ತುಮಕೂರು: ನೊಂದ ಸಮಾಜದವರಿಗೆ ಉಳಿದ ಸಮಾಜದವರು ಧ್ವನಿಯಾಗಿ ಶಕ್ತಿ ತುಂಬಬೇಕು, ಪರಸ್ಪರ ನೆರವಾಗುತ್ತಾ ಸಹಬಾಳ್ವೆಯ ಸಮಾಜ ನಿರ್ಮಾಣ ಮಾಡಬೇಕು ಎಂದು ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು.
ಬುಧವಾರ ನಗರದ ವಿಘ್ನೇಶ್ವರ ಕಂಫರ್ಟ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸೇನೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾಚಿದೇವ ಸೌಹಾರ್ದ ಪತ್ತಿನ ಸಹಕಾರಿ ಅಧ್ಯಕ್ಷ ಶಾಂತಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿದ ಸ್ವಾಮೀಜಿ, ವಿವಿಧ ಜಾತಿಗಳು ಈ ಸಮಾಜದ ಬಳಗಗಳಿದ್ದಂತೆ. ಹಿಂದೆ ಕುಲಕಸುಬಿನ ಆಧಾರದಲ್ಲಿ ಜಾತಿಗಳು ಗುರುತಿಸಲ್ಪಟ್ಟಿದ್ದವು. ಆ ಎಲ್ಲಾ ಜಾತಿಯವರು ಊರಿನ ಜನರ ಹಿತಕ್ಕಾಗಿ ಸೌಹಾರ್ದತೆಯಿಂದ ತೊಡಗಿಕೊಂಡು ಆದರ್ಶವಾಗಿ ಬಾಳುತ್ತಿದ್ದರು. ಈಗಲೂ ಅದೇ ಬಾಂಧವ್ಯ ಜಾತಿಗಳ ನಡುವೆ ಬೆಳೆಯಬೇಕು ಎಂದು ಹೇಳಿದರು.
ಯಾವುದೇ ಸಮಾಜ ಇತರರನ್ನು ಅವಲಂಭಿಸದೆ ಸ್ವಂತ ಶಕ್ತಿ ಬೆಳೆಸಿಕೊಂಡು ಸರ್ಕಾರದ ವಿವಿಧ ಸೌಲಭ್ಯ, ಸ್ಥಾನಮಾನಗಳನ್ನು ಪಡೆಯುವಂತಾಗಬೇಕು. ಇಂತಹ ಶಕ್ತಿ ಬರಬೇಕೆಂದರೆ ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೆ ಅವರಿಗೆ ಸ್ಥಾನಮಾನಗಳು ಹುಡುಕಿಕೊಂಡು ಬರುತ್ತವೆ. ಮಡಿವಾಳ ಸಮಾಜದ ಶಾಂತಕುಮಾರ್ ಅವರನ್ನು ಇತರೆ ಹಿಂದುಳಿದ ಸಮಾಜದ ಮುಖಂಡರು ಸೇರಿ ಗೌರವಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇಂತಹ ಸಂಪ್ರದಾಯಗಳು ಹೆಚ್ಚಾಗಬೇಕು. ಇದರೊಂದಿಗೆ ಜಾತಿ-ಜಾತಿಗಳ ನಡುವೆ ಸೌಹಾರ್ದಯುತ ಬಾಂಧವ್ಯ ವೃದ್ಧಿಯಾಗುತ್ತದೆ ಎಂದರು.
ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಇಂತಹ ಕಾರ್ಯಕ್ರಮಗಳ ಮೂಲಕ ಹಿಂದುಳಿದ ವರ್ಗಗಳ ಸಣ್ಣಪುಟ್ಟ ಸಮಾಜಗಳು ಒಟ್ಟುಗೂಡಲು ಅವಕಾಶವಾಗುತ್ತದೆ. ಈ ಮೂಲಕ ಸಮಾಜಗಳನ್ನು ಸಂಘಟನೆ ಮಾಡಿಕೊಳ್ಳಬಹುದು. ಈ ಸಮಾಜಗಳ ನ್ಯಾಯಯುತ ಬೇಡಿಕೆಗಳ ಹೋರಾಟಗಳಿಗೆ ಹಿಂದುಳಿದ ವರ್ಗಗಳ ಒಕ್ಕೂಟ ಸದಾ ಜೊತೆಗಿರುತ್ತದೆ ಎಂದು ಹೇಳಿದರು.
