಿಶೀಲನೆ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಪಂಚಾಯ್ತಿಯಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಿ ಕೆಲಸ ಕಾರ್ಯ ಮಾಡುತ್ತಿರುವುದರ ಬಗ್ಗೆ ದಾಖಲೆಗಳು ಲಭಿಸಿದ್ದು ಲೋಕಾಯುಕ್ತರಿಗೆ ತನಿಖೆಯ ಸಂಪೂರ್ಣ ವರದಿ ಸಲ್ಲಿಸುತ್ತೇನೆ. ಶಿಕ್ಷೆ ಆಗುವುದು ನಿಶ್ಚಿತ ಎಂದೇಳಿ ತೆರಳಿದರು.ಪೌರಕಾರ್ಮಿಕ ಆನಂದ್ ಗೈರು: ಪಂಚಾಯ್ತಿಯಲ್ಲಿ ಪೌರಕಾರ್ಮಿಕನಾಗಿದ್ದರೂ ಸಹ ನಿಯಮಬಾಹಿರವಾಗಿ ಕಂಪ್ಯೂಟರ್ ಆಪರೇಟರ್ ಕೆಲಸ ನಿರ್ವಹಿಸುತ್ತಿದ್ದ ಆನಂದ್ ಮೇಲೆ ಅಕ್ರಮ ಖಾತೆ ಮಾಡಿಕೊಟ್ಟಿರುವ ಹಾಗೂ ಮನೆಯಲ್ಲೇ ಕಛೇರಿಯ ಕೆಲಸ ನಿರ್ವಹಿಸುತ್ತಿರುವ ಮತ್ತು ಡಾಂಗಲ್ ಬಳಸುತ್ತಿರುವ ದೂರು ಬಂದಿತ್ತು. ಪರಿಣಾಮ ಕಳೆದ ಶುಕ್ರವಾರ ಲೋಕಾಯುಕ್ತ ಇನ್‌ಸ್ಪೆಕ್ಟರ್ ಬಂದು ತೀರ್ವ ತರಾಟೆಗೆ ತೆಗೆದುಕೊಂಡಿದ್ದರು. ಮರುದಿನದಿಂದ ಆನಂದ್ ಕೆಲಸಕ್ಕೆ ಗೈರಾಗಿದ್ದು ಮತ್ತೊಮ್ಮೆ ಅಂದರೆ ಬುಧವಾgವೂ ಸಹ ಲೋಕಾಯುಕ್ತ ಇನ್‌ಸ್ಪೆಕ್ಟರ್ ಬಂದಿದ್ದಾಗ ಗೈರಾಗಿದ್ದರು.
(Visited 1 times, 1 visits today)