ತುಮಕೂರು: ಋಷಿಮುನಿಗಳು ನೀಡುತ್ತಿದ್ದ ಗುರುಕುಲ ಶಿಕ್ಷಣ ವ್ಯವಸ್ಥೆಯಿಂದ ಹಿಡಿದು ಇಂದಿನ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಗೆ ಹೊಂದಿಕೊAಡಿರುವ ಶಿಕ್ಷಣ ವ್ಯವಸ್ಥೆಯಡಿ ನೀಡುತ್ತಿರುವ ತಂತ್ರಜ್ಞಾನದ ಶಿಕ್ಷಣವು ಮೌಲ್ಯ ಯುತ, ಸಂಸ್ಕಾರಯುತವಾಗಿರಬೇಕು ಆಗಾ ಸಮಾಜದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಕಾಣಬಹುದಾಗಿದೆ ಎಂದು ತುಮಕೂರು ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿಗಳಾದ ಮರಿಯಪ್ಪ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ವಿವೇಕ ವಾಣಿ ಟ್ರಸ್ಟ್ ವತಿಯಿಂದ ಮೂರನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಮಾನವನಿಗೆ ಸಂಸ್ಕಾರಯುತ ಶಿಕ್ಷಣ ಬಹಳ ಮುಖ್ಯವಾಗಿದ್ದು ಮಗುವಿನ ನಡೆ ನುಡಿ ಬಗ್ಗೆ ಪೋಷಕರು ಗಮನ ಹರಿಸಬೇಕು ಕೆಲಸದ ಒತ್ತಡದ ನಡುವೆ ಮಕ್ಕಳು ಕಲಿಯುತ್ತಿರುವ ಶಿಕ್ಷಣದ ಬಗ್ಗೆ ಕಾಳಜಿ ವಹಿಸಿದಾಗ ಮಕ್ಕಳು ಅತ್ಯುತ್ತಮವಾಗಿ ಸಂಸ್ಕಾರಯುತ ಶಿಕ್ಷಣವನ್ನು ಪಡೆಯುತ್ತಾರೆ, ಬದಲಾಗುತ್ತಿರುವ ಆಧುನಿಕ ಶಿಕ್ಷಣ ವ್ಯವಸ್ಥೆ ಗಳಿಂದಾಗಿ ಪೋಷಕರೇ ಮಕ್ಕಳನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ. ಎಸ್ .ಸಿದ್ದಲಿಂಗಪ್ಪ ಅವರು ಮಾತನಾಡುತ್ತ ನಮ್ಮ ದೇಶದಲ್ಲಿ ಇಂದು ಇಂಗ್ಲಿಷ್ ಶಿಕ್ಷಣ ವ್ಯವಸ್ಥೆ ಎಲ್ಲೆಡೆ ರಾರಾಜಿಸುತ್ತಿದೆ ವಿವೇಕವಾಣಿಯ ಶಾಲಾ ಮಕ್ಕಳು ಭಗವದ್ಗೀತೆಯನ್ನು ನಿರರ್ಗಳವಾಗಿ ಹಾಡಿದ್ದು ಗಮನ ಸೆಳೆದಿದ್ದು ಶಿಕ್ಷಣ ಸಂಸ್ಥೆಗಳು ಕೇವಲ ಆಧುನಿಕ ಶಿಕ್ಷಣ ವ್ಯವಸ್ಥೆಗಳನ್ನು ಮೈಗೂಡಿಸಿಕೊಳ್ಳುವ ಜೊತೆ ಜೊತೆಗೆ ಕನ್ನಡ ಭಾಷೆಯ ಸಾಹಿತ್ಯ ಕೃತಿ ರಚನೆ ಇತ್ಯಾದಿಗಳನ್ನು ಪರಿಚಯಿಸುವ ಕೆಲಸ ಮಾಡಬೇಕು, ಶಾಲಾ ವಾರ್ಷಿಕೋತ್ಸವವು ಕುಟುಂಬದ ಪರಿಕಲ್ಪ ನೆಯನ್ನು ನೆನಪಿಸುತ್ತದೆ ಪೋಷಕರು ಸ್ಪರ್ಧಾ ತ್ಮಕವಾಗಿ ಮಕ್ಕಳನ್ನು ಬೆಳೆಸದೆ ಅಂಕ ತೆಗೆ ಯಬೇಕು ಎಂಬ ಒತ್ತಡಗಳನ್ನ ಹಾಕದೆ ಆಮೀಷವನ್ನು ನೀಡದೆ ನೈಜ್ಯವಾಗಿ ಶಿಕ್ಷಣವನ್ನ ಕಲಿಸಲು ಬಿಡಬೇಕು ಸವಾಲುಗಳನ್ನು ಎದುರಿಸಿ ಸ್ಪರ್ಧಾತ್ಮಕವಾಗಿ ಪ್ರತಿಕ್ರಿಯಿಸುವ ವ್ಯವಸ್ಥೆಯನ್ನು ಕಲಿಸಬೇಕು ಅಂಬೇಡ್ಕರ್ ವಿಶ್ವೇಶ್ವರಯ್ಯ ಅವರು ಆಧುನಿಕ ಶಿಕ್ಷಣ ವ್ಯವಸ್ಥೆ
ಇಲ್ಲದೆ ಸ್ಥಳೀಯ ಭಾಷೆಯ ಶಿಕ್ಷಣಗಳನ್ನ ಕಲಿತು ಬೆಳೆದವರು ಅಂತಹವರ ಆದರ್ಶಗಳನ್ನ ಮಕ್ಕಳಲ್ಲಿ ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಅತಿ ಹೆಚ್ಚು ಕನ್ನಡ ಭಾಷೆ ಮತ್ತು ಕನ್ನಡ ವಿಷಯಧಾರಿತ ಶಿಕ್ಷಣ ವ್ಯವಸ್ಥೆಗಳನ್ನು ಕಲ್ಪಿಸಲು ಮುಂದಾಗಬೇಕು ಎಂದು ತಿಳಿಸಿದರು. ನಂತರ ವಿ ಟು ಫ್ರೀಪ್ರೇಮರಿ ಶಾಲೆಯ ಮಕ್ಕಳಿಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ರವರಿಗೆ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಮಾರಂಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಇ. ರಘುರಾಮ್, ವಿವೇಕ ವಾಣಿ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಬಿ.ಆರ್. ವಾಣಿ, ಟ್ರಸ್ಟ್ ನ ಕಾರ್ಯದರ್ಶಿ ರಾಜು, ಶಾಲೆಯ ಶಿಕ್ಷಕವೃಂದದವರು ಹಾಗೂ ಪೋಷಕರು ಉಪಸ್ಥಿತರಿದ್ದರು.
(Visited 1 times, 1 visits today)