ದೊಡ್ಡ ಇತಿಹಾಸ ಹೊಂದಿರುವ ಮಡಿವಾಳ ಸಮಾಜವು ಎಲ್ಲಾ ವರ್ಗದವರೊಂದಿಗೆ ಸಹಬಾಳ್ವೆಯಿಂದ ಬೆಳೆದುಬಂದಿದೆ. ಮಡಿವಾಳ ಮಾಚಿದೇವರು ಬಸವಣ್ಣನವರ ಸಮಕಾಲಿನ ಶರಣರು. ಸಮಸಮಾಜಕ್ಕಾಗಿ ಜಾಗೃತಿ ಮೂಡಿಸಿದವರು. ಈಗ ನಾವೆಲ್ಲಾ ಸೇರಿ ಅಂತಹ ಮಹನೀಯರ ಕಾರ್ಯಗಳನ್ನು ಮುಂದುವರೆಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಎಂ.ಕೆ.ವೆAಕಟಸ್ವಾಮಿ ಮಾತನಾಡಿ, ಸಮಾಜದಲ್ಲಿ ಯಾವುದೇ ಸಾಧನೆ ಮಾಡಿದವರು, ಸ್ಥಾನಮಾನ ಪಡೆದವರನ್ನು ಗುರುತಿಸಿ ಗೌರವಿಸುವುದು ಎಲ್ಲಾ ಸಮಾಜಗಳ ಕಾಳಜಿ ಆಗಬೇಕು. ಆ ಮೂಲಕ ಅವರು ಸಮಾಜಕ್ಕೆ ಹೆಚ್ಚು ಸೇವೆ ಮಾಡಲು ಪ್ರೋತ್ಸಾಹ ನೀಡುವುದಲ್ಲದೆ, ಇತರರಿಗೂ ಪ್ರೇರಣೆ ಆಗಬೇಕು ಎಂದು ಆಶಿಸಿದರು.
ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್, ಹಿರಿಯ ನ್ಯಾಯವಾದಿ ಆರ್.ಎನ್.ವೆಂಕಟಾಚಲ, ಕರಾಟೆ ಶಿಕ್ಷಕ ಕರಾಟೆ ಕೃಷ್ಣಮೂರ್ತಿ, ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಲಕ್ಷö್ಮಣ್, ಮುಖಂಡ ಕೊಪ್ಪಳ್ ನಾಗರಾಜು, ಸವಿತಾ ಸಮಾಜ ಜಿಲ್ಲಾಧ್ಯಕ್ಷ ಮಂಜೇಶ್ ಒಲಿಂಪಿಕ್, ಸಮಾಜ ಸೇವಕ ನಟರಾಜ ಶೆಟ್ಟಿ, ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಕೃಷ್ಣಮೂರ್ತಿ ಮಾತನಾಡಿದರು. ಮಾಚಿದೇವ ಸೌಹಾರ್ದ ಪತ್ತಿನ ಸಹಕಾರಿಯ ಅಧ್ಯಕ್ಷ ಶಾಂತಕುಮಾರ್, ವಿವಿಧ ಸಮಾಜಗಳ ಮುಖಂಡರಾದ ಲಕ್ಷಿö್ಮÃಕಾಂತರಾಜೇ ಅರಸು, ಗುರುರಾಘವೇಂದ್ರ, ಉದಯ್, ಸಂತೋಷ್, ರಾಮಚಂದ್ರರಾವ್, ಶಬ್ಬೀರ್ ಅಹ್ಮದ್, ಮೀಸೆ ಸತೀಶ್, ನಟರಾಜ್ ಭಾಗವಹಿಸಿದ್ದರು.
(Visited 1 times, 1 visits today)