ತುಮಕೂರು: ದೇಶದಲ್ಲಿ ಸಾಮಾಜಿಕ ಚಿಂತಕರ ಸಂಖ್ಯೆ ಕಡಿಮೆಯಾಗುತ್ತಿದೆ, ವ್ಯಕ್ತಿಗತ ಚಿಂತನೆಗಳು ಮೇಲುಗೈ ಪಡೆಯುತ್ತಿವೆ. ಇಂತಹ ಸಂದರ್ಭದೊಳಗೆ ಸಾಮಾಜಿಕ ಸಹಿಷ್ಣುತೆಯ ಲೇಖಕರ ಅಗತ್ಯ ಹೆಚ್ಚಿದೆ ಎಂದು ಹಿರಿಯ ಜಾನಪದ ವಿದ್ವಾಂಸರಾದ ಡಾ.ಜಿ.ವಿ. ಆನಂದಮೂರ್ತಿ ವಿಶ್ಲೇಷಿಸಿದರು.
ಜನಮುಖಿ ಬಳಗ ತುಮಕೂರು, ಗೋಪಿಕಾ ಪ್ರಕಾಶನ ಬೆಂಗಳೂರು ಇವರ ಸಹಯೋಗದಲ್ಲಿ ತುಮಕೂರಿನ ಜನ ಚಳವಳಿ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಡವನಹಳ್ಳಿ ವೀರಣ್ಣಗೌಡ ಅವರ ಉರಿವ ದೀಪದ ಕೆಳಗೆ ಕಥಾ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ದೇಶದ ಉದ್ದಗಲಕ್ಕೂ ಇಂದು ಸಾಂಸ್ಕೃತಿಕ ಅರಾಜಕತೆ ಹೆಚ್ಚುತ್ತಿದೆ. ಸಾಂಸ್ಕೃತಿಕ ಮತ್ತು ರಾಜಕೀಯ ಅರಾಜಕತೆಯ ನಡುವೆ ಸಾಹಿತ್ಯ ಕ್ಷೇತ್ರದಲ್ಲೂ ಅರಾಜಕತೆ ಸೃಷ್ಟಿಯಾಗಿದೆ. ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರö್ಯದ ದಮನವಾಗುತ್ತಿದೆ. ಹಿಂದಿನ ಚಿಂತನೆಗಳು ಮತ್ತು ಚರ್ಚೆಗಳು ಈಗ ನಡೆಯುತ್ತಿಲ್ಲ ಎಂದು ವಿಷಾದಿಸಿದರು.
ಹಿಂದೆ ಚಳವಳಿಗೂ ಭಾಷೆಗೂ ಅವಿನಾಭಾವ ಸಂಬAಧವಿತ್ತು. ಈಗ ಭಾಷಾ ಚಿಂತಕರು ಮತ್ತು ಸಾಮಾಜಿಕ ಚಿಂತಕರ ಕೊರತೆಯನ್ನು ಕಾಣುತ್ತಿದ್ದೇವೆ. ಬಡತನ, ಜಾತಿಯತೆ, ಅಸ್ಪೃಷ್ಯತೆ ವಿರುದ್ಧ ಹೋರಾಡಲು ಸಾಮಾಜಿಕ ಚಳುವಳಿ ಹುಟ್ಟಿದ್ದವು. ಈ ಎಲ್ಲ ಹೋರಾಟಗಳು ಈಗ ಕ್ಷೀಣವಾಗಿವೆ. ಚಳುವಳಿಗೆ ಬೆಲೆ ಇಲ್ಲವಾಗಿದೆ. ನಿರಂತರವಾಗಿ ರೈತರು ವರ್ಷಗಟ್ಟಲೆ ಚಳುವಳಿ ನಡೆಸುತ್ತಾ ಸಾವು ನೋವು ಸಂಭವಿಸಿದರೂ ಅದರ ಬಗ್ಗೆ ಚಕಾರವಿಲ್ಲದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇದರ ವಿರುದ್ಧ ಪ್ರತಿಭಟಿಸಬೇಕಾದ ಚಿಂತಕರು, ಸಾಮಾಜಿಕ ಮಾಧ್ಯಮಗಳ ಸಂಖ್ಯೆಯೂ ಕ್ಷೀಣಿಸುತ್ತಿದೆ ಎಂದರು.
ದೇಶವ್ಯಾಪಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಜಾತಿ ಆಧಾರಿತ ಸಂಘಟನೆಗಳು ಬೆಳೆಯುತ್ತಿವೆ. ಭಾಷೆ ಕೋಮುವಾದಿಕರಣವಾಗಿ ಮಲೀನವಾಗಿದೆ. ಇದನ್ನು ಮಾನವೀಕರಣಗೊಳಿಸುವ ಕೆಲಸವಾಗಬೇಕು. ದ್ವೇಷದ ಬರಹ, ಮಾತುಗಳನ್ನು ನಿಲ್ಲಿಸಿ ಮಾನವೀಯ ನೆಲೆಗಟ್ಟಿನ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಲೇಖಕರು ಚಿಂತಿಸಬೇಕಿದೆ. ಭಾಷೆಗೆ ಮಾನವೀಯತೆಯ ಸ್ಪರ್ಶ ತಂದುಕೊಡಲು ನಾವೆಲ್ಲಾ ಹೋರಾಡಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಕಲಾಕ್ಷೇತ್ರದ ಡಿ.ಎನ್.ದಿವಾಕರ್, ಶಿಕ್ಷಣ ಕ್ಷೇತ್ರದ ರಾಮಯ್ಯ, ಪುಸ್ತಕೋದ್ಯಮದ ಸಿದ್ದೇಶ್, ಅಗ್ನಿಶಾಮಕ ಸೇವೆಯ ಧರಣೇಶ್ ಅವರುಗಳನ್ನು ಸನ್ಮಾನಿಸಲಾಯಿತು. ಗಾಯಕ ಎಂ.ವೈ.ಗAಗಣ್ಣ ಅವರಿಂದ ಭಾವಗೀತೆಗಳ ಗಾಯನ ನಡೆಯಿತು. ಹೆಚ್.ಎಂ.ವಸAತಕುಮಾರ್ ಸ್ವಾಗತಿಸಿದರು.
(Visited 1 times, 1 visits today)