ತುರುವೇಕೆರೆ: ತಾಲೂಕಿನಲ್ಲಿ ನೂರಾರು ಎಕರೆ ಗೋಮಾಳ, ಅರಣ್ಯ ಭೂಮಿಯನ್ನು ಬಗರ್ ಹುಕುಂ ಕಮಿಟಿ ಮುಂದೆ ಅರ್ಜಿಗಳೇ ಭಾರದೆ ಕಂದಾಯ ಅಧಿಕಾರಿಗಳು ಅಕ್ರಮವಾಗಿ ಮುಂಜೂರು ಮಾಡಿ ಕೊಟ್ಟಿದ್ದಾರೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಹಿಂದಿನ ತಹಶೀಲ್ದಾರ್ ರೇಣುಕುಮಾರ್ ಅವದಿಯಲ್ಲಿ ನೂರಾರು ಎಕರೆ ಗೋಮಾಳ ಹಾಗೂ ಅರಣ್ಯ ಭೂಮಿಯನ್ನು ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ನೂರಾರು ಎಕರೆ ಭೂಮಿಯನ್ನು ಲಕ್ಷಾಂತರ ರೂ ಹಣ ಪಡೆದು ಅಧಿಕಾರಿಗಳು ಮುಂಜೂರು ಮಾಡಿಕೊಟ್ಟಿದ್ದಾರೆ. ಮಾಯಸಂದ್ರ ಹೋಬಳಿ ನರೀಗೆಹಳ್ಳಿ ಗ್ರಾಮದ ಸರ್ವೆ ನಂ 22 ರಲ್ಲಿ ಜಯಮ್ಮ ಕೋ ನರಸಿಂಹಯ್ಯ 3 ಎಕರೆ, ಚಿಕ್ಕಮ್ಮ ಕೋಂ ನರಸಿಂಹಯ್ಯ 2.30 ಗುಂಟೆ, ರಾಮಣ್ಣ ಬಿನ್ ಮುದ್ದಯ್ಯ 3 ಎಕರೆ, ಸಣ್ಣ ಹನುಮಯ್ಯ ಬಿನ್ ತಿಮ್ಮಯ್ಯ 2.22 ಗುಂಟೆ. ಸರ್ವೆ ನಂ 20ರಲ್ಲಿ ಆರ್.ರಂಗಸ್ವಾಮಿ ಬಿನ್ ರಂಗಯ್ಯ 3 ಎಕರೆ, ಹುಚ್ಚಯ್ಯ ಬಿನ್ ನರಸಿಂಹಯ್ಯ 3.10 ಗುಂಟೆ, ತಿಮ್ಮಯ್ಯ ಬಿನ್ ಹನುಮಯ್ಯ 3.10 ಗುಂಟೆ, ತಿಮ್ಮಯ್ಯ ಬಿನ್ ಹನುಮಯ್ಯ 3.35 ಗುಂಟೆ ಸರ್ಕಾರಿ ಅರಣ್ಯ ಪ್ರದೇಶದ ಭೂಮಿಯನ್ನು ಗ್ರಾಮ ಲೆಕ್ಕಿಗರು, ಕಂದಾಯ ಅಧಿಕಾರಿಗಳು ನಕಲಿ ದಾಖಲೇ ಸೃಷ್ಟಿಸಿ ಮುಂಜೂರು ಮಾಡಿ ಕೊಟ್ಟಿದ್ದಾರೆ. ಅಕ್ರಮವಾಗಿ ಮುಂಜೂರು ಮಾಡಿಸಿಕೊಂಡಿರುವರು ಬಹುತೇಖ ಜನರು ಬೆಂಗಳೂರು ವಾಸವಾಗಿದ್ದು ಯಾರು ಸಹ ಇಲ್ಲಿ ಉಳುಮೇ ಮಾಡಿಲ್ಲ. ಅರಣ್ಯ ಭೂಮಿಯನ್ನು ಮುಂಜೂರು ಮಾಡಿಕೊಟ್ಟಿದ್ದಾರೆ. ತಾಲೂಕಿನಾದ್ಯಂತ ಇದು ಒಂದು ದೊಡ್ಡ ಜಾಲವೇ ಹರಡಿದೆ. ಅಕ್ರಮವಾಗಿ ಮುಂಜೂರು ಮಾಡಿಸಿಕೊಂಡಿರುವ ಸುಮಾರು 30 ಹೆಚ್ಚು ಜನರ ಮಾಹಿತಿಯನ್ನು ಕಲೆಹಾಕಿದ್ದು ಇದರ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಬೇಕು ಅಕ್ರಮ ಎಸಗಿರುವ ಅದಿಕಾರಿಗಳನ್ನು ಅಮಾನತ್ ಮಾಡಿ ಎಂದು ಜಿಲ್ಲಾದಿಕಾರಿಗಳಿಗೆ ಪತ್ರ ಬರೆದು ಕೋರಲಾಗಿದೆ ಎಂದರು. ಗೋಷ್ಟಿಯಲ್ಲಿ ಮುಖಂಡರಾದ ತ್ಯಾಗರಾಜು, ವಿಜಯಕುಮಾರ್, ವೆಂಕಾಟಪುರಯೋಗೀಶ್, ವೆಂಕಟೇಶ್, ಕಾಂತರಾಜು, ಪುನೀತ್, ರಂಗಸ್ವಾಮಿ, ಜಯರಾಮಯ್ಯ ಸೇರಿದಂತೆ ಇತರರು ಇದ್ದರು.
(Visited 1 times, 1 visits today)