ತುರುವೇಕೆರೆ: ಪಟ್ಟಣದ ಆಸ್ತಿಗಳ ಮಾಲೀಕರು ಇ-ಖಾತೆ ಆಂದೋಲನ ಕಾರ್ಯಕ್ರಮದಲ್ಲಿ ತಮ್ಮ ಆಸ್ತಿಗಳ ಅಗತ್ಯ ಧಾಖಲೆಗಳನ್ನು ಪಟ್ಟಣ ಪಂಚಾಯ್ತಿಗೆ ಸಲ್ಲಿಸಿ ಇ -ಖಾತೆ ಮಾಡಿಸಿಕೊಳ್ಳಬೇಕೆಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸ್ವಪ್ನ ನಟೇಶ್ ಮನವಿ ಮಾಡಿದರು.
ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಇ.ಖಾತೆ ಆಂದೋಲನ ಕಾರ್ಯಕ್ರಮದ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ಆದೇಶದಂತೆ ಯಾವ ಆಸ್ತಿಗಳ ಇ ಖಾತೆ ಮತ್ತು ಯಾವೆಲ್ಲಾ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಟ್ಟಿಲ್ಲ. ಅಂತಹ ಆಸ್ತಿಗಳನ್ನು ಪಟ್ಟಣದ ವ್ಯಾಪ್ತಿಯಲ್ಲಿನ ಕರ್ನಾಟಕ ಪೌರಸಭೆಗಳ ಅಧಿನಿಯಮ 1964
ಪ್ರಕರಣ 94 ಮತ್ತು ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ಪ್ರಕರಣ ವಿನಾಯಿತಿಗೊಳ ಪಟ್ಟಣ ಆಸ್ತಿಗಳನ್ನು ಹೊರತು ಪಡಿಸಿದ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ, 110ರಲ್ಲಿ ಉಳಿದಂತಹ ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿAದ ನೀಡಲಾದ ಹಕ್ಕು ಪತ್ರಗಳು, ಕಂದಾಯ ಇಲಾಖೆಯಿಂದ 94 ಸಿ ಅಡಿ ನೀಡಲಾದ ಹಕ್ಕು ಪತ್ರ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ಬಡಾವಣೆಯಲ್ಲಿನ ಆಸ್ತಿಗಳನ್ನು ಅಧಿಕೃತ ಎಂದು ಪರಿಗಣಿಸಿದ್ದು, ಅಂತಹ ಆಸ್ತಿಗಳನ್ನು “ಎ” ರಿಜಿಸ್ಟರ್ ನಲ್ಲಿ ನಮೂದಿಸಬೇಕು ಹಾಗೆಯೇ ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆಗಳಲ್ಲಿನ ನಿವೇಶನಗಳು / ಕಟ್ಟಡಗಳು ಭೂ ಪರಿವರ್ತನೆಯಾಗದೇ ಉಪವಿಭಜನೆ ಮಾಡಿ ನಿವೇಶನಗಳಾಗಿ ಮಾರಾಟ ಮಾಡಿರುವ ನಿವೇಶನ /ಕಟ್ಟಡಗಳು ; ರಿಜಿಸ್ಟರ್ ನಲ್ಲಿ ದಾಖಲಿಸಲಾಗುವುದು ಎಂದರು. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಡಗಳು/ನಿವೇಶನಗಳನ್ನು ಹೊಂದಿರುವ ಆಸ್ತಿ ಮಾಲೀಕರುಗಳು ಮಾನ್ಯ ಸರ್ಕಾರದ ಅಧೀನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು ರವರ ಅಂತಿಮ ಅಧಿಸೂಚನೆ ನಂ:ಯುಡಿಡಿ / 126 / ಜಿಇಎಲ್ /2023(ಇ), ದಿನಾಂಕ 11-02-2025 ರಂದು ನೀಡಲಾಗಿರುವ ಸುತ್ತೋಲೆಯಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯೊಳಗೆ ಬರುವ ಎಲ್ಲಾ ರೀತಿಯ ಕಟ್ಟಡ / ನಿವೇಶನಗಳಿಗೆ ಆಸ್ತಿ ತೆರಿಗೆ ನಿರ್ಧರಣೆಗೊಳಿಸಿ ಆಸ್ತಿ ತೆರಿಗೆಯನ್ನು 2024-25ನೇ ಸಾಲಿನ ಅಂತ್ಯದವರೆಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಕೊಂಡು ಸಂಬAಧಪಟ್ಟ ಆಸ್ತಿ ಮಾಲೀಕರಿಂದ ತಮ್ಮ ಸ್ವತ್ತಿಗೆ ಸಂಬAಧಪಟ್ಟ ದಾಖಲೆಗಳನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ / ಕಛೇರಿಗೆ ಸಲ್ಲಿಸತಕ್ಕದು ಎಂದರು. ಉಪಾಧ್ಯಕ್ಷೆ ಭಾಗ್ಯಮ್ಮ ಮಾಜಿ ಸದಸ್ಯರುಗಳಾದ ಆಶಾ ರಾಣಿ ರಾಜಶೇಖರ್,ಅಂಜನ್ ಕುಮಾರ್, ಪ್ರಭಾಕರ್, ಮಧು, ಶೀಲಾ ಶಿವಪ್ಪ ನಾಯಕ, ಶ್ರೀನಿವಾಸ್, ಮುಖ್ಯಧಿಕಾರಿ ಶ್ರೀನಾಥ್ ಬಾಬು, ಹಾಗೂ ಪಟ್ಟಣ ಪಂಚಾಯಿತಿಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
(Visited 1 times, 1 visits today)