ಚಿಕ್ಕನಾಯಕನಹಳ್ಳಿ: ಹೆಣ್ಣು ಮಕ್ಕಳೆಂದರೆ ಶೋಷಣೆ ಎಂದಿಗೂ ಆಗಬಾರದು ಮಹಿಳೆಯ ದಿಟ್ಟತನದ ಆತ್ಮಸ್ಥೈರ್ಯದ ಮೂಲಕ ದೇಶದ ಪ್ರಗತಿ ಕೂಡ ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕ್ ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಎಸ್ ಟಿ ಸತೀಶ್ ಹೇಳಿದರು
ನಗರದ ರೋಟರಿ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿ ಸಿ ಟ್ರಸ್ಟ್ ಮತ್ತು ವಕೀಲರ ಸಂಘದ ಸಂ ಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇಂದು ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಮಾರ್ಚ್ ೮ರಂದೆ ಕಾರ್ಯಕ್ರಮ ಮಾಡಬೇಕಿತ್ತು ನ್ಯಾಯಾಲಯದಲ್ಲಿ ಲೋಕ ಅಗಲ ಇದ್ದ ಕಾರಣ ಸಾಧ್ಯವಾಗಲಿಲ್ಲ ಪ್ರತಿ ಮಹಿಳೆಗೂ ನಾನಾ ರೀತಿಯ ಅಡಚಣೆಗಳು ಸರ್ವೆ ಸಾಮಾನ್ಯವಾಗಿವೆ ಮಹಿಳೆಯ ಅಸಮಾ ನತೆಯಿಂದ ದೌರ್ಜನ್ಯಕ್ಕೆ ಹೆಚ್ಚು ಒಳಗಾಗಿರುವುದು ಇಲ್ಲಿ ಪುರುಷ ಮತ್ತು ಮಹಿಳೆ ಎಂಬ ಯಾರಿಗೂ ಕೀಳರಿಮೆ ಇರಬಾರದು ದಿನನಿತ್ಯದ ಜೀವನ ದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವುದು ಅತ್ಯವಶ್ಯಕ ಪ್ರತಿ ವ್ಯಕ್ತಿಯ ಯಶಸ್ಸಿನ ಹಿಂದೆ ಮಹಿಳೆ ಬೆನ್ನೆಲುಬಾಗಿ ಇರುತ್ತಾಳೆ ಎಂಬ ಮಾತನ್ನು ಪುರುಷರು ಕೂಡ ಮರೆಯಬಾರದು ಎಂದು ನಾಲ್ಕು ಹೆಣ್ಣು ಮಕ್ಕಳು ಹುಟ್ಟಿದ್ದವಲ್ಲ ಎಂದು ಮಹಿಳೆ ದೃತಿಗೆಡದೆ ಗಂಡನನ್ನು ಧಿಕ್ಕರಿಸಿ ಆ ನಾಲ್ಕು ಮಕ್ಕಳಿಗೆ ಭವಿಷ್ಯ ರೂಪಿಸುವ ಮೂಲಕ ಸಮಾಜಕ್ಕೆ ಮಾದರಿಯಾದ ಹೆಣ್ಣಿನ ಕಥೆಯನ್ನು ಹೇಳುವ ಮೂಲಕ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬಿದರು
ರೋಟರಿ ಸಂಸ್ಥೆ ಅಧ್ಯಕ್ಷ ಲಿಂಗದೇವರು ಮಾತನಾಡಿ ಹೆಣ್ಣು ವಿದ್ಯೆ ಕಲಿತರೆ ಸಂಸಾರ ಅದ್ಭುತವಾಗಿರುತ್ತದೆ ಜೊತೆಗೆ ನಮ್ಮ ದೇಶ ಮತ್ತು ವಿಶ್ವ ಸದೃಢವಾಗುತ್ತದೆ ಭೌತಿಕ ಆರ್ಥಿಕ ಸಾಂಸ್ಕೃತಿಕವಾಗಿ ಮಹಿಳೆ ಶಕ್ತಿಯುತಳಾಗಬೇಕು ಎಂದರು
ಸರ್ಕಾರಿ ಸಹಾಯಕ ಅಭಿಯೋಜಕರಾದ ಚಿತ್ರಗಾರ ವಿಜಯಲಕ್ಷ್ಮಿ ಸಂಪನ್ಮೂಲನ ವ್ಯಕ್ತಿಯಾಗಿ ಮಾತನಾಡುತ್ತಾ ಮಹಿಳೆಯರು ಹಕ್ಕು ಸಮಾನತೆ ಸಮೀಕರಣಕ್ಕಾಗಿ ವಿಶ್ವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ರೂಪಗೊಂಡಿತು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ನ ಯೋಜನಾಧಿಕಾರಿ ಎಲ್ ಪ್ರೇಮಾನಂದ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮಹಿಳೆಗೆ ತಾಯಿ ಅಮ್ಮ ಅಕ್ಕ ಸಹೋದರಿ ಹೆಂಡತಿ ಇಂತಹ ಮಾನವೀಯ ಮೌಲ್ಯ ಹೊತ್ತು ಬರುವ ಹೆಣ್ಣು ಹುಟ್ಟಿದ ಮನೆಗೂ ಮತ್ತೊಂದು ಮನೆಯ ಬೆಳಕಾಗುವ ಮಹಿಳೆಯನ್ನು ನಾವು ಎಂದು ತಿರಸ್ಕರಿಸಬಾರದು ಎಂದರು
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷ ಜಿ ಲಿಂ ಲಿಂಗದೇವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಎಲ್ ಪ್ರೇಮಾನಂದ್ ಸಹಾಯಕ ಸರ್ಕಾರಿ ಅಭಿಯೋಜಕರಾದ ಚಿತ್ರಗಾರ ವಿಜಯಲಕ್ಷ್ಮಿ ಹಾಗೂ ಮೇಲ್ವಿಚಾರಕ ಭಾಸ್ಕರ್ ರಾವ್ ಉಪಸ್ಥಿತರಿದ್ದರು.
(Visited 1 times, 1 visits today)