ತುಮಕೂರು: ಭÀ್ರಷ್ಟಾಚಾರ ರಹಿತ, ನೈತಿಕ ರಾಜಕಾರಣವನ್ನು ನಂಬಿಕೊAಡಿರುವ ಜೆಡಿ(ಯು), ಮುಂಬರುವ 2026ರಲ್ಲಿ ನಡೆಲಿರುವ ಆಗ್ನೇಯ ಪದÀವಿಧರ ಶಿಕ್ಷಕರ ಕ್ಷೇತ್ರದ ಸಂಯುಕ್ತ ಜನತಾದಳದ ಅಭ್ಯರ್ಥಿಯಾಗಿ ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಕೆ.ನಾಗರಾಜ ಅವರನ್ನು ಕಣಕ್ಕೆ ಇಳಿಸಲು ತೀರ್ಮಾನಿಸಿದೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಎಲ್ಲಾ ರಾಜಕೀಯ ಪಕ್ಷಗಳಿಗಿಂತ ಮೊದಲು ನಾವು ಅಭ್ಯರ್ಥಿಯನ್ನು ಘೋಷಣೆ ಮಾಡಿರುವ ಉದ್ದೇಶ, ಪ್ರತಿ ಮತದಾರರನ್ನು ಅಭ್ಯರ್ಥಿ ಭೇಟಿಯಾಗಿ, ಮತಯಾಚಿಸಲಿ, ಹಣ, ಹೆಂಡ, ಇನ್ನಿತರ ಅಮಿಷಗಳ ಹೊರತಾಗಿಯೂ ಜನರು ವ್ಯಕ್ತಿ ನೋಡಿ ಮತ ಹಾಕುವಂತಹ ವಾತಾವರಣ ನಿರ್ಮಾಣವಾಗಬೇಕು ಎಂಬುದೇ ಅಗಿದೆ ಎಂದರು.
ನಮ್ಮ ತಂದೆಯವರಾದ ಜೆ.ಹೆಚ್.ಪಟೇಲ್,ರಾಮಕೃಷ್ಣ ಹೆಗಡೆ ಸೇರಿದಂತೆ ಅನೇಕರು ರಾಜಕಾರಣವೆಂದರೆ ಕೇವಲ ಅಧಿಕಾರ ಎಂದು ಭಾವಿಸಿರಲಿಲ್ಲ.ಕೃಷಿ,ಪರಿಸರ,ಶಿಕ್ಷಣ,ಆಡಳಿತ,ಆರೋಗ್ಯ ಇವುಗಳೆಲ್ಲಾ ಉತ್ತಮವಾಗಿರಬೇಕು ಎಂದು ಬಯಸಿದ್ದರು. ಹಾಗಾಗಿಯೇ ಅವರ ಆಡಳಿತ ಕಾಲದಲ್ಲಿ ಕಲೆ, ಸಾಹಿತ್ಯಕ್ಕೆ ಹೆಚ್ಚಿನ ಅದ್ಯತೆ ನೀಡಲಾಗಿತ್ತು.ಆದರೆ ಇಂದಿನ ರಾಜಕಾರಣ ಬದಲಾಗಿದೆ.ರಾಜಕಾರಣವೆಂದರೆ ಹಣ ಹೂಡಿ, ಹಣ ಮಾಡುವುದು ಎಂಬAತಾಗಿದೆ.ಈ ಸ್ಥಿತಿ ಬದಲಾಗಬೇಕು ಎಂಬುದು ಜೆಡಿಯು ಕರ್ನಾಟಕದ ಆಶಯವಾಗಿದೆ ಎಂದು ಮಹಿಮ ಜೆ.ಪಟೇಲ್ ನುಡಿದರು.
ಸರ್ವೋದಯ ಕರ್ನಾಟಕದ ಮೊದಲ ಪ್ರವಾಸ ಆಗ್ನೇಯ ಪದವಿಧರ ಕ್ಷೇತ್ರದ ವ್ಯಾಪ್ತಿಗೆ ಒಳಗೊಂಡAತೆ ನಡೆಯಲಿದೆ. ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಪ್ರಾರಂಭಗೊAಡಿದೆ.ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ವಿದ್ಯಾವಂತ ಪದವಿಧರರಿಗೆ ಪಕ್ಷದ ಸಿದ್ದಾಂತ ತಿಳಿಸುವ ಜೊತೆಗೆ,ಮುಂದಿನ ಆಗ್ನೇಯ ಪದವಿಧರ ಕ್ಷೇತ್ರದ ಚುನಾವಣೆಗೆ ಮತದಾರರ ನೊಂದಣಿ ಆರಂಭಿಸುವುದು,ಹಾಗೆಯೇ ಸರ್ವೋದಯ ಪರಿಕಲ್ಪನೆಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಡಾ.ಕೆ.ನಾಗರಾಜ ಅವರನ್ನು ಬೆಂಬಲಿಸುವAತೆ ಮನವಿ ಮಾಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಜೆಡಿಯು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ರಂಗನಾಥ್., ಉಪಾಧ್ಯಕ್ಷರಾದ ಯಶೋಧ, ರೈತ ಘಟಕದ ಶ್ರೀನಿವಾಸಗೌಡ, ಮುಖಂಡರಾದ ಶಾಂತಕುಮಾರಿ, ಯುವ ಜನತಾದಳ (ಸಂಯುಕ್ತ)ದ ಬಿ.ಎಂ.ಪ್ರಭು, ಮೈನಾವತಿ, ಚಂದ್ರಶೇಖರ ಗಂಗು, ಕಲ್ಪನಾಗೌಡ ಪಸ್ಥಿತರಿದ್ದರು.
(Visited 1 times, 1 visits today)