ತುಮಕೂರು: ನಗರದ ಕುಣಿಗಲ್ ರಸ್ತೆಯಲ್ಲಿರುವ ರಾಮಕೃಷ್ಣ ನಗರದ ಶ್ರೀ ಶಿರಡಿ ಸಾಯಿನಾಥ ಸೇವಾ ಸಮಿತಿ ವತಿಯಿಂದ 13ನೇ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊAದಿಗೆ ನಡೆಯಿತು.
13ನೇ ವಾರ್ಷಿಕೋತ್ಸವದ ಅಂಗವಾಗಿ ಅಮರಜ್ಯೋತಿನಗರ, ಗಾಂಧಿನಗರ ಹಾಗೂ ಬನಶಂಕರಿ ನಗರದಲ್ಲಿ ಭಿಕ್ಷಾಟನೆ ನಡೆಸಲಾಯಿತು.
ಭಿಕ್ಷಾಟನೆಗೆ ಸಾಯಿನಾಥ ದೇವಾಲಯದ ಸಂಸ್ಥಾಪಕರಾದ ಮಾಜಿ ಸಂಸದ ಜಿ.ಎಸ್. ಬಸವರಾಜು ಚಾಲನೆ ನೀಡಿದರು. ಸಂಜೆ 6.30 ರಿಂದ ಸಾಯಿ ಭಜನೆ ನಡೆಯಿತು. ಬೆಳಿಗ್ಗೆ 6 ಗಂಟೆಗೆ ಸಾಯಿಬಾಬ ಮೂರ್ತಿಗೆ ಕಾಕಡ ಆರತಿ, ಕ್ಷೀರಾಭಿಷೇಕ, ವಿಶೇಷ ಲೋಕಶಾಂತಿ ಹೋಮ, ಪೂರ್ಣಾಹುತಿ ಹಾಗೂ ಮಧ್ಯಾಹ್ನ ಮಹಾಮಂಗಳಾರತಿ ನೆರವೇರಿತು. ರಾತ್ರಿ ಪಲ್ಲಕ್ಕಿ ಉತ್ಸವ, ಶೇಜಾರತಿ ನೆರವೇರಿತು. ವಾರ್ಷಿಕೋತ್ಸವದ ಪ್ರಯುಕ್ತ ಭಕ್ತರಿಗೆ ನಿರಂತರ ದಾಸೋಹವನ್ನು ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸಾಯಿ ಮಂದಿರದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಭಕ್ತರಾದ ಲಕ್ಷಿ÷್ಮÃಬಾಯಿ ಶಿಂಧೆ ಅವರಿಗೆ ಸಾಯಿಬಾಬಾರವರು ಪ್ರಸಾದ ರೂಪದಲ್ಲಿ ನೀಡಲಾಗಿದ್ದ 9 ನಾಣ್ಯಗಳ ದಿವ್ಯ ದರ್ಶನವನ್ನು ಸಾರ್ವಜನಿಕರ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಶಿರಡಿಯಿಂದ ತಂದಿದ್ದ ಈ 9 ನಾಣ್ಯಗಳ ದಿವ್ಯ ದರ್ಶನವನ್ನು ಭಕ್ತಾದಿಗಳು ಸರದಿಯ ಸಾಲಿನಲ್ಲಿ ನಿಂತು ಪಡೆದು ಪುನೀತರಾದರು.
ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಕಳೆದ 13 ವರ್ಷದ ಹಿಂದೆ ಎಲ್ಲರ ಸಹಕಾರದೊಂದಿಗೆ ಸಾಯಿಬಾಬಾರವರ ದೇವಾಲಯವನ್ನು ನಿರ್ಮಾಣ ಮಾಡಲಾಯಿತು. ಭಕ್ತಿ, ಜ್ಞಾನ, ದಾಸೋಹ ಕೇಂದ್ರವೂ ಕೂಡಾ ಆಗಿದೆ. 13 ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಭಕ್ತರ ಮನೋಭಿಲಾಷೆಗಳು ಈಡೇರುತ್ತಿವೆ. ಭಿಕ್ಷಾಟನೆ ಮಾಡುತ್ತಿರುವುದು ಸಾಯಿನಾಥನ ಸಂಪ್ರದಾಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿರಡಿಯ ಅರುಣ್ ಗಾಯಕವಾಡ್, ಶ್ರೀ ಶಿರಡಿ ಸಾಯಿನಾಥ ಸೇವಾ ಸಮಿತಿಯ ಕೆ.ಎಸ್. ಗುರುಸಿದ್ದಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಶಿವರುದ್ರಪ್ಪ, ರಂಗನಾಥ್, ರಕ್ಷಿತ್‌ಕುಮಾರ್, ಹರೀಶ್ ಸೇರಿದಂತೆ ಭಕ್ತಾದಿಗಳು ಭಾಗವಹಿಸಿದ್ದರು.
(Visited 1 times, 1 visits today